ದೇಶವನ್ನು ವಿಭಜಿಸಲು ಲವ್ ಜಿಹಾದ್ ಪದವನ್ನು ಸೃಷ್ಟಿಸಲಾಗಿದೆ: ಗೆಹ್ಲೋಟ್

ವಯಸ್ಕರನ್ನು ರಾಜ್ಯಾಧಿಕಾರದ ಮರ್ಜಿಯಲ್ಲಿರಬೇಕಾದಂತಹ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಮದುವೆ ಅನ್ನುವುದು ವೈಯಕ್ತಿಕ ಸ್ವಾತಂತ್ರ್ಯದ ವಿಷಯ, ಅದನ್ನು ಹತ್ತಿಕ್ಕಲು ಕಾನೂನು ರೂಪಿಸುವುದು ಸಂಪೂರ್ಣ ಅಸಾಂವಿಧಾನಿಕ
ದೇಶವನ್ನು ವಿಭಜಿಸಲು ಲವ್ ಜಿಹಾದ್ ಪದವನ್ನು ಸೃಷ್ಟಿಸಲಾಗಿದೆ: ಗೆಹ್ಲೋಟ್

ಲವ್‌ ಜಿಹಾದ್‌ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋಟ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಲವ್‌ ಜಿಹಾದ್‌ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದೆ, ಕೋಮು ಸೌಹಾರ್ದಕ್ಕೆ ಭಂಗ ತರುವ ಕೆಲಸ ಮಾಡುತ್ತಿದೆ ಎಂದು ಗೆಹ್ಲೋಟ್‌ ಹೇಳಿದ್ದಾರೆ. ತಮ್ಮ ಸಂಗಾತಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ನಾಗರಿಕರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಹೊರಟಿದೆಯೆಂದು ಗೆಹಲೋಟ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಯಸ್ಕರನ್ನು ರಾಜ್ಯಾಧಿಕಾರದ ಮರ್ಜಿಯಲ್ಲಿರಬೇಕಾದಂತಹ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಮದುವೆ ಅನ್ನುವುದು ವೈಯಕ್ತಿಕ ಸ್ವಾತಂತ್ರ್ಯದ ವಿಷಯ, ಅದನ್ನು ಹತ್ತಿಕ್ಕಲು ಕಾನೂನು ರೂಪಿಸುವುದು ಸಂಪೂರ್ಣ ಅಸಾಂವಿಧಾನಿಕ, ಇಂತಹ ಪ್ರಕರಣ ಯಾವುದೇ ನ್ಯಾಯಲಯದಲ್ಲಿ ನಿಲ್ಲುವುದಿಲ್ಲ, ಜಿಹಾದ್‌ ಗೆ ಪ್ರೀತಿಯಲ್ಲಿ ಯಾವುದೇ ಸ್ಥಾನವಿಲ್ಲವೆಂದು ಅವರು ಹೇಳಿದ್ದಾರೆ.

ಅಶೋಕ್‌ ಗೆಹ್ಲೋಟ್‌ಗೆ ಪ್ರತಿಕ್ರಿಯಿಸಿದ ಕೇಂದ್ರ ಮಂತ್ರಿ ಗಜೇಂದ್ರ ಸಿಂಗ್‌ ಶೇಖಾವತ್‌, ಲವ್‌ ಜಿಹಾದ್‌ ಷಡ್ಯಂತ್ರಕ್ಕೆ ಸಾವಿರಾರು ಯುವತಿಯರು ಬಲಿಯಾಗಿದ್ದಾರೆ. ಮಹಿಳೆಯರು ತಮ್ಮ ಧರ್ಮವನ್ನೇ ಅನುಸರಿಸುವುದು ಕೂಡಾ ವೈಯಕ್ತಿಕ ಸ್ವಾತಂತ್ರದಡಿಯಲ್ಲಿ ಬರಬೇಕು ಎಂದು ಹೇಳಿದ್ದಾರೆ.

ದೇಶವನ್ನು ವಿಭಜಿಸಲು ಲವ್ ಜಿಹಾದ್ ಪದವನ್ನು ಸೃಷ್ಟಿಸಲಾಗಿದೆ: ಗೆಹ್ಲೋಟ್
ಲವ್‌ ಜಿಹಾದ್‌ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯ ನಿರಾಕರಿಸುವ ಷಡ್ಯಂತ್ರ್ಯ -AILAJ

ಫೆಬ್ರವರಿಯಲ್ಲಿ, ಕೇಂದ್ರ ಗೃಹ ಸಚಿವಾಲಯವು ಸಂಸತ್ತಿನಲ್ಲಿ "ಲವ್ ಜಿಹಾದ್ ಅನ್ನು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿಲ್ಲ" ಮತ್ತು ಅಂತಹ ಯಾವುದೇ ಪ್ರಕರಣವನ್ನು ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಹೇಳಿದ್ದರೂ ಅದೇ ಸರ್ಕಾರದ ಮಂತ್ರಿ ಗಜೇಂದ್ರ ಸಿಂಗ್‌ ಲವ್‌ ಜಿಹಾದ್‌ ಬಗ್ಗೆ ನೀಡಿರುವ ವ್ಯತಿರಿಕ್ತ ಹೇಳಿಕೆಗಳು ಬಿಜೆಪಿ ಹಾಗೂ ಅದರ ನಾಯಕರ ವಿರೋಧಾಭಾಸವನ್ನು ತೋರಿಸುತ್ತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com