ಕರ್ನಾಟಕದ IPS ಅಧಿಕಾರಿ ರೂಪಾರನ್ನು ಅಮಾನತು ಮಾಡುವಂತೆ ಕಂಗನಾ ಆಗ್ರಹ

ಡಿ. ರೂಪಾರವರ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ ಕಂಗನಾ “ನೀವೆಲ್ಲಾ ಮೀಸಲಾತಿಯ ಅಡ್ಡಪರಿಣಾಮಗಳು” ಎಂದು ಹಿಯಾಳಿಸಿದ್ದಾರೆ
ಕರ್ನಾಟಕದ IPS ಅಧಿಕಾರಿ ರೂಪಾರನ್ನು ಅಮಾನತು ಮಾಡುವಂತೆ ಕಂಗನಾ ಆಗ್ರಹ

ಕರ್ನಾಟಕದ ಐಪಿಎಸ್‌ ಅಧಿಕಾರಿ ಡಿ ರೂಪಾ ಅವರನ್ನು ಅಮಾನತು ಮಾಡುವಂತೆ ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರಣಾವತ್‌ ಆಗ್ರಹಿಸಿದ್ದಾರೆ. ಇಂತಹ ಪೊಲೀಸ್‌ ಅಧಿಕಾರಿಗಳು ಪೊಲೀಸ್‌ ಪಡೆಗೆ ಅಪಮಾನಕಾರಿ #ShameOnYouIPSRoopa ಎಂದು ಟ್ವೀಟ್‌ ಮಾಡಿದ್ದಾರೆ.

ದೀಪಾವಳಿ ಪಟಾಕಿ ನಿಷೇಧವನ್ನು ಸ್ವಾಗತಿಸಿದ್ದ ರೂಪಾ, ಪಟಾಕಿ ಹಿಂದೂ ಧರ್ಮದ ಸಂಸ್ಕೃತಿಯಲ್ಲವೆಂದು ಟ್ವೀಟ್‌ ಮಾಡಿದ್ದರು. ಇದನ್ನು ಹಿಂದೂ ಬಲಪಂಥೀಯ ಶಕ್ತಿಗಳು ವಿರೋಧಿಸಿದ್ದು, ನಟಿ ಕಂಗನಾ ಕೂಡಾ ವಿರೋಧಿಸಿದ್ದಾರೆ.

ಈ ನಡುವೆ ರೂಪಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲ್ಪಟ್ಟ ಎರಡು ನಕಲಿ ಅಕೌಂಟ್‌ಗಳನ್ನು ಟ್ವಿಟರ್‌ ರದ್ದುಗೊಳಿಸಿತ್ತು. ಈ ಎರಡು ಅಕೌಂಟ್‌ಗಳನ್ನು ಮರಳಿ ಸ್ಥಾಪಿಬೇಕೆಂದು ಬಲಪಂಥೀಯ ಬೆಂಬಲಿಗರು ಟ್ವಿಟರ್‌ ಟ್ರೆಂಡ್‌ ಮಾಡಿದ್ದಾರೆ.

ಇದನ್ನು ಬೆಂಬಲಿಸಿದ ಕಂಗನಾ ರಣಾವತ್‌‌, ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಐಪಿಎಸ್‌ ರೂಪಾರಂತವರನ್ನು ನೇಮಿಸುತ್ತದೆ. ಆದರೆ ಆಕೆಯ ಅಜ್ಞಾನವನ್ನು ನೋಡಿ, ಸತ್ಯದೊಂದಿಗೆ ವಾದ ಮಾಡಿ ಗೆಲ್ಲಲಾಗದೆ ಅಕಂಟ್‌ಗಳನ್ನು ಬ್ಲಾಕ್‌ ಮಾಡಿಸುತ್ತಿದ್ದಾರೆ. ನಾಚಿಕೆ ಆಗಬೇಕು ರೂಪಾ ಅವರೆ ನಿಮಗೆ ಎಂದು ಕಂಗನಾ ಇನ್ನೊಂದು ಟ್ವೀಟಿನಲ್ಲಿ ಹೇಳಿದ್ದಾರೆ.

ದೀಪಾವಳಿ ಪಟಾಕಿಯಿಂದ ಮೀಸಲಾತಿ ಚರ್ಚೆಯವರೆಗೆ..

ಸಂಘಪರಿವಾರದ ಪರಿಭಾಷೆಯಲ್ಲಿ ಮಾತನಾಡುವ, ಬಲಪಂಥೀಯ ಧೋರಣೆಯಲ್ಲಿ ವಿಷಯಗಳನ್ನು ನಿರೂಪಿಸುವ ಕಂಗನಾ, ಈ ಚರ್ಚೆಯಲ್ಲಿ ಅನಗತ್ಯವಾಗಿ ಮೀಸಲಾತಿಯನ್ನು ಎಳೆದು ತಂದು, ಮೀಸಲಾತಿಯ ಮೇಲೆ ತಮಗಿರುವ ಅಸಹನೆಯನ್ನು ಹೊರ ಹಾಕಿದ್ದಾರೆ.

ಕರ್ನಾಟಕದ IPS ಅಧಿಕಾರಿ ರೂಪಾರನ್ನು ಅಮಾನತು ಮಾಡುವಂತೆ ಕಂಗನಾ ಆಗ್ರಹ
ಕಂಗನಾ ವಿರುದ್ದ FIR ದಾಖಲಿಸುವಂತೆ ನಿರ್ದೇಶನ ನೀಡಿದ ತುಮಕೂರು ನ್ಯಾಯಾಲಯ

ಡಿ.ರೂಪರವರ ವಿರುದ್ಧ ಸರಣಿ ಟ್ವೀಟ್‌ಗಳನ್ನು ಮಾಡಿದ ಕಂಗನಾ “ನೀವೆಲ್ಲಾ ಮೀಸಲಾತಿಯ ಅಡ್ಡಪರಿಣಾಮಗಳು” ಎಂದು ಹಿಯಾಳಿಸಿದ್ದಾರೆ. ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಸಮಾಜದಲ್ಲಿನ ಗಾಯಗಳನ್ನು ಶಮನಗೊಳಿಸುವ ಬದಲು ಮತ್ತಷ್ಟು ವ್ರಣಗೊಳಿಸುತ್ತಾರೆ. ರೂಪರವರ ವೈಯಕ್ತಿಕ ಬದುಕಿನ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ, ಆದರೆ ಅವರು ತಮ್ಮ ಅಸಾಮರ್ಥ್ಯದಿಂದಾಗಿ ಹತಾಶೆಗೊಳಗಾಗಿರುವುದಂತೂ ಖಾತ್ರಿ ಇದೆ” ಎಂದು ಟ್ವೀಟ್‌ ಮಾಡಿದ್ದಾರೆ.

ಕಂಗನಾರ ಈ ಟ್ವೀಟ್‌ ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ. ಮೀಸಲಾತಿಯ ಉದ್ದೇಶ ಹಾಗೂ ಅವಶ್ಯಕತೆಯೇ ಗೊತ್ತಿಲ್ಲದೆ ಕಂಗನಾ ಟ್ವೀಟ್‌ ಮಾಡುತ್ತಿದ್ದಾರೆಂದು ನೆಟ್ಟಿಗರು ಕಂಗನಾರಿಗೆ ಟೀಕಿಸಿದ್ದಾರೆ. ಅಲ್ಲದೆ ಬ್ರಾಹ್ಮಣ ಸಮುದಾಯದವರಾಗಿರುವ ರೂಪಾ ಅವರು ಮೀಸಲಾತಿ ಮೂಲಕ ಬಂದವರಲ್ಲ, ಮೀಸಲಾತಿಯ ಬಗ್ಗೆ ಕಂಗನಾರಿಗಿರುವ ಪೂರ್ವಾಗ್ರಹಪೀಡಿತ ಚಿಂತನೆಯೇ ಅವರನ್ನು ಈ ರೀತಿ ಪ್ರತಿಕ್ರಿಯಿಸಲು ಪ್ರೇರೇಪಿಸಿದೆ ಎಂದು ಕಂಗನಾರ ವಿರುದ್ಧ ಟ್ವೀಟ್‌ ಮಾಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com