ಬಿಹಾರ ಚುನಾವಣೆ: ಇತರೆ ಪಕ್ಷಗಳ ವೈಫಲ್ಯವನ್ನು ತನ್ನ ಗೆಲುವಿಗೆ ಬಳಸಿಕೊಂಡ AIMIM

‌AIMIM ತನ್ನ ಅಭ್ಯರ್ಥಿಯನ್ನು ಅನಧಿಕೃತವಾಗಿ ಒಂದು ವರ್ಷ ಮುಂಚಿತವಾಗಿ ಘೋಷಿಸಿದ ಏಕೈಕ ಕ್ಷೇತ್ರ ಕೊಚಧಾಮನ್. ಆಗಿನಿಂದಲೂ ಸಾಕಷ್ಟು ಪೂರ್ವ ತಯಾರಿಯನ್ನೂ ಮಾಡಿಕೊಳ್ಳಲಾಗಿತ್ತು. ಇಲ್ಲಿ RJDಗೆ ಪ್ರಬಲ ನಾಯಕತ್ವ ಇಲ್ಲ
ಬಿಹಾರ ಚುನಾವಣೆ: ಇತರೆ ಪಕ್ಷಗಳ ವೈಫಲ್ಯವನ್ನು ತನ್ನ ಗೆಲುವಿಗೆ ಬಳಸಿಕೊಂಡ AIMIM

ಅಸಾದುದ್ದೀನ್ ಓವೈಸಿ ಅವರ ‌AIMIM ಪಕ್ಷವು ಈ ಬಾರಿ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಐದು ಸ್ಥಾನ ಗಳಿಸಿ ಅಚ್ಚರಿ ಮೂಡಿಸಿದೆ. ‌AIMIM ಅದ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಅಖ್ತರುಲ್ ಇಮಾನ್ ಅವರು ಬಿಹಾರ ಚುನಾವಣೆಗೆ ಮುಂಚೆಯೇ ಕಿಶಂಗಂಜ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹೆಚ್ಚಿನ ಪ್ರದೇಶಗಳ ಮತದಾರರಲ್ಲಿ ಜನಪ್ರಿಯರೇ ಆಗಿದ್ದರು.

ಕಿಶಂಗಂಜ್ ಸಂಸದೀಯ ಕ್ಷೇತ್ರದ ಅಡಿಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದು ‌AIMIM ಅವುಗಳಲ್ಲಿ ನಾಲ್ಕನ್ನು ಗೆದ್ದುಕೊಂಡಿದೆ. 2019 ರ ಉಪಚುನಾವಣೆಯಲ್ಲಿ ಗೆದ್ದಿದ್ದ ಕಿಶಂಗಂಜ್ ವಿಧಾನಸಭಾ ಕ್ಷೇತ್ರವನ್ನು ಪಕ್ಷ ಕಳೆದುಕೊಂಡಿತು. ಆದರೆ ಅದು ಅರೇರಿಯಾ ಲೋಕಸಭಾ ಕ್ಷೇತ್ರದಲ್ಲಿ ಬರುವ ಜೋಕಿಹತ್ ಕ್ಷೇತ್ರವನ್ನು ಗೆದ್ದು ಒಟ್ಟು ಸ್ಥಾನದ ಸಂಖ್ಯೆಯನ್ನು ಐದಕ್ಕೆ ಏರಿಸಿಕೊಂಡಿದೆ. ‌AIMIM ಎಲ್ಲಾ ಐದು ಸ್ಥಾನಗಳನ್ನು ಸುಲಭವಾಗೇ ಗೆದ್ದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಖ್ತರುಲ್ ಇಮಾನ್ ಅವರು ಅಮೂರ್ ಅವರನ್ನು 52,515 ಮತಗಳ ಅಂತರದಿಂದ ಸೋಲಿಸಿ ಗೆದ್ದರು, ಈ ಚುನಾವಣೆಯಲ್ಲಿ ಎರಡನೇ ಅತಿ ಹೆಚ್ಚು ಅಂತರದ ಗೆಲುವು ಇದೇ ಆಗಿದೆ. ಅಂತೆಯೇ, ಅಂಜರ್ ನಯೀಮಿ 45,215 ಮತಗಳ ಅಂತರದಿಂದ ಬಹದ್ದೂರ್ಗಂಜ್ ಕ್ಷೇತ್ರವನ್ನು ಗೆದ್ದರೆ ಕೊಜ ಧಾಮನ್ ಕ್ಷೇತ್ರವನ್ನು ಅಸೀಫ್ 36,143 ಮತಗಳಿಂದ ಗೆದ್ದಿದ್ದಾರೆ. ಸೈಯದ್ ರುಕ್ನುದ್ದೀನ್ ಅಹ್ಮದ್ ಅವರು ಬೈಸಿ ಕ್ಷೇತ್ರವನ್ನು 16,373 ಮತಗಳ ಅಂತರದಿಂದಲೂ ಮತ್ತು ಶಾನವಾಜ್ 7,383 ಮತಗಳಿಂದ ಜಾಕಿಹಾಟ್ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ.

ಕಳೆದ 2015 ರ ಬಿಹಾರ ಚುನಾವಣೆಯ ಸಂದರ್ಭದಲ್ಲಿ ‌AIMIM ಸೀಮಾಂಚಲ್ನಲ್ಲಿ ಒಟ್ಟು ಆರು ಸ್ಥಾನಗಳಿಗೆ ಸ್ಪರ್ಧಿಸಿತು. ಆದರೆ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಮತ್ತು ಒಂದರಲ್ಲಿ ಎರಡನೇ ಸ್ಥಾನ ಗಳಿಸಿತು. ನಾಲ್ಕು ವರ್ಷಗಳ ನಂತರ, 2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಇಮಾನ್ ಅವರು ಕಿಶಂಗಂಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದಾಗ, ಪಕ್ಷವು ಎರಡು ವಿಧಾನಸಭಾ ಕ್ಷೇತ್ರಗಳಾದ ಕೊಚಧಾಮನ್ ಮತ್ತು ಬಹದ್ದೂರ್ಗಂಜ್ಗಳಲ್ಲಿ ಮುನ್ನಡೆ ಸಾಧಿಸಿತು. ಇದು ಅಮೌರ್ ಮತ್ತು ಕಿಶಂಗಂಜ್ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆಯಿತು. ಅದೇ ವರ್ಷದ ಅಕ್ಟೋಬರ್ನಲ್ಲಿ, ಪಕ್ಷವು ಕಿಶನ್ಗಂಜ್ ವಿಧಾನಸಭಾ ಉಪಚುನಾವಣೆಯಲ್ಲಿ ಜಯಗಳಿಸಿತು.

‌AIMIM ತನ್ನ ಅಭ್ಯರ್ಥಿಯನ್ನು ಅನಧಿಕೃತವಾಗಿ ಒಂದು ವರ್ಷ ಮುಂಚಿತವಾಗಿ ಘೋಷಿಸಿದ ಏಕೈಕ ಕ್ಷೇತ್ರ ಕೊಚಧಾಮನ್. ಆಗಿನಿಂದಲೂ ಸಾಕಷ್ಟು ಪೂರ್ವ ತಯಾರಿಯನ್ನೂ ಮಾಡಿಕೊಳ್ಳಲಾಗಿತ್ತು. ಇಲ್ಲಿ RJDಗೆ ಪ್ರಬಲ ನಾಯಕತ್ವ ಇಲ್ಲ. 2014 ರಲ್ಲಿ ಅಖ್ತರುಲ್ ಇಮಾನ್ ಪಕ್ಷವನ್ನು ತೊರೆದಾಗ, ಇಂಟೆಖಾಬ್ ಬಬ್ಲು ಅವರು ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಬಲಪಡಿಸಿದರಾದರೂ ಅವರು 2018 ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಪ್ರದೇಶದಲ್ಲಿ ಪಕ್ಷವನ್ನು ಮುನ್ನಡೆಸಲು ಬಬ್ಲು ಅವರ ಪತ್ನಿ ಸೀಮಾ ಇಂಟೆಖಾಬ್ ಅವರಿಗೆ ಹೊಣೆ ನೀಡಲಾಯಿತು. ನಂತರ, RJD ಯುವ ಮುಖಂಡ ಸರ್ವಾರ್ ಆಲಂಗೆ ಪಕ್ಷ ಮುನ್ನಡೆಸಲು ಸೂಚಿಸಲಾಯಿತು. ಅವರ ಪತ್ನಿ ಕಿಶಂಗಂಜ್ ಜಿಲ್ಲಾ ಪರಿಷತ್ ಅಧ್ಯಕ್ಷರು ಆಗಿದ್ದಾರೆ. ಟಿಕೆಟ್ ವಿತರಣೆಯ ಸಮಯದಲ್ಲಿ ಹಾಲಿ ತ ಜೆಡಿಯು ಶಾಸಕ ಮುಜಾಹಿದ್ ಆಲಂ ಅವರಿಗೆ ಅಮಿಷ ಒಡ್ಡಲು ಪಕ್ಷ ಪ್ರಯತ್ನಿಸಿತು. ಮುಜಾಹಿದ್ RJD ಗೆ ಸೇರದಿದ್ದಾಗ, ಟಿಕೆಟ್ ಅನ್ನು ಸರ್ವಾರ್ ಆಲಂ ಅವರ ತಂದೆ ಶಾಹಿದ್ ಆಲಂಗೆ ನೀಡಲಾಯಿತು, ಅವರು ಕೇವಲ 16.18% ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ವಿನಮ್ರ ಜೀವನಶೈಲಿಗೆ ಹೆಸರುವಾಸಿಯಾದ ಆರು ಬಾರಿ ಶಾಸಕರಾದ ಕಾಂಗ್ರೆಸ್ ಮುಖಂಡ ಅಬ್ದುಲ್ ಜಲೀಲ್ ಮಸ್ತಾನ್ ಅವರು ಈಗಾಗಲೇ ಅಮೌರ್ನಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದರು. ಅವರು ಓವೈಸಿಯನ್ನು ‘ಜಾನುವಾರು’ ಎಂದು ಸಂಬೋಧಿಸಿದ್ದು ಅವರಿಗೇ ತಿರುಗುಬಾಣ ಆಯಿತು. ಅಲ್ಲದೆ ಪ್ರಚಾರ ಸಭೆಯಲ್ಲಿ ನಾವು ಓವೈಸಿಯ ಹಲ್ಲು ಮತ್ತು ಸೊಂಟವನ್ನು ಮುರಿದು ಮತ್ತೆ ಹೈದರಾಬಾದ್ ಗೆ ಕಳುಹಿಸುತ್ತೇವೆ ಎಂದು ಮಸ್ತಾನ್ ಹೇಳಿದ್ದೂ ಮುಳುವಾಯಿತು.

ಈ ನಡುವೆ ಸೀಮಾಂಚಲ್ನಲ್ಲಿ ವಿವಿಧ ಮುಸ್ಲಿಂ ಪಂಗಡಗಳನ್ನು ಒಂದುಗೂಡಿಸುವಲ್ಲಿ ಎಐಎಂಐಎಂ ಯಶಸ್ವಿಯಾಗಿದೆ. ಪಕ್ಷ ಗೆದ್ದ ಐದು ಸ್ಥಾನಗಳಲ್ಲಿ ಸುರ್ಜಪುರಿ ಮತ್ತು ಕುಲಾಹಿಯಾ ಮುಸ್ಲಿಮರು ಪ್ರಾಬಲ್ಯ ಹೊಂದಿದ್ದಾರೆ. ಅಮೌರ್ನಲ್ಲಿ, ‌AIMIM ಅಭ್ಯರ್ಥಿ ಅಕ್ತರುಲ್ ಇಮಾನ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಜಲೀಲ್ ಮಸ್ತಾನ್ ಸುರ್ಜಪುರಿ ಮುಸ್ಲಿಮರಾಗಿದ್ದರೆ, ಜೆಡಿಯುನ ಸಬಾ ಜಾಫರ್ ಕುಲಾಹಿಯಾ ಮುಸ್ಲಿಮರಾಗಿದ್ದರು. ಇಲ್ಲಿ ಕುಲಾಹಿಯಾ ಮುಸ್ಲಿಮರು ಜಾಫರ್ಗೆ ಮತ ನೀಡಿದರೆ ಅವರು ನೆಲೆ ಹೊಂದಿರುವ NDA ಮತದಾರರ ಸಹಾಯದಿಂದ ಸುಲಭವಾಗಿ ಗೆಲ್ಲಬಹುದು ಎಂದು ‌AIMIM ಮೊದಲು ಹೆದರಿತ್ತು. ಆದರೆ, ಅದೃಷ್ಟವು ‌AIMIM ಗೆ ಒಲಿದಿತ್ತು.

ಬಿಹಾರ ಚುನಾವಣೆ: ಇತರೆ ಪಕ್ಷಗಳ ವೈಫಲ್ಯವನ್ನು ತನ್ನ ಗೆಲುವಿಗೆ ಬಳಸಿಕೊಂಡ AIMIM
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಕರ್ತರಾದರೇ ಓವೈಸಿ ?

ಕುಲಾಹಿಯಾ ಮುಸ್ಲಿಂ ಪಂಗಡದ ದೊಡ್ಡ ನಾಯಕ, ದಿವಂಗತ ತಸ್ಲಿಮುದ್ದೀನ್ ಅವರ ಮಗ ಶಹನಾವಾಜ್ ಅವರು ಕೊನೆಯ ಕ್ಷಣದಲ್ಲಿ ‌AIMIM ಪಕ್ಷಕ್ಕೆ ಸೇರಿದರು. ಜೋಕಿಹಾಟ್ನಿಂದ ಸ್ಪರ್ಧಿಸಿದ್ದ ಶಹನಾವಾಜ್, ಓವೈಸಿ ಜೊತೆಗೆ ಅಮೌರ್ ಮತ್ತು ಬೈಸಿಯಲ್ಲೂ ಪ್ರಚಾರ ನಡೆಸಿದರು. ಇದರಿಂದ ಅಮೌರ್ ಮಾತ್ರವಲ್ಲದೆ, ಜೋಕಿಹಾಟ್ ಮತ್ತು ಬೈಸಿಯಲ್ಲಿನ ಸುರ್ಜಪುರಿ-ಕುಲಾಹಿಯಾ ಐಕ್ಯತೆಯಿಂದಲೂ ‌AIMIM ಜಯ ಗಳಿಸಿತು. ಬೈಸಿಯಲ್ಲಿ, ‌AIMIM ಮಾಜಿ ಸ್ವತಂತ್ರ ಶಾಸಕ ಸೈಯದ್ ರುಕ್ನುದ್ದೀನ್ ಅವರನ್ನು ಕಣಕ್ಕಿಳಿಸಿತು, ನಂತರ ಅವರು ಜೆಡಿಯು ಸೇರಿದರು. ರುಕ್ನುದ್ದೀನ್ ಸುರ್ಜಪುರಿ ಅಥವಾ ಕುಲಾಹಿಯಾ ಮುಸ್ಲಿಂ ಅಲ್ಲ ಮತ್ತು ಆರು ಬಾರಿ ಶಾಸಕರಾಗಿದ್ದ RJDಯ ಅಬ್ದುಸ್ ಸುಭಾನ್, ವಿರುದ್ಧ ಸ್ಪರ್ಧಿಸಿದರು. ಅಬ್ದುಸ್ ಸುಭಾನ್ ಅವರು ಭಾರಿ ಆಡಳಿತ ವಿರೋಧ ಎದುರಿಸುತ್ತಿದ್ದರು. ಅಮೌರ್ ಮತದಾರರಂತೆ ಬೈಸಿಯ ಮುಸ್ಲಿಮರು ಸಹ ಬದಲಾವಣೆಗೆ ಮತ ಚಲಾಯಿಸಲು ಕಾಯುತಿದ್ದರು. ಹಾಗಾಗಿ ಗೆಲುವು ಸುಲಭವಾಯಿತು.

ಓವೈಸಿ ಮೇಲೆ ದಾಳಿ ಮಾಡುವ ಮೂಲಕ ಕಾಂಗ್ರೆಸ್ ‌AIMIM ಅನ್ನು ಎದುರಿಸಲು ಪ್ರಯತ್ನಿಸಿತು. ಪಕ್ಷದ ನಾಯಕ ಮತ್ತು ಉರ್ದು ಕವಿ ಇಮ್ರಾನ್ ಪ್ರತಾಪಗರಿ ಅವರು ಓವೈಸಿಯನ್ನು ಎದುರಿಸಲು ಬಹದ್ದೂರ್ ಗಂಜ್ ನಲ್ಲಿ ಕಾಂಗ್ರೆಸ್ ಅಬ್ಯರ್ಥಿ ತೌಸಿಫ್ ಪರ ಅನೇಕ ರ್ಯಾಲಿಗಳನ್ನು ನಡೆಸಿದರು. ಪ್ರಚಾರ ಭಾಷಣದಲ್ಲಿ ಅವರು ಶಹೀನ್ ಬಾಗ್ ಪ್ರತಿಭಟನೆಯಲ್ಲಿ ತೌಸಿಫ್ ಪಾಲ್ಗೊಂಡಿದ್ದ ಛಾಯಾಚಿತ್ರವನ್ನು ತೋರಿಸಲು ಮತ್ತು ‌AIMIM ‘ಸ್ನೇಹಿತ’ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಬಿಜೆಪಿಗೆ ಸಾಮೀಪ್ಯದ ಬಗ್ಗೆಯೂ ಪ್ರಶ್ನಿಸಿದರು ಆದರೆ ಅದರಲ್ಲಿ ಯಾವುದೂ ಕೆಲಸ ಮಾಡಲಿಲ್ಲ. ಇದು ಕಾಂಗ್ರೆಸ್ ಗೆ ಮತ್ತಷ್ಟು ಹಿನ್ನಡೆ ಆಯಿತು.

ಬಿಹಾರ ಚುನಾವಣೆ: ಇತರೆ ಪಕ್ಷಗಳ ವೈಫಲ್ಯವನ್ನು ತನ್ನ ಗೆಲುವಿಗೆ ಬಳಸಿಕೊಂಡ AIMIM
ಬಿಹಾರವನ್ನು NDA ಉಳಿಸಿಕೊಂಡರೂ ದೇಶದ ಹೊಸ ನಾಯಕನಾಗಿ ಹೊರಹೊಮ್ಮಿದ ತೇಜಸ್ವಿ ಯಾದವ್

ಮೌಲಾನ ಅಬ್ದುಲ್ಲಾ ಸಲೀಮ್ ಚತುರ್ವೇದಿ ಅವರ ನೇತೃತ್ವದಲ್ಲಿ ‌AIMIM ಮೊದಲೇ ಜೋಕಿಹಾತ್ನಲ್ಲಿ ಈ ಅವರು ಯುವಕರ ತಂಡವನ್ನು ಚುನಾವಣೆಗೆ ಸಿದ್ಧಪಡಿಸಿದರು. ಇದು ಜಯಕ್ಕೆ ಸುಲಬವಾಯಿತು. ಆದಾಗ್ಯೂ, ‌AIMIM ಐದು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರೂ, ಕಿಶಂಗಂಜ್ ವಿಧಾನಸಭೆ ಕ್ಷೇತ್ರದ ಸೋಲು ಹಿನ್ನಡೆಯಾಗಿದೆ. ‌AIMIM ಅಬ್ಯರ್ಥಿ ಕಮ್ರುಲ್ ಹೋಡಾ ಕಳೆದ ವರ್ಷ ಅಕ್ಟೋಬರ್ನಲ್ಲಿ ಈ ಕಾಂಗ್ರೆಸ್ ಭದ್ರಕೋಟೆಯನ್ನು ಗೆದ್ದಿದ್ದರು. ಒಂದು ವರ್ಷದ ನಂತರ, ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಮತ್ತೆ ಗೆದ್ದಿದ್ದು, ‌AIMIM ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com