ಇನ್ನೂ ಜೈಲಲ್ಲಿ ಕೊಳೆಯುತ್ತಿರುವ ಸಾಮಾಜಿಕ ಹೋರಾಟಗಾರರು: ಅರ್ನಬ್‌ಗಿರುವ ಅನುಕೂಲ ಇವರಿಗಿಲ್ಲ

ಅರ್ನಾಬ್‌ ಗೋಸ್ವಾಮಿಗೆ ಸಿಕ್ಕಿರುವ ‘ವೈಯಕ್ತಿಕ ಸ್ವಾತಂತ್ರ್ಯ’ವನ್ನು ಕಳೆದುಕೊಂಡು ಜೈಲಿನಲ್ಲಿ ಕೊಳೆಯುತ್ತಿರುವ ನೂರಾರು ಸಾಮಾಜಿಕ ಕಾರ್ಯಕರ್ತರಿಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ
ಇನ್ನೂ ಜೈಲಲ್ಲಿ ಕೊಳೆಯುತ್ತಿರುವ ಸಾಮಾಜಿಕ ಹೋರಾಟಗಾರರು: ಅರ್ನಬ್‌ಗಿರುವ ಅನುಕೂಲ ಇವರಿಗಿಲ್ಲ

ಕಳೆದ ನವೆಂಬರ್ 7 ರಂದು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ವ್ಯಕ್ತಿಯೊಬ್ಬನ ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿತು. ಮೇಲ್ನೋಟಕ್ಕೆ ಇದು ವೈಯಕ್ತಿಕ ಸ್ವಾತಂತ್ರ್ಯ ಎತ್ತಿ ಹಿಡಿಯುವ ನಿಷ್ಪಕ್ಷಪಾತ ಕ್ರಮ ಎಂದು ತೋರಿದರೂ ಈ ‘ವೈಯಕ್ತಿಕ ಸ್ವಾತಂತ್ರ್ಯ’ವನ್ನು ಕಳೆದುಕೊಂಡು ಜೈಲಿನಲ್ಲಿ ಕೊಳೆಯುತ್ತಿರುವ ನೂರಾರು ಸಾಮಾಜಿಕ ಕಾರ್ಯಕರ್ತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ.

2018 ರ ಸೆಪ್ಟೆಂಬರ್ 7 ರಂದು, ಮುಂಬೈನ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಚೇರಿಯಲ್ಲಿ ನಿರಂತರ ವಿಚಾರಣೆಯ ನಂತರ, ಎಲ್ಗರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪರ್ಕ ಹೊಂದಿದ್ದಕ್ಕಾಗಿ ಕಬೀರ್ ಕಲಾ ಮಂಚ್ನ ಇಬ್ಬರು ಕಾರ್ಯಕರ್ತರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರನ್ನು ಬಂಧಿಸಲಾಯಿತು. ಕೆಲವು ದಿನಗಳ ನಂತರ, ಗುಂಪಿನ ಮತ್ತೊಬ್ಬ ಯುವ ಸಾಂಸ್ಕೃತಿಕ ಕಾರ್ಯಕರ್ತ ಜ್ಯೋತಿ ಜಗ್ತಾಪ್ ಅವರನ್ನು ಸಹ ಬಂಧಿಸಲಾಯಿತು. ಮೂವರ ವಿರುದ್ದ ಪುಣೆ ಪೊಲೀಸರು ಜನವರಿ 2018 ರ ಎಫ್ಐಆರ್‌ ಅನ್ನು ದಾಖಲಿಸಿದ್ದರು. ಈ ಮೂವರೂ ಡಿಸೆಂಬರ್ 31, 2017 ರಂದು ಎಲ್ಗರ್ ಪರಿಷತ್ ಕಾರ್ಯಕ್ರಮವನ್ನು ಆಯೋಜಿಸಿದ ಭೀಮಾ ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನದ ‘ಪ್ರಾಥಮಿಕ ಸಂಘಟಕರು’ ಎಂದು ಆರೋಪಿಸಲಾಯಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಎರಡು ವರ್ಷಗಳಲ್ಲಿ, ಪುಣೆ ಪೊಲೀಸರು ಮತ್ತು ನಂತರ ಎನ್ಐಎ ಒಂದು ಡಜನ್ಗೂ ಹೆಚ್ಚು ಕಾರ್ಯಕರ್ತರು ಮತ್ತು ವಕೀಲರನ್ನು ಬಂಧಿಸಿವೆ, ಅವರಲ್ಲಿ ಹೆಚ್ಚಿನವರ ಹೆಸರು ಎಫ್ಐಆರ್ ನಲ್ಲಿ ಕೂಡ ಇಲ್ಲ. ಗೋರ್ಖೆ, ಗೈಚೋರ್ ಮತ್ತು ಜಗ್ತಾಪ್ ಅವರನ್ನು ಬಂಧಿಸಿದಾಗ, ಅವರ ವಕೀಲರು ಎರಡು ವರ್ಷಗಳ ಹಳೆಯ ಪ್ರಕರಣದಲ್ಲಿ ಅವರ ಬಂಧನ ಏಕೆ ಎಂದು ಪ್ರಶ್ನಿಸಿದ್ದರು. ಈ ಬಂಧನಗಳನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದೆ ಎಂದೂ ಅವರು ಹೇಳಿದ್ದರು.

ಈ ಮೂವರನ್ನು 2018 ರ ಎಫ್ಐಆರ್ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದ್ದರೂ ಸಹ - ಮತ್ತು ನಂತರ ಎರಡು ವರ್ಷಗಳ ನಂತರ ಅವರ ಹಠಾತ್ ಬಂಧನವು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಬಂಧನಕ್ಕೆ ಹೋಲಿಸಬಹುದು. ಗೋಸ್ವಾಮಿ ಅವರನ್ನು 2018 ರ ಆತ್ಮಹತ್ಯೆ ಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಯಿತು. ನ್ಯಾಯಾಂಗವು ಎರಡೂ ಪ್ರಕರಣಗಳನ್ನು ವಿಚಾರಣೆ ನಡೆಸಿದ ರೀತಿ ಸಂಪೂರ್ಣವಾಗಿ ವಿಭಿನ್ನವಾಗಿತ್ತು.

ಇನ್ನೂ ಜೈಲಲ್ಲಿ ಕೊಳೆಯುತ್ತಿರುವ ಸಾಮಾಜಿಕ ಹೋರಾಟಗಾರರು: ಅರ್ನಬ್‌ಗಿರುವ ಅನುಕೂಲ ಇವರಿಗಿಲ್ಲ
ಜೆಎನ್‌ಯು ನಾಶಕ್ಕೆ ಅಂತಿಮ ಮೊಳೆ ಹೊಡೆಯುತ್ತಿರುವ ಸರ್ಕಾರ

ಗೋಸ್ವಾಮಿಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಗೆ ಪಟ್ಟಿ ಮಾಡಲಾಗಿದ್ದು, ಅವರನ್ನು ಆರು ದಿನಗಳೊಳಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದರೂ, ಕಬೀರ್ ಕಲಾ ಮಂಚ್ ಕಾರ್ಯಕರ್ತರು ಬಾಂಬೆ ಹೈಕೋರ್ಟ್ ಮುಂದೆ ಈತನಕವೂ ವಿಚಾರಣೆಯ ವಿಳಂಬವನ್ನು ಎದುರಿಸುತಿದ್ದಾರೆ. ಕಳೆದ ವರ್ಷಗಳಲ್ಲಿ ಬಂಧಿಸಲ್ಪಟ್ಟ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರು ವಿಚಾರಣೆಗಳ ವಿಳಂಬದಿಂದಾಗಿ ಮೂಲಭೂತ ಮಾನವ ಹಕ್ಕುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಂತಹ ಪ್ರಕರಣಗಳ ಪಟ್ಟಿಯನ್ನು ದಿ ವೈರ್ ಬಿಡುಗಡೆ ಮಾಡಿದೆ.

ದೆಹಲಿಯ ರಾಷ್ಟ್ರೀಯ ಜನತಾ ದಳದ ಯುವ ವಿಭಾಗದ ಅದ್ಯಕ್ಷ , ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಪಿಹೆಚ್ ಡಿ ವಿದ್ಯಾರ್ಥಿ ಮೀರನ್ ಹೈದರ್ ಅವರನ್ನು ಕಳೆದ ಏಪ್ರಿಲ್ ಒಂದರಂದು ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಬಂದಿಸಲಾಯಿತು. ಅಸೀಫ್ ಇಕ್ಬಾಲ್ ತನಾ ಎಂಬ ಮೂರನೇ ವರ್ಷದ ಜಾಮಿಯಾ ಯುನಿವರ್ಸಿಟಿಯ ವಿದ್ಯಾರ್ಥಿ ಯನ್ನು ಡಿಸೆಂಬರ್ 15 , 2019 ರಂದು ನಡೆದ ಜಾಮಿಯಾ ಗಲಭೆಗೆ ಸಂಬಂದಿಸಿದಂತೆ ಮೇ 16 ರಂದು ಬಂದಿಸಲಾಯಿತು.

ಜಾಮಿಯಾ ಯುನಿವರ್ಸಿಟಿಯ ಹಳೆಯ ವಿದ್ಯಾರ್ಥಿ ಸಂಘದ ನಾಯಕ ಶೀಫ ಉರ್ ರೆಹಮಾನ್ ಎಂಬುವವರನ್ನು ದೆಹಲಿ ಸ್ಪೆಷಲ್ ಬ್ರಾಂಚ್ ಪೋಲೀಸರು ಫೆಬ್ರುವರಿಯಲ್ಲಿ ನಡೆದ ದೆಹಲಿ ಕೋಮು ಗಲಭೆ ಗಳ ಸಂಬಂದ ಕಳೆದ ಏಪ್ರಿಲ್ 26 ರಂದು ಬಂದಿಸಿದರು. ಈ ಮೂವರ ಮೇಲೂ ಕಠಿಣ ಯುಏಪಿಏ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಲಾಗಿತ್ತು. ಕಳೆದ ಅಕ್ಟೋಬರ್ 27 ರಂದು ತನ್ಹ ಅವರ ಜಾಮೀನು ಅರ್ಜಿಯನ್ನು ಎರಡನೇ ಬಾರಿ ದೆಹಲಿಯ ಕೋರ್ಟು ತಿರಸ್ಕರಿಸಿತು. ಇವರಿಗೆ ಕನಿಷ್ಟ ತಮ್ಮ ವಕೀಲರನ್ನು ಭೇಟಿ ಮಾಡಲೂ ಅವಕಾಶ ನೀಡಲಾಗುತ್ತಿಲ್ಲ.

ಇನ್ನೂ ಜೈಲಲ್ಲಿ ಕೊಳೆಯುತ್ತಿರುವ ಸಾಮಾಜಿಕ ಹೋರಾಟಗಾರರು: ಅರ್ನಬ್‌ಗಿರುವ ಅನುಕೂಲ ಇವರಿಗಿಲ್ಲ
ಉ.ಪ್ರ: ಹೈಕೋರ್ಟ್‌ ಆದೇಶ ಮೀರಿ ಸಿಎಎ ಪ್ರತಿಭಟನಾಕಾರರ ಫೋಟೊವಿರುವ ಫ್ಲೆಕ್ಸ್‌ ಅಳವಡಿಸಿದ ಸರ್ಕಾರ

ಜವಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ರನ್ನು ದೆಹಲಿ ಕೋಮು ಗಲಭೆಯ ಆರೋಪಿಯನ್ನಾಗಿ ಸೆಪ್ಟೆಂಬರ್ 13 ರಂದು ಬಂದಿಸಲಾಗಿದೆ. ಜೆ ಎನ್ ಯು ವಿದ್ಯಾರ್ಥಿನಿ ನತಾಸ ನರ್ವಾಲ್ ಮತ್ತು ದೇವಂಗನ ಕಲಿತಾ ಅವರನ್ನು ಸಿಏಏ ವಿರುದ್ದ ಪ್ರತಿಭಟನೆ ಸಂಬಂದ ಮೇ 23 ರಂದು ಬಂಧಿಸಲಾಯಿತು. ಜೆಎನ್ ಯು ನಾಐಕ ಶಾರ್ಜೀಲ್ ಇಮಾಮ್ ಎಂಬವರನ್ನು ಸಿಏಏ ವಿರೋಧಿ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಆರೋಪದಡಿಯಲ್ಲಿ ಬಂದಿಸಲಾಗಿದೆ. ಮಲಯಾಳಂ ನ್ಯೂಸ್ ಪೋರ್ಟಲ್ ನ ವರದಿಗಾರ ಸಿದ್ದಿಕಿ ಕಪ್ಪನ್ ಅವರನ್ನು ಕಳೆದ ಅಕ್ಟೋಬರ್ 6 ರಂದು ಹಾತ್ರಾಸ್ ಗೆ ತೆರಳುತಿದ್ದಾಗ ಬಂದಿಸಲಾಯಿತು. ಇವರ ಪತ್ನಿಗೂ ಸಿದ್ದಿಕಿ ಅವರ ಜತೆ ಮಾತಾಡಲು ಅವಕಾಶ ನೀಡಿಲ್ಲ.

ಬುರ್ಹಾನ್ ವನಿ ಬಗ್ಗೆ ಬರೆದ ಆರೋಪದಡಿಯಲ್ಲಿ ಕಾಶ್ಮೀರ್ ನೆರೆಟರ್ ಪತ್ರಿಕೆಯ ವರದಿಗಾರ ಅಸಿಫ ಸುಲ್ತಾನ್ ಅವರನ್ನು 2018 ರ ಆಗಸ್ಟ್ 31 ರಂದು ಬಂದಿಸಲಾಯಿತು. ಈತನಕ ಅವರಿಗೆ ಜಾಮೀನು ನೀಡಲಾಗಿಲ್ಲ. ಮೇಘಾಲಯ ದ ಪತ್ರಕರ್ತೆ ಪ್ಯಾಟ್ರಿಸಿಯ ಮುಖಿಮ್ ಅವರ ಮೇಲೆ ಫೇಸ್ ಬುಕ್ ಪೋಸ್ಟ್ ಮಾಡಿದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಲಾಗಿದೆ. ಎಲ್ಗರ್ ಪರಿಷದ್ ಮೊಕದ್ದಮೆಯಲ್ಲಿ ಈ ವರ್ಷದ ಜನವರಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಗೌತಮ್ ನವಲಖ ಮತ್ತು ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಲಾಗಿದೆ. ಇದೆ ಪ್ರಕರಣಕ್ಕೆ ಸಂಭಂಧಿಸಿದಂತೆ ಸಾಮಾಜಿಕ ಹೋರಾಟಗಾರ ಸ್ಟಾನ್ ಸ್ವಾಮಿ (83)ಅವರನ್ನೂ ಬಂಧಿಸಲಾಗಿದೆ. ಆಗಸ್ಟ್ 2018 ರಲ್ಲಿ ಕವಿ ವರವರ ರಾವ್ ಅವರನ್ನೂ ಬಂದಿಸಲಾಗಿದೆ.

ಕಳೆದ ಫೆಬ್ರುವರಿ 26 ರಂದು ಸಿಏಏ ವಿರೋಧಿ ಸಭೆಯಲ್ಲಿ ಪ್ರಚೋದನೆ ಮಾಡಿದ ಆರೋಪದಡಿಯಲ್ಲಿ ಇಶ್ರತ್ ಜಹಾನ್ ಅವರನ್ನು ಬಂದಿಸಲಾಗಿದೆ. ದೆಹಲಿ ಕೋಮು ಗಲಭೆ ಸಂಭಂಧ ಪ್ರಚೋದನೆ ಆರೋಪದಲ್ಲಿ ದೆಹಲಿ ನಗರಪಾಲಿಕೆ ಸದಸ್ಯ ತಾಹಿರ್ ಹುಸೇನ್ ಅವರನ್ನು ಮಾರ್ಚ್ 5 ರಂದು ಬಂದಿಸಲಾಗಿದೆ.ಸಿಏಏ ವಿರೋಧ ಹೋರಾಟಗಾರ್ತಿ ಗುಲ್ಫಿಷ ಫಾತಿಮಾ ಅವರನ್ನು ಏಪ್ರಿಲ್ 18 ರಂದು ಬಂದಿಸಲಾಗಿದೆ.
ಈ ಎಲ್ಲರೂ ಈಗಲೂ ವಿಚಾರಣೆ ಎದುರಿಸುತ್ತಾ ಜೈಲಿನಲ್ಲೆ ಕೊಳೆಯುತಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com