ಕೇರಳ: ವಿವಾದಾತ್ಮಕ ಪೊಲೀಸ್ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಗೀಕಾರ

ಪ್ರಸ್ತುತ ಇರುವ ಕಾನೂನು ಸೈಬರ್‌ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುವ ಸರ್ಕಾರ, ಪೊಲೀಸ್‌ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಂಡಿದೆ.
ಕೇರಳ: ವಿವಾದಾತ್ಮಕ ಪೊಲೀಸ್ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಗೀಕಾರ

ಹಲವು ವಿರೋಧಗಳ ನಡುವೆಯೂ ಕೇರಳ ರಾಜ್ಯಪಾಲ ಆರಿಫ್‌ ಮಹಮ್ಮದ್‌ ಖಾನ್‌ ವಿವಾದಾತ್ಮಕ ಕೇರಳ ಪೊಲೀಸ್‌ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ. ಬೆದರಿಕೆ, ನಿಂದನೆ, ಅವಮಾನಕರ ಅಥವಾ ಮಾನಹಾನಿಕರ ವಿಷಯಗಳನ್ನು ಪ್ರಕಟಿಸುವುದು, ಪ್ರಸಾರಿಸುವುದನ್ನು ತಡೆಯಲು ಈ ಕಾನೂನು ಸಹಾಯಕಾರಿಯಾಗುತ್ತದೆ ಎಂದು ಕೇರಳ ಸರ್ಕಾರ ಹೇಳಿಕೊಂಡಿದೆ.

ಕೇರಳ ಪೊಲೀಸ್ ಕಾಯ್ದೆಯಲ್ಲಿ 118 (ಎ) ಎಂಬ ಹೊಸ ವಿಭಾಗವನ್ನು ಒಳಗೊಂಡಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ರಾಜಭವನ ಶನಿವಾರ ದೃಢಪಡಿಸಿದೆ. ಪೊಲೀಸ್‌ ಕಾಯ್ದೆಗೆ ಹೆಚ್ಚಿನ ಅಧಿಕಾರ ನೀಡುವ 118-ಎ ವಿಭಾಗವನ್ನು ಸೇರಿಸಲು ಕೇರಳ ಕ್ಯಾಬಿನೆಟ್‌ ಕಳೆದ ತಿಂಗಳು ಶಿಫಾರಸ್ಸು ಮಾಡಿತ್ತು. ಇದರ ಪ್ರಕಾರ ಆನ್‌ಲೈನಿನಲ್ಲಿ ಆಕ್ರಮಣಕಾರಿ, ಆಕ್ಷೇಪಾರ್ಹ ಕಮೆಂಟ್‌, ಪೋಸ್ಟ್‌ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯಪಾಲರು ಸಹಿ ಹಾಕಿದ ಸುಗ್ರಿವಾಜ್ಞೆ ಪ್ರಕಾರ ಮೇಲೆ ಹೇಳಿರುವ ಅಪರಾಧಗಳನ್ನು ಮಾಡಿರುವುದು ಸಾಬೀತಾದರೆ ಅಂತಹವರ ವಿರುದ್ಧ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಅಥವಾ 10000 ದಂಡ ಅಥವಾ ಇವೆರಡನ್ನೂ ನ್ಯಾಯಾಲಯ ವಿಧಿಸಬಹುದಾಗಿದೆ.

ಈ ಕಾನೂನನ್ನು ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಇದು ನಿರ್ಭೀತ ಪತ್ರಕರ್ತರಿಗೆ ಬೆದರಿಕೆಯಾಗಬಹುದು, ಅಥವಾ ರಾಜಕೀಯ ವಿರೋಧಿಗಳನ್ನು ಮಣಿಸಲು ಇದನ್ನು ದುರ್ಬಳಕೆ ಮಾಡಬಹುದೆಂದು ಪ್ರತಿಪಕ್ಷಗಳು ಆರೋಪಿಸಿದೆ. ಈ ಆರೋಪಗಳನ್ನು ನಿರಾಕರಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ವ್ಯಕ್ತಿಗಳ ಚಿತ್ರಣವನ್ನು ಕಳಂಕಿತಗೊಳಿಸಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುವಂತಹ ಅಂಶಗಳನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಕೇರಳದ ಈ ಕ್ರಮವು ದುರ್ಬಳಕೆ ಆಗುವ ಸಾಧ್ಯತೆಯನ್ನು ಕಾನೂನು ತಜ್ಞರು ಎಚ್ಚರಿಸಿದ್ದಾರೆ.

COVID-19 ಪ್ರಾರಂಭವಾದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಅಪರಾಧ ಮಟ್ಟ ಹೆಚ್ಚುತ್ತಿದೆ, ನಕಲಿ ಪ್ರಚಾರ ಮತ್ತು ದ್ವೇಷದ ಭಾಷಣ ನಿಯಂತ್ರಿಸಲು ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರ್ಕಾರ ಹೇಳಿದೆ.

ಪ್ರಸ್ತುತ ಇರುವ ಕಾನೂನು ಸೈಬರ್‌ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುವ ಸರ್ಕಾರ, ಪೊಲೀಸ್‌ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಂಡಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com