ಉತ್ತರಾಖಂಡ್: ಆನೆ ಸಂರಕ್ಷಣಾ ವಲಯದಲ್ಲಿ ವಿಮಾನ ನಿಲ್ದಾಣ ವಿಸ್ತರಣೆ; ಸಿಡಿದೆದ್ದ ಪರಿಸರವಾದಿಗಳು

ವಿಮಾನ ನಿಲ್ದಾಣ ವಿಸ್ತರಣೆಗಾಗಿ ಶಿವಾಲಿಕ್ ಆನೆ ಸಂರಕ್ಷಣಾ ವಲಯದ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿರುವುದನ್ನು ಉತ್ತರಖಂಡ್ ರಾಜ್ಯ ಅರಣ್ಯ ಪಡೆ ಮುಖ್ಯಸ್ಥ ರಂಜನ ಕಾಲಾ ಸ್ಪಷ್ಟಪಡಿಸಿದ್ದಾರೆ
ಉತ್ತರಾಖಂಡ್: ಆನೆ ಸಂರಕ್ಷಣಾ ವಲಯದಲ್ಲಿ ವಿಮಾನ ನಿಲ್ದಾಣ ವಿಸ್ತರಣೆ; ಸಿಡಿದೆದ್ದ ಪರಿಸರವಾದಿಗಳು

ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದ ಉತ್ತರಾಖಂಡದ ಭಾರತೀಯ ಜನತಾ ಪಕ್ಷ ಸರ್ಕಾರವು 2017 ರಲ್ಲಿ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಅರಣ್ಯ ಸಂರಕ್ಷಣೆಯನ್ನು ನಿರ್ಲಕ್ಷಿಸಿರುವುದು ವೇದ್ಯವಾಗುತ್ತಿದೆ.

2017ರಲ್ಲಿ ಆದೇಶಿಸಿದ ವಿವಾದಾತ್ಮಕ ಆಜ್ಞೆಯಿಂದ ಇದು ಸ್ಪಷ್ಟವಾಗಿದ್ದು, 2021ರಲ್ಲಿ ನಡೆಯುವ ಕುಂಭಮೇಳಕ್ಕಾಗಿ ರಾಜಾಜಿ ರಾಷ್ಟ್ರೀಯ ಉದ್ಯಾನವನ ಬಳಕೆ ಹಾಗೂ ಚಾರಾಧಾಮಾ ಯಾತ್ರಿಕರಿಗೆ ಐತಿಹಾಸಿಕ ಕಟ್ಟಡವನ್ನು ಮೀಸಲಿಟ್ಟಿತ್ತು.

ಇದು ಮಾತ್ರವಲ್ಲದೆ ಶಿವಾಲಿಕ್ ಆನೆ ಸಂರಕ್ಷಣಾ ವಲಯದ ವ್ಯಾಪ್ತಿಯಲ್ಲಿ ಡೆಹರಡೂನ್ ವಿಮಾನ ನಿಲ್ದಾಣ ವಿಸ್ತರಣೆಗೆ ಮುಂದಾಗಿದ್ದು, ವಿಮಾನ ನಿಲ್ದಾಣ ವಿಸ್ತರಣೆಗೆ ದಾರಿ ಮಾಡಿಕೊಡಲು ಶಿವಾಲಿಕ್ ಆನೆ ಸಂರಕ್ಷಣಾ ವಲಯದ ಕಾನೂನು ರಕ್ಷಣೆಯನ್ನು ರದ್ದುಗೊಳಿಸಲು ರಾವತ್ ಸರ್ಕಾರ ಪ್ರಸ್ತಾಪಿಸುತ್ತಿದೆ. ಈ ಯೋಜನೆಗಾಗಿ ಪರ್ಯಾಯ ಜಮೀನುಗಳನ್ನು ಪರಿಗಣಿಸುವಂತೆ ಕೇಂದ್ರ ಪರಿಸರ ಸಚಿವಾಲಯ ರಾಜ್ಯಕ್ಕೆ ನಿರ್ದೇಶನ ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಶಿವಾಲಿಕ್ ಆನೆ ಸಂರಕ್ಷಣಾ ವಲಯ ಮತ್ತು ಕಾನಸಾರೊ ಎಲಿಫೆಂಟ್ ಕಾರಿಡಾರ್ ನ 87 ಹೆಕ್ಟರ್ ಭೂಮಿಯನ್ನು ಉತ್ತರಾಖಂಡ್ ಅರಣ್ಯ ಮಂಡಳಿ ತನ್ನ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ವ್ಯಾಪಾಕ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆದಿದ್ದು, ಶಿವಾಲಿಕ್ ಆನೆ ಸಂರಕ್ಷಣಾ ವಲಯದ ವ್ಯಾಪ್ತಿಯಲ್ಲಿ ಕೊರಬೆಟ್ಟ ಹುಲಿ ಸಂರಕ್ಷಣಾ ತಾಣ ಮತ್ತು ರಾಜಾಜಿ ರಾಷ್ಟ್ರೀಯ ಉದ್ಯಾನ ಕೂಡಾ ಇದೆ.

ವಿಮಾನ ನಿಲ್ದಾಣ ವಿಸ್ತರಣೆಗಾಗಿ ಶಿವಾಲಿಕ್ ಆನೆ ಸಂರಕ್ಷಣಾ ವಲಯದ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿರುವುದನ್ನು ಉತ್ತರಖಂಡ್ ರಾಜ್ಯ ಅರಣ್ಯ ಪಡೆ ಮುಖ್ಯಸ್ಥ ರಂಜನ ಕಾಲಾ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಕೇಂದ್ರ ಪರಿಸರ ಸಚಿವಾಲಯ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗೆ ಪತ್ರ ಬರೆದು ನಿಲ್ದಾಣದ ಉತ್ತರ ಭಾಗ ವಿಸ್ತರಣೆ ಬದಲಾಗಿ ಪೂರ್ವ ಮತ್ತು ದಕ್ಷಿಣ ಭಾಗ ವಿಸ್ತರಿಸಿ ಎಂದು ಪತ್ರ ಬರೆದಿತ್ತು. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಅಕ್ಟೋಬರ್ನಲ್ಲಿ ಸುದ್ದಿ ಪ್ರಕಟಿಸಿತ್ತು.

ಆನೆ ಮೀಸಲು ಪ್ರದೇಶ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದೇ, ವನ್ಯಜೀವಿಗಳನ್ನು ಉಳಿಸಬೇಕು, ಆನೆ ಮೀಸಲು ಪ್ರದೇಶವಾಗಿ ರಕ್ಷಣೆ ಇಲ್ಲದಿರಬಹುದು ಆದರೆ ವನ್ಯಜೀವಿ ಪ್ರಾಮುಖ್ಯತೆ ಹೊಂದಿರುವ ಮೀಸಲು ಅರಣ್ಯವಾಗಿ, ಇದನ್ನು ಇನ್ನೂ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ರಕ್ಷಿಸಲಾಗಿದೆ. ಮೀಸಲು ಕಾಡುಗಳು ಹೆಚ್ಚಿನ ವೈವಿಧ್ಯತೆಯ ಮೌಲ್ಯವನ್ನು ಹೊಂದಿರುವ ಪ್ರದೇಶಗಳಾಗಿವೆ ಮತ್ತು ಅವುಗಳನ್ನು ರಕ್ಷಿಸಬೇಕು ಮತ್ತು ಇಂತಹ ‘ಅಭಿವೃದ್ಧಿ’ ಚಟುವಟಿಕೆಗಳಿಗಾಗಿ ಮೀಸಲು ಅರಣ್ಯವನ್ನು ಹಾಳುಗೆಡವಬಾರದು ಎಂದು ವಕೀಲ ರಿತ್ವೀಕ್ ದತ್ತಾ ಹೇಳಿದ್ದಾರೆ. ವಿಮಾನ ನಿಲ್ದಾಣ ವಿಸ್ತರಣೆ ಕುರಿತು ಪುನರ್ಪರಿಶೀಲಿಸಬೇಕು. 2002ರ ಜೈವಿಕ ವೈವಿಧ್ಯತೆ ಕಾಯ್ದೆ ಅನುಸರಿಸಬೇಕೆಂದಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com