ಸಂಪುಟ ವಿಸ್ತರಣೆಗೆ ದೆಹಲಿ ಭೇಟಿ: ಬರಿಗೈಲಿ ಹಿಂದಿರುಗಿದ ಯಡಿಯೂರಪ್ಪ

ಖಾಲಿ ಇರುವ ಏಳು ಮಂತ್ರಿ ಸ್ಥಾನಗಳಿಗೆ, ಹಲವಾರು ಮಂತ್ರಿಸ್ಥಾನ ಆಕಾಂಕ್ಷಿಗಳು ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಒಳ-ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಯಡಿಯೂರಪ್ಪ ಸಂಧಿಗ್ದ ಪರಿಸ್ಥಿತಿಯಲ್ಲಿದ್ದಾರೆ
ಸಂಪುಟ ವಿಸ್ತರಣೆಗೆ ದೆಹಲಿ ಭೇಟಿ: ಬರಿಗೈಲಿ ಹಿಂದಿರುಗಿದ ಯಡಿಯೂರಪ್ಪ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲು ಅಥವಾ ಪುನರ್ರಚಿಸಲು ಅನುಮತಿ ನೀಡದ ಕಾರಣ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ದೆಹಲಿಯಿಂದ ಬರಿಗೈಯಲ್ಲಿ ಮರಳಬೇಕಾಯಿತು.

ಡಿಸೆಂಬರ್ 7 ರಂದು ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ತಮ್ಮ ಸಂಪುಟವನ್ನು ವಿಸ್ತರಿಸಲು ಉತ್ಸುಕರಾಗಿದ್ದ ಯಡಿಯೂರಪ್ಪ, ಅನುಮೋದನೆ ಪಡೆಯುವ ಆಶಯದೊಂದಿಗೆ ನವದೆಹಲಿಯಲ್ಲಿ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯಡಿಯೂರಪ್ಪ ಮತ್ತು ಗೋವಿಂದ ಕಾರಜೋಳ ಅವರು ಸುಮಾರು ಒಂದು ಗಂಟೆ ಕಾಲ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದರೂ, ಸಂಪುಟ ವಿಸ್ತರಣೆಯ ಕುರಿತಂತೆ ಕೇಂದ್ರ ನಾಯಕತ್ವದಿಂದ ಒಂದು ಸ್ಪಷ್ಟ ನಿರ್ದೇಶನವನ್ನು ಪಡೆಯಲು ಅವರು ವಿಫಲರಾಗಿದ್ದಾರೆ.

ಸಂಪುಟ ವಿಸ್ತರನೆ ಅಥವಾ ಪುರ್‌ರಚನೆಯ ಅನುಮೋದನೆ ನೀಡುವ ಮೊದಲು ಕರ್ನಾಟಕದ ಉಸ್ತುವಾರಿಯಾಗಿ ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರಿಂದ ಅಭಿಪ್ರಾಯ ಪಡೆಯಲು ಕೇಂದ್ರ ನಾಯಕತ್ವ ಉತ್ಸುಕವಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಅರುಣ್ ಸಿಂಗ್ ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡಿ ರಾಜ್ಯ ನಾಯಕರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆಗೆ ದೆಹಲಿ ಭೇಟಿ: ಬರಿಗೈಲಿ ಹಿಂದಿರುಗಿದ ಯಡಿಯೂರಪ್ಪ
ಸಂಪುಟ ವಿಸ್ತರಣೆ: ಹೈಕಮಾಂಡ್ ಭೇಟಿಯಲ್ಲಿ ಸಿಎಂ ಯಡಿಯೂರಪ್ಪ

ಖಾಲಿ ಇರುವ ಏಳು ಮಂತ್ರಿ ಸ್ಥಾನಗಳಿಗೆ, ಹಲವಾರು ಮಂತ್ರಿಸ್ಥಾನ ಆಕಾಂಕ್ಷಿಗಳು ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಒಳ-ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಯಡಿಯೂರಪ್ಪ ಸಂಧಿಗ್ದ ಪರಿಸ್ಥಿತಿಯಲ್ಲಿದ್ದಾರೆ.

ಯಡಿಯೂರಪ್ಪ ಹೈಕಮಾಂಡಿನ ನಿರ್ದೇಶನಕ್ಕೆ ಕಾಯುತ್ತಿರುವುದು ಇದು ಎರಡನೇ ಬಾರಿ. ಸೆಪ್ಟೆಂಬರ್‌ನಲ್ಲಿ ಕೂಡ ಯಡಿಯೂರಪ್ಪ ನವದೆಹಲಿಗೆ ಭೇಟಿ ನೀಡಿ ಮೂರು ದಿನಗಳನ್ನು ಅಲ್ಲಿ ಕಳೆದಿದ್ದರು, ಅದೂ ಕೂಡಾ ನಿರೀಕ್ಷಿತ ಫಲ ನೀಡಿರಲಿಲ್ಲ. ಬಳಿಕ ಕರ್ನಾಟಕ ಉಪಚುನಾವಣೆ ತರುವಾಯ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಯಡಿಯೂರಪ್ಪ ಅವರು ಕೆಲವು ಮಂತ್ರಿಗಳನ್ನು ಕೈಬಿಟ್ಟು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸುವ ಮೂಲಕ ತಮ್ಮ ಕ್ಯಾಬಿನೆಟ್ ಅನ್ನು ಮರುಹೊಂದಿಸುವ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ವಿಧಾನಸಭೆಯ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಸಂಪುಟಕ್ಕೆ ಹೊಸ ಮುಖಗಳನ್ನು ಸೇರಿಸುವ ಮೂಲಕ ತಮ್ಮ ಕ್ಯಾಬಿನೆಟ್ ವಿಸ್ತರಿಸಲು ಅಥವಾ ಪುನರ್‌-ರಚಿಸಲು ನಡ್ಡಾ ಅವರ ಅನುಮತಿಯನ್ನು ಕೋರಿದ್ದೇನೆ. "2-3 ದಿನಗಳಲ್ಲಿ ಹೈಕಮಾಂಡ್ ನಿರ್ಧಾರವನ್ನು ತಿಳಿಸುವುದಾಗಿ ನಡ್ಡಾ ಅವರು ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

"ಇತರ ನಾಯಕರೊಂದಿಗೆ ಚರ್ಚಿಸಿದ ನಂತರ ಜೆಪಿ ನಡ್ಡಾ ಮುಂದಿನ ನಿರ್ದೇಶನ ನೀಡಲಿದ್ದಾರೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸಂಪುಟ ವಿಸ್ತರಣೆಗೆ ದೆಹಲಿ ಭೇಟಿ: ಬರಿಗೈಲಿ ಹಿಂದಿರುಗಿದ ಯಡಿಯೂರಪ್ಪ
ಸಂಪುಟ ಪುನರ್ ರಚನೆ ನೆಪದಲ್ಲಿ ಕುರ್ಚಿ ಮತ್ತು ಪುತ್ರನ ಉಳಿವಿಗಾಗಿ BSY ದೆಹಲಿ ಯಾತ್ರೆ

ಬಿಜೆಪಿ ಅಧಿಕಾರಕ್ಕೆ ಏರಲು ಸಹಾಯ ಮಾಡಿದ ಎಂಎಲ್ ಸಿಗಳಾದ ಎ ಎಚ್ ವಿಶ್ವನಾಥ್, ಆರ್ ಶಂಕರ್ ಮತ್ತು ಎಂ ಟಿ ಬಿ ನಾಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಲು ಯಡಿಯೂರಪ್ಪ ಒತ್ತಡದಲ್ಲಿದ್ದಾರೆ. ಎಂಟು ಬಾರಿ ಶಾಸಕ ಉಮೇಶ್ ಕತ್ತಿ ಅವರಿಗೆ ಕೂಡಾ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಜೊತೆಗೆ, ರಾಜರಾಜೇಶ್ವರಿನಗರ ಉಪಚುನಾವಣೆಯ ಗೆಲುವಿನ ನಂತರ ಮುನಿರತ್ನಕ್ಕೆ ಅವರಿಗೆ ಕೂಡಾ ಮಂತ್ರಿ ಸ್ಥಾನ ನೀಡಬೇಕಾಗಿದೆ

Inputs: Deccan Herald

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com