RCEP ಒಪ್ಪಂದದಿಂದ ಹೊರಗುಳಿದರೆ ಭಾರತಕ್ಕೆ ನಷ್ಟವೇ ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ನವೆಂಬರ್ ನಲ್ಲಿಯೇ RCEP ಯಿಂದ ಹೊರಗುಳಿಯುವ ನಿರ್ಧಾರ ತಿಳಿಸಿದ್ದು, ಇದು ಎಲ್ಲ ಭಾರತೀಯರ, ವಿಶೇಷವಾಗಿ ದುರ್ಬಲ ವರ್ಗದವರ ಜೀವನ ಮತ್ತು ಜೀವನೋಪಾಯದ ಮೇಲೆ ಬೀರುವ ಪರಿಣಾಮದಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದರು.
RCEP ಒಪ್ಪಂದದಿಂದ ಹೊರಗುಳಿದರೆ ಭಾರತಕ್ಕೆ ನಷ್ಟವೇ ?


ಎಂಟು ವರ್ಷಗಳ ಮಾತುಕತೆ ಚರ್ಚೆಗಳ ನಂತರ, 15 ಏಷ್ಯಾ-ಪೆಸಿಫಿಕ್ ರಾಷ್ಟ್ರಗಳು ಅಂತಿಮವಾಗಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ (RCEP) ಸಹಿ ಹಾಕಿದ್ದು, ಇದು ಇತಿಹಾಸದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಒಂದಾಗಿದೆ. ಈ ದೊಡ್ಡ ಒಪ್ಪಂದ 2.2 ಬಿಲಿಯನ್ ಜನರನ್ನು ಒಳಗೊಂಡಿದ್ದು ವಿಶ್ವದ ಆರ್ಥಿಕತೆಯ ಶೇಕಡಾ 30 ರಷ್ಟಿದೆ. ಆಸಿಯಾನ್ ಸದಸ್ಯರಾದ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ - ಆಸ್ಟ್ರೇಲಿಯಾ, ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳು ಸಹಿ ಹಾಕಿದ್ದರೂ ಭಾರತ ಈ ಒಪ್ಪಂದದಿಂದ ಹೊರಗುಳಿಯಲು ನಿರ್ಧರಿಸಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ನವೆಂಬರ್ ನಲ್ಲಿಯೇ RCEP ಯಿಂದ ಹೊರಗುಳಿಯುವ ನಿರ್ಧಾರ ತಿಳಿಸಿದ್ದು, ಇದು ಎಲ್ಲ ಭಾರತೀಯರ, ವಿಶೇಷವಾಗಿ ದುರ್ಬಲ ವರ್ಗದವರ ಜೀವನ ಮತ್ತು ಜೀವನೋಪಾಯದ ಮೇಲೆ ಬೀರುವ ಪರಿಣಾಮದಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದರು. ಈ ಒಪ್ಪಂದದಿಂದಾಗಿ ಎಲ್ಲ ಸದಸ್ಯ ರಾಷ್ಟ್ರಗಳಲ್ಲಿ ಮುಕ್ತ ವ್ಯಾಪಾರ ನಡೆಸುವುದು ಸಾದ್ಯವಾಗಲಿದೆ. ಇದರಿಂದಾಗಿ ಸದಸ್ಯ ರಾಷ್ಟ್ರಗಳು ಮುಂಬರುವ 20 ವರ್ಷಗಳಲ್ಲಿ ಸದಸ್ಯ ರಾಷ್ಟ್ರಗಳಿಗೆ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲಿನ ಸರಣಿ ಸುಂಕವನ್ನು ತೆಗೆದುಹಾಕುವ ನಿರೀಕ್ಷೆಯಿದೆ. ಒಪ್ಪಂದವು ಬೌದ್ಧಿಕ ಆಸ್ತಿ, ದೂರಸಂಪರ್ಕ, ಹಣಕಾಸು ಮತ್ತು ವೃತ್ತಿಪರ ಸೇವೆಗಳು ಮತ್ತು ಇ-ಕಾಮರ್ಸ್ನ ನಿಯಮಗಳನ್ನು ಸಹ ಒಳಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತು ಅಭಿಪ್ರಾಯಿಸಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಮತ್ತು ಪಾಲಿಸಿಯ ಸಲಹೆಗಾರ ರಾಧಿಕಾ ಪಾಂಡೆ, ಅವರು ಇದು ವ್ಯಾಪಾರ ಸೃಷ್ಟಿಗೆ ಕಾರಣವಾಗಬೇಕೆಂಬ ಉದ್ದೇಶ ಹೊಂದಿದೆ. ಏಕೆಂದರೆ RCEP ಯ ಭಾಗವಾಗಿರುವ ದೇಶಗಳು ಕ್ರಮೇಣ ಸುಂಕ ದರವನ್ನು ಕಡಿಮೆ ಮಾಡುತ್ತದೆ, ಇದರಿಂದ ವ್ಯಾಪಾರದ ಹೆಚ್ಚಳಕ್ಕೆ ಅನುವಾಗುತ್ತದೆ. ಆದರೆ ಈ ಒಪ್ಪಂದದ ಹೊರತಾಗಿಯೂ ಆನೇಕ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಗಳನ್ನೂ (FTA) ಹೊಂದಿವೆ. ಏಷ್ಯನ್ ಟ್ರೇಡ್ ಸೆಂಟರ್ನ ಡೆಬೊರಾ ಎಲ್ಮ್ಸ್, ಅವರ ಪ್ರಕಾರ RCEP ಗೆ ಹೋಲಿಸಿದರೆ ಅಸ್ತಿತ್ವದಲ್ಲಿರುವ FTAಗಳನ್ನು ಬಳಸಲು ತುಂಬಾ ಜಟಿಲವಾಗಿದೆ ಎನ್ನುತ್ತಾರೆ. ಏಕೆಂದರೆ ಜಾಗತಿಕ ಪೂರೈಕೆ ಸರಪಳಿಗಳೊಂದಿಗಿನ ವ್ಯವಹಾರಗಳು ತಮ್ಮ ಉತ್ಪನ್ನಗಳು ಬೇರೆಡೆ ತಯಾರಿಸಿದ ಘಟಕಗಳನ್ನು ಹೊಂದಿದ್ದರೆ FTA ಒಳಗೆ ಸಹ ಸುಂಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, RCEP ಅಡಿಯಲ್ಲಿ ಸದಸ್ಯ ರಾಷ್ಟ್ರಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.

RCEP ಉದ್ದೇಶವು ಎಲ್ಲಾ ಸದಸ್ಯರಿಗೆ ವ್ಯಾಪಾರ ಹೆಚ್ಚು ಮಾಡುವುದು ಮತ್ತು ಕಡಿಮೆ ಸುಂಕದ ದರವನ್ನು ಸೃಷ್ಟಿಸುವುದು ಆಗಿದೆ ಆದರೆ ಎಲ್ಲಾ ದೇಶಗಳು ಸಮಾನವಾಗಿ ಪ್ರಯೋಜನ ಪಡೆಯುವುದಿಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ. ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ನ ಪ್ರಖ್ಯಾತ ಸಹವರ್ತಿ ಮತ್ತು ರಾಷ್ಟ್ರೀಯ ಭದ್ರತಾ ತ್ರೈಮಾಸಿಕ ಜರ್ನಲ್ ಸಂಪಾದಕ ಸುಜಿತ್ ದತ್ತಾ ಅವರ ಪ್ರಕಾರ RCEP ಗೆ ಸೇರ್ಪಡೆಗೊಳ್ಳುವುದರಿಂದ ಕೆಲವು ದೇಶಗಳು ಮಾತ್ರ ಲಾಭ ಪಡೆಯುತ್ತವೆ. ದೈತ್ಯ ಚೀನಾ ಇತರ ಹಲವು ದೇಶಗಳ ಕೈಗಾರಿಕಾ ಉತ್ಪನ್ನಗಳನ್ನು ತಾನೇ ಸರಬರಾಜು ಮಾಡುತ್ತದೆ.

ಸಿಂಗಾಪುರದಂತಹ ಶ್ರೀಮಂತ ಆರ್ಥಿಕತೆಗಳು ಸಾಕಷ್ಟು ಲಾಭವನ್ನು ಹೊಂದಿವೆ. ಆದರೆ, ಇತರ ಸಣ್ಣ ದೇಶಗಳಿಗೆ ಇದು ಅಸಮಾನ ಸಂಬಂಧವಾಗಿದೆ. ಏಕೆಂದರೆ ಈ ದೇಶಗಳಿಗೆ ಚೀನಾ ತುಂಬಾ ದೊಡ್ಡದಾಗಿದೆ ಎಂದು ಅವರು ಹೇಳುತ್ತಾರೆ. ದೊಡ್ಡ ಪ್ರಮಾಣದ ವ್ಯಾಪಾರ ಒಪ್ಪಂದಗಳು ಈಗ ತಮ್ಮ ಹೊಳಪು ಕಳೆದುಕೊಳ್ಳುತ್ತಿವೆ ಎಂದು ದತ್ತಾ ಗಮನಸೆಳೆದರು. ಏಕೆಂದರೆ ಅವು ವಿಭಿನ್ನ ಕರೆನ್ಸಿಗಳನ್ನು ಆಧರಿಸಿವೆ, ಅದರ ಮೌಲ್ಯಮಾಪನಗಳು ವಿವಿಧ ದೇಶಗಳಲ್ಲಿ ಅಸಮಾನ ಪರಿಣಾಮವನ್ನು ಬೀರುತ್ತವೆ.

ಕಳೆದ ವರ್ಷ ನವೆಂಬರ್ 4 ರಂದು ಭಾರತ RCEP ಗೆ ಸೇರದ ನಿರ್ಧಾರ ಪ್ರಕಟಿಸಿತು. ಈ ನಿರ್ಧಾರವು ಪ್ರಧಾನಿ ಮೋದಿಯವರ ಆತ್ಮನಿರ್ಭಾರ ಭಾರತದ ಸ್ಪಷ್ಟ ಕರೆಯನ್ನು ಪ್ರತಿಬಿಂಬಿಸುತ್ತಿದೆ. ಚೀನಾದ ಆಮದುಗಳಿಂದ ತನ್ನ ದೇಶೀಯ ಕೈಗಾರಿಕೆಗಳನ್ನು ರಕ್ಷಿಸುವುದು ಭಾರತದ ತಂತ್ರ ಎನ್ನಲಾಗಿದೆ. ಇದಲ್ಲದೆ ಭಾರತ ಕೆಲವು ಪರಿಹಾರ ಕ್ರಮಗಳನ್ನು ಸೂಚಿಸಿತ್ತು. ಆಮದುಗಳು ಮಿತಿ ಮೀರಿದ ಮಟ್ಟದಲ್ಲಿ ಏರಿಕೆಯಾದರೆ ಅದಕ್ಕೆ ತಡೆಯೊಡ್ಡಲು ಅವಕಾಶ ನೀಡಬೇಕು ಎಂದು ಕೇಳಿತ್ತು. ಆದರೆ, RCEP ಯ ಇತರ ಸದಸ್ಯ ರಾಷ್ಟ್ರಗಳು ಇದನ್ನು ಒಪ್ಪಲಿಲ್ಲ. RCEP ಒಪ್ಪಂದದ ಪ್ರಸ್ತುತ ರೂಪವು RCEP ಯ ಮೂಲ ಮನೋಭಾವ ಮತ್ತು ಒಪ್ಪಿದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಇದು ಭಾರತದ ಸಮಸ್ಯೆಗಳು ತೃಪ್ತಿಕರವಾಗಿ ನಿವಾರಿಸುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ, ಭಾರತವು RCEP ಒಪ್ಪಂದಕ್ಕೆ ಸೇರ್ಪಡೆಗೊಳ್ಳಲು ಸಾಧ್ಯವಿಲ್ಲ ಎಂದು ಕಳೆದ ವರ್ಷ ಬ್ಯಾಂಕಾಕ್ನಲ್ಲಿ ನಡೆದ RCEP
ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.ಆದಾಗ್ಯೂ, ಇತರ ಸದಸ್ಯ ರಾಷ್ಟ್ರಗಳು RCEP ಯಲ್ಲಿ ಭಾರತದ ಭಾಗವಹಿಸುವಿಕೆಗೆ ಯಾವಾಗಲೂ ಬಾಗಿಲು ತೆರೆದಿರುತ್ತವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್ ನ ಸಂಶೋಧನಾ ಸಹವರ್ತಿ ಕಾರ್ತಿಕ್ ನಾಚಿಯಪ್ಪನ್ ಅವರ ಪ್ರಕಾರ, ಕೃಷಿ, ಉತ್ಪಾದನೆ ಮತ್ತು ಎಲೆಕ್ಟ್ರಾನಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಭಾರತೀಯ ಸಂಸ್ಥೆಗಳ ಸ್ಥಿತಿಯನ್ನು RCEP ಸುಧಾರಿಸುವುದಿಲ್ಲ. ಭಾರತದ ಲೋಹದ ಉತ್ಪಾದಕರು, ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಹಿಂದಿನ FTAಗಳಿಂದ ಈಗಾಗಲೇ ಹೆಚ್ಚಿನ ಸ್ಪರ್ಧೆಯಿಂದ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು. "ಕೃಷಿಯ ವಿಷಯದಲ್ಲಿ, ಡೈರಿ, ಮೆಣಸು, ತೆಂಗಿನಕಾಯಿ ಮತ್ತು ಏಲಕ್ಕಿ ಮುಂತಾದ ಸರಕುಗಳನ್ನು ಉತ್ಪಾದಿಸುವ ಸಂಸ್ಥೆಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಂತಹ ದೊಡ್ಡ ಮಟ್ಟದ ಉತ್ಪಾದಕರಿಂದ ಒತ್ತಡವನ್ನು ಎದುರಿಸಬೇಕಾಗುತ್ತದೆ, ಸಮಸ್ಯೆಯೆಂದರೆ ಕೃಷಿ ಸರಕುಗಳ ರಫ್ತು ಹೆಚ್ಚಿಸುವುದು ತುಂಬಾ ಕಷ್ಟ, ಆದರೆ ಅವುಗಳ ಆಮದನ್ನು ಬಹಳ ಸುಲಭವಾಗಿ ಹೆಚ್ಚಿಸಬಹುದು" ಎಂದು ಅವರು ಹೇಳಿದರು.

ಒಟ್ಟಿನಲ್ಲಿ ಮೋದಿ ಸರ್ಕಾರವು ಒಪ್ಪಂದಕ್ಕೆ ಸೇರದಿರುವ ನಿರ್ಧಾರದಿಂದ ದೇಶದ ಸಣ್ಣ ಪುಟ್ಟ ಕೈಗಾರಿಕೆಗಳ ಪ್ರಗತಿಗೆ ಅನುಕೂಲವಾಗಿದೆ ಎಂದು ಕೈಗಾರಿಕೋದ್ಯಮಿಗಳ ಅಭಿಪ್ರಾಯವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com