ಅಮೇರಿಕಾದಲ್ಲಿ ವ್ಯಾಸಂಗ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ

ಆತಂಕಕಾರಿ ಸಂಗತಿಯೇನೆಂದರೆ, ಅಮೇರಿಕಾ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 42% ಕುಸಿತ ಕಂಡಿದೆ.
ಅಮೇರಿಕಾದಲ್ಲಿ ವ್ಯಾಸಂಗ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ

2019-20 ಸಾಲಿನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 4.4% ಇಳಿತವಾಗಿದೆ ಎಂದು US ಸರ್ಕಾರ ಪ್ರಾಯೋಜಿತ ಅಧ್ಯಯನ ವರದಿಯೊಂದು ಹೇಳಿದೆ.

ಇದರರ್ಥ, ಟ್ರಂಪ್ ಆಡಳಿತದ ಹಲವು ವೀಸಾ ನಿರ್ಬಂಧಗಳು ಮತ್ತು ಅದರ ವಲಸೆ-ವಿರೋಧಿ ನೀತಿಗಳು ಉತ್ತುಂಗಕ್ಕೇರಿದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2017-18 ಸಾಲಿನಲ್ಲಿ 1,96,271 ಭಾರತೀಯ ವಿದ್ಯಾರ್ಥಿಗಳು ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದರು. 2019-20 ರಲ್ಲಿ ಈ ಸಂಖ್ಯೆ 4.4% ಕುಸಿತ ಕಂಡಿದೆ. ಅಧ್ಯಯನದ ಪ್ರಕಾರ 2020-21 ರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಕುಸಿಯಲಿದೆ. ಈ ಕುಸಿತದಲ್ಲಿ ಎಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳು ಎಂಬುದು ಸ್ಪಷ್ಟವಾಗಿಲ್ಲವಾದರೂ, ಈ ಸಂಖ್ಯೆಯು ಗಮನಾರ್ಹ ಶೇಕಡಾವಾರು ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ.

ಯಾಕೆಂದರೆ, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ದಾಖಲಾದ ಒಂದು ಮಿಲಿಯನ್ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ 18 ಪ್ರತಿಶತದಷ್ಟು ಭಾರತೀಯರು ಇದ್ದಾರೆ, ಚೀನಾ ಮೊದಲ ಸ್ಥಾನದಲ್ಲಿದೆ, 35 ಪ್ರತಿಶತದಷ್ಟು ಚೀನೀ ಮೂಲದ ವಿದ್ಯಾರ್ಥಿಗಳಿದ್ದಾರೆ.

ಏತನ್ಮಧ್ಯೆ, ಕರೋನಾ ಹಿನ್ನೆಲೆಯಲ್ಲಿ ದೈಹಿಕವಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ 28 ಪ್ರತಿಶತಕ್ಕೆ ಏರಿದೆ. ಆತಂಕಕಾರಿ ಸಂಗತಿಯೇನೆಂದರೆ, ಅಮೇರಿಕಾ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 42% ಕುಸಿತ ಕಂಡಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com