ತಮಿಳುನಾಡು: ಆತ್ಮಹತ್ಯೆಗೆ ಯತ್ನಿಸಿದ ಡಿಎಂಕೆ ಶಾಸಕಿ

ಅನಿಯಮಿತ ನಿದ್ರೆ ಮಾತ್ರೆಗಳನ್ನು ಸೇವಿಸಿದ ಶಾಸಕಿ, ಗುರುವಾರ ಮುಂಜಾನೆ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ತನ್ನ ಮನೆಯಲ್ಲಿ ಪತ್ತೆಯಾಗಿದ್ದರು ಎಂದು ಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ.
ತಮಿಳುನಾಡು: ಆತ್ಮಹತ್ಯೆಗೆ ಯತ್ನಿಸಿದ ಡಿಎಂಕೆ  ಶಾಸಕಿ

ತಮಿಳುನಾಡು ಮಾಜಿ ಡಿಎಂಕೆ ಸಚಿವೆ, ಶಾಸಕಿ ಪೂಂಗುದೈ ಅಲಾಡಿ ಅರುಣಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಪ್ರಜ್ಞಾವಸ್ಥೆಯಲ್ಲಿದ್ದ ಶಾಸಕಿಯನ್ನು ತಿರುನಾಲ್ವೇಲಿಯ ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ರಾತ್ರಿ ಅನಿಯಮಿತ ನಿದ್ರೆ ಮಾತ್ರೆಗಳನ್ನು ಸೇವಿಸಿದ ಶಾಸಕಿ, ಗುರುವಾರ ಮುಂಜಾನೆ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ತನ್ನ ಮನೆಯಲ್ಲಿ ಪತ್ತೆಯಾಗಿದ್ದರು ಎಂದು ಡಿಎಂಕೆ ಪಕ್ಷದ ಮೂಲಗಳು ತಿಳಿಸಿವೆ.

ಶಾಸಕಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ವೈದ್ಯರ ತಂಡ ನಿರಂತವಾಗಿ ನಿಗಾ ವಹಿಸುತ್ತಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಶಿಫಾ ಆಸ್ಪತ್ರೆಯ ವೈದ್ಯ ಮಹಮದ್‌ ಅರಫತ್‌ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅರುಣಾ ಅವರಿಗೆ ಬೇರೆ ಲಕೆಲವು ಆರೋಗ್ಯ ಸಮಸ್ಯೆಗಳಿದ್ದು, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದಾರೆ. ಅದಾಗ್ಯೂ ಅವರು ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ವೈದ್ಯರು ತಿಳಿಸಿರುವುದಾಗಿ ಅರುಣಾ ಅವರ ಗಂಡ ಡಾ. ಬಾಲಾಜಿ ಹೇಳಿದ್ದಾರೆ.

ಶಾಸಕಿ, ತನ್ನ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಲಹದಿಂದ ನೊಂದಿದ್ದರು ಎಂದು ಪಕ್ಷದ ಸ್ಥಳೀಯ ಕಾರ್ಯಕರ್ತರು ಹೇಳಿದ್ದಾರೆ. ಪಕ್ಷದ ಸಭೆ ನಡೆಯುವ ವೇಳೆ, ಶಾಸಕಿಯ ವಿರೋಧಿ ಬಣದವರ ಟೀಕೆಗೆ ಹಾಗೂ ನಿಂದೆಗೆ ಗುರಿಯಾಗಿದ್ದರು, ಆಕೆ ಭಾಷಣ ಮಾಡುವಾಗ ಆಕೆಯ ಮೈಕನ್ನು ಬಂದ್‌ ಮಾಡಿ ಅವಮಾನಿಸಲಾಗಿತ್ತು ಎಂದು ಕಾರ್ಯಕರ್ತರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com