ಬಿಹಾರವನ್ನು NDA ಉಳಿಸಿಕೊಂಡರೂ ದೇಶದ ಹೊಸ ನಾಯಕನಾಗಿ ಹೊರಹೊಮ್ಮಿದ ತೇಜಸ್ವಿ ಯಾದವ್

ಚುನಾವಣಾ ಲೆಕ್ಕಾಚಾರದಲ್ಲಿ ಬಿಜೆಪಿಯ ನಾಯಕತ್ವವು ತಾನು ನಿರೀಕ್ಷಿಸಿದ್ದನ್ನು ಪಡೆದುಕೊಂಡಿದೆ. ಬಿಜೆಪಿ ಒಂದೇ ಪಕ್ಷವು ತಾನು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಶೇಕಡಾ 70 ರಷ್ಟು ಸ್ಥಾನ ಗಳಿಸುವ ಮೂಲಕ 74 ಸ್ಥಾನಗಳನ್ನು ಗೆದ್ದಿದೆ.
ಬಿಹಾರವನ್ನು NDA ಉಳಿಸಿಕೊಂಡರೂ ದೇಶದ ಹೊಸ ನಾಯಕನಾಗಿ ಹೊರಹೊಮ್ಮಿದ ತೇಜಸ್ವಿ ಯಾದವ್

ಭಾರೀ ಜಿದ್ದಾಜಿದ್ದಿನ ಸ್ಪರ್ದೆ ಇದ್ದ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (NDA) ವಿಜೇತನಾಗಿ ಹೊರ ಹೊಮ್ಮಿದೆ. ಚುನಾವಣಾ ಸಂದರ್ಭದಲ್ಲಿ ಹತ್ತಾರು ವೈಜ್ಞಾನಿಕ ಸಮೀಕ್ಷೆಗಳು RJD ನೇತೃತ್ವದ ಮಹಾಘಟಬಂಧನವು ಹೆಚ್ಚಿನ ಸ್ಸ್ಥಾನ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದೆಂದು ತಿಳಿಸಿದ್ದವು. ಆದರೆ ಈ ಎಲ್ಲ ಸಮೀಕ್ಷೆಗಳನ್ನೂ ಬದಿಗೊತ್ತಿ NDA ಗೆಲುವು ಸಾಧಿಸುವಲ್ಲಿ ಯಶಸ್ವಿ ಆಗಿದೆ.

ಈ ಚುನಾವಣಾ ಲೆಕ್ಕಾಚಾರದಲ್ಲಿ ಬಿಜೆಪಿಯ ನಾಯಕತ್ವವು ತಾನು ನಿರೀಕ್ಷಿಸಿದ್ದನ್ನು ಪಡೆದುಕೊಂಡಿದೆ. ಬಿಜೆಪಿ ಒಂದೇ ಪಕ್ಷವು ತಾನು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಶೇಕಡಾ 70 ರಷ್ಟು ಸ್ಥಾನ ಗಳಿಸುವ ಮೂಲಕ 74 ಸ್ಥಾನಗಳನ್ನು ಗೆದ್ದಿದೆ. ಈ ಚುನಾವಣೆಯಲ್ಲಿ ತನ್ನ ಪಾಲುದಾರ ಪಕ್ಷ ನಿತೀಶ್ ಕುಮಾರ್ ಅವರ ಜೆಡಿಯುವನ್ನು ಹಿರಿಯ ಪಾಲುದಾರನ ಸ್ಥಾನದಿಂದ ಕಿರಿಯ ಪಾಲುದಾರರ ಸ್ಥಾನಮಾನಕ್ಕೆ ಇಳಿಸುವ ಪ್ರಯತ್ನ ಯೋಜಿಸಿದಂತೆಯೇ ಕೆಲಸ ಮಾಡಿದೆ. ವಿರೋಧ ಪಕ್ಷಗಳಲ್ಲಿ ಮುಖ್ಯವಾಗಿ ವ್ಯವಸ್ಥಿತ ಸಂಘಟನಾ. ಸಾಮರ್ಥ್ಯದ ಕೊರತೆ ಇರುವುದನ್ನೂ ಈ ಚುನಾವಣೆ ತಿಳಿಸಿದೆ. ಆದರೆ, ಈ ಚುನಾವಣೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಆದೇಶವನ್ನು ನೀಡಿದೆ. ಜತೆಗೇ ಈ ಚುನಾವಣೆಯು ಭಾರತೀಯ ರಾಜಕೀಯದಲ್ಲಿ ತೇಜಸ್ವಿ ಯಾದವ್ ಎಂಬ ಹೊಸ ನಾಯಕನನ್ನು ಹುಟ್ಟುಹಾಕಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಷ್ಟ್ರಗಳ ಜನತಾದಳ (RJD) ಪಕ್ಷವು 75 ಸ್ಥಾನಗಳನ್ನು ಹೊಂದಿರುವ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವುದರ ಜೊತೆಗೆ, ಸುಮಾರು 3 ಮಿಲಿಯನ್ ಮತಗಳನ್ನು ಅಥವಾ 40% ಮತಗಳನ್ನು ಪಡೆಯುವ ಮೂಲಕ 2015 ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನದನ್ನು ಗಳಿಸಿದೆ ಎಂದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಇದು ನಿಚ್ಚಳವಾಗಿ ಯಾದವ್‌ರ ಪಕ್ಷವು ಮುಸ್ಲಿಮರು ಮತ್ತು ಯಾದವರ ಮತಗಳನ್ನೂ ಬಾಚಿಕೊಂಡು ಇನ್ನೂ ವಿಸ್ತಾರವಾಗಿ ಹೆಚ್ಚಿನ ಮತಗಳನ್ನು ಗಳಿಸುವಲ್ಲಿ ಯಶಸ್ವಿ ಆಗಿದೆ.

ಗಮನಾರ್ಹವಾಗಿ RJD ಪಕ್ಷದ ಅದರ ಮತ ಗಳಿಕೆಯು - 18.3% ರಿಂದ 23.1% ಕ್ಕೆ ಏರಿಕೆಯಾಗಿದೆ. ಈ ಮತಗಳು - ಜೆಡಿ(ಯು)ಗಿಂತ ಬಿಜೆಪಿಯ ಕೋಟಾದಿಂದ ಹೆಚ್ಚು ಬಂದಿದೆ. ಬಿಜೆಪಿಯ ಮತ ಗಳಿಕೆಯು 24.4% ರಿಂದ 19.5% ಕ್ಕೆ ಇಳಿದಿದೆ. ಇದು 2015 ರಲ್ಲಿ ಮಾಡಿದ್ದಕ್ಕಿಂತ 1.1 ಮಿಲಿಯನ್ ಮತಗಳನ್ನು ಕಡಿಮೆ ಗಳಿಸಿದೆ. ಮೈತ್ರಿಕೂಟದ ಕಾರಣದಿಂದಾಗಿ ಈ ಬಾರಿ ಸ್ಪರ್ಧಿಸಿದ ಕಡಿಮೆ ಸಂಖ್ಯೆಯ ಸೀಟುಗಳಿಗೆ ಅನುಗುಣವಾಗಿ ಕಡಿಮೆ ಇದ್ದರೂ ಮತಗಳಿಕೆ ಕುಸಿತವನ್ನೇ ದಾಖಲಿಸಿದೆ. ಇದರ ಮಿತ್ರ ಪಕ್ಷ ಜೆಡಿಯು ಪಕ್ಷದ ಮತಗಳ ಪಾಲು 16.8% ರಿಂದ 15.8% ಕ್ಕೆ ಇಳಿದಿದೆ. ವಾಸ್ತವವಾಗಿ, ಬಿಜೆಪಿ ಅಭ್ಯರ್ಥಿಗಳು ಜೆಡಿಯು ಮತಗಳನ್ನು ಪಡೆದುಕೊಂಡಿದ್ದಾರೆಂದು ತೋರುತ್ತದೆ. ಆದರೆ ಜೆಡಿಯು ಸ್ಪರ್ಧಿಸಿದ ಸ್ಥಾನಗಳಲ್ಲಿ ಮೇಲ್ಜಾತಿಯ ಬಿಜೆಪಿ ಮತದಾರರ ವಿಷಯದಲ್ಲೂ ಅದು ಆಗಲಿಲ್ಲ. ಅವರು LJP ಅಥವಾ RJD ಯ ಟಿಕೆಟ್ಗಳಲ್ಲಿ ಸ್ಪರ್ಧಿಸುತ್ತಿದ್ದ ಬಂಡಾಯ ಬಿಜೆಪಿ ಅಥವಾ ಮೇಲ್ಜಾತಿಯ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ. ಅಲ್ಲದೆ ಕೆಲವು ಸಂದರ್ಭಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮತ್ತು ಸಣ್ಣ ಪಕ್ಷಗಳಿಗೂ ಮತ ಚಲಾಯಿಸಿದ್ದಾರೆ.

ನುರಿತ ರಾಜಕಾರಣಿ ಮತ್ತು ಮಹಾಗಟಬಂಧನ್ ನ ರೂವಾರಿ ಆಗಿರುವ ಲಾಲೂ ಪ್ರಸಾದ್ ಯಾದವ್ ಅವರ ಯೋಜನೆಯಂತೆ ಮಿತ್ರ ಪಕ್ಷಗಳು ಈ ಬಾರಿ ಉತ್ತಮ ಸ್ಪರ್ದೆಯನ್ನೇ ನೀಡಿದವು. 2015 ರಲ್ಲಿ ನಡೆದ ಚುನಾವಣೆಯ ಹಿನ್ನೆಲೆಯಲ್ಲಿ ಇದನ್ನು ಪರಿಗಣಿಸಿದರೆ ಆಗ ಬಿಜೆಪಿಯು ಕಡಿಮೆ ಸಂಪನ್ಮೂಲ ಮತ್ತು ಕಡಿಮೆ ಭದ್ರತೆಯನ್ನು ಹೊಂದಿದ್ದ ಸಮಯವಾಗಿತ್ತು. ಐದು ವರ್ಷಗಳ ನಂತರ, ಬಿಜೆಪಿ ಆಡಳಿತ ಒಕ್ಕೂಟದ ಭಾಗವಾಗಿದೆ, ಅದರಲ್ಲಿ ನಿತೀಶ್ ಕುಮಾರ್ ನಾಯಕ ಆಗಿದ್ದು , ಲಾಲು ಜೈಲಿನಲ್ಲಿ ದಾಖಲಾಗಿದ್ದಾರೆ. ಅವರಿಗೆ ಅಲ್ಲಿಂದ ಹೊರಬರಲು ಇನ್ನೂ ಜಾಮೀನು ಸಿಕ್ಕಿಲ್ಲ. ಈ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರ ಪಕ್ಷ ಮತ್ತು ಅದರ ಮಿತ್ರರಾಷ್ಟ್ರಗಳು ತೇಜಸ್ವಿ ಯಾದವ್ ಅವರ ನಾಯಕತ್ವದಲ್ಲಿ ಪ್ರಚಾರವನ್ನು ಉತ್ತಮವಾಗೇ ಮುನ್ನಡೆಸಿವೆ. ಇದಲ್ಲದೆ, ಬಿಹಾರದಲ್ಲಿ ಯಾದವ್ ರಿಗೆ ವಿರೋಧವು ಕೆಲವು ತಿಂಗಳ ಹಿಂದಿನವರೆಗೂ ಕಂಡು ಬಂದಿರಲಿಲ್ಲ ಅದಕ್ಕಾಗಿಯೇ, 2015 ರ ಲ್ಲಿ ಗಳಿಸಿಕೊಂಡಿದ್ದ 80 ಸ್ಥಾನಗಳಿಗೆ ಹೋಲಿಸಿದರೆ ಈ ಬಾರಿ ಆರ್ಜೆಡಿ ಗಳಿಸಿರುವ 75 ಸ್ಥಾನಗಳ ಗೆಲುವನ್ನು ಯುವ ನಾಯಕ ಯಾದವ್ ಶ್ಲಾಘನೀಯ ಸಾಧನೆ ಎಂದು ಪರಿಗಣಿಸಬೇಕು. ಈ ಚುನಾವಣೆಯಲ್ಲಿ ಉತ್ತಮ ಸ್ಪರ್ದೆ ನೀಡುವ ಮೂಲಕ 31 ವರ್ಷದ ಯುವ ರಾಜಕಾರಣಿ ಯಾದವ್ , ತನ್ನ ತಂದೆಯ ನೆರಳಿನಿಂದ ಯಶಸ್ವಿಯಾಗಿ ಹೊರಬಂದಿದ್ದಾರೆ. ಯಾದವ್ ಅವರು ರಾಜಕಾರಣದ ಪಟ್ಟುಗಳನ್ನು ಕಲಿತಿದ್ದಾರೆ ಮತ್ತು ರಾಜ್ಯದ ಯುವ ಜನಾಂಗವನ್ನು ತಮ್ಮ ಭಾಷಣದಿಂದ ಸೆಳೆಯಬಲ್ಲ ಶಕ್ತಿಯನ್ನೂ ಹೊಂದಿರುವುದನ್ನು ಸಾಬೀತು ಮಾಡಿದ್ದಾರೆ.

ಅದಕ್ಕಿಂತ ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಇತರ ಚುನಾವಣೆಗಳಿಗೆ ಹೋಲಿಸಿದರೆ ಬಿಹಾರದಲ್ಲಿ ಈ ಬಾರಿ ಚುನಾವಣಾ ಪ್ರಚಾರವು ಎಂದಿನ ದ್ವೇಷ , ವೈರತ್ವದಿಂದ ಹೊರತಾಗಿದ್ದು ಶಾಂತಿಯುತವಾಗಿತ್ತು. ಇದರ ಯಶಸ್ಸು ಆರ್ಜೆಡಿ ನಾಯಕ ತೇಜಸ್ವಿ ಯಾದವರ್ ರಿಗೆ ಸಲ್ಲುತ್ತದೆ. ಬಿಜೆಪಿ ತನ್ನ ಪ್ರಚಾರದ ಸಮಯದಲ್ಲಿ ಕಾಶ್ಮೀರ, ಸಿಎಎ ಮತ್ತು ರಾಮ ಮಂದಿರದಂತಹ ವಿಭಜಕ ಸಮಸ್ಯೆಗಳನ್ನು ಹುಟ್ಟುಹಾಕಲು ಪ್ರಯತ್ನಿಸಿತಾದರೂ ಇದರಲ್ಲಿ ಯಶ ಗಳಿಸಲಿಲ್ಲ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುತ್ತಲೂ ಉಂಟಾದ ವಿವಾದಗಳನ್ನೂ ಕೂಡ ಬಿಜೆಪಿ ಬಳಸಿಕೊಳ್ಳುವಲ್ಲಿ ಯಶಸ್ವಿ ಆಗಲಿಲ್ಲ. ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಮೊದಲಿದ್ದ “ಜಂಗಲ್-ರಾಜ್” ನ ಚಿತ್ರಣವನ್ನು ಭಾಷಣಗಳಲ್ಲಿ ಪ್ರಚಾರಿಸಿದರೂ , ಯಾದವ್ ಮತ್ತು ಅವರ ಕುಟುಂಬದ ಮೇಲೆ ಅನೇಕ ಸಂದರ್ಭಗಳಲ್ಲಿ ವೈಯಕ್ತಿಕ ದಾಳಿಗಳನ್ನು ನಡೆಸಿದದರಾದರೂ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ.

ಬಿಹಾರವನ್ನು NDA ಉಳಿಸಿಕೊಂಡರೂ ದೇಶದ ಹೊಸ ನಾಯಕನಾಗಿ ಹೊರಹೊಮ್ಮಿದ ತೇಜಸ್ವಿ ಯಾದವ್
ಬಿಹಾರದಲ್ಲಿ ಮಹಾಘಟಬಂಧನವೇ ಸರ್ಕಾರ ರಚಿಸುತ್ತೆ: ತೇಜಸ್ವಿ ಯಾದವ್

ಆದರೆ ಈ ಎಲ್ಲ ವಿಷಯಗಳಲ್ಲೂ ತೇಜಶ್ವಿ ಯಾದವ್ ಪ್ರಬುದ್ಧತೆಯನ್ನು ಪ್ರದರ್ಶಿಸಿದರು, ಇದು ಅವರ ವಯಸ್ಸಿನ ಜನರಲ್ಲಿ ವಿರಳವಾಗಿ ಕಂಡುಬರುತ್ತದೆ. ಅವರು ಶಿಕ್ಷಣ ಮತ್ತು ಉದ್ಯೋಗಗಳ ಅವಳಿ ವಿಷಯಗಳ ಬಗ್ಗೆ ಗಮನಹರಿಸಿದರು, ಅದನ್ನು ಅವರು ಮಹಗಟಬಂಧನ ಮುಖ್ಯ ಚುನಾವಣಾ ಘೋಷಣೆಯನ್ನಾಗಿ ಮಾಡಿಕೊಂಡರು. ಈ ಚುನಾವಣೆಗೆ ಮಾತ್ರವಲ್ಲದೆ ದೇಶದ ಸಾಂಕ್ರಾಮಿಕ ಕೋವಿಡ್ ನಂತರದ ಮುಂದಿನ ರಾಜಕಾರಣಕ್ಕೂ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಅವರು ಯಶಸ್ವಿಯಾದರು. ರಾಜ್ಯದ ಯುವಕರಿಗೆ ಯಾದವ್ ಅವರು ಒಂದು ಮಿಲಿಯನ್ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದರು. ಇದರಿಂದಾಗಿ ಇದೀಗ ಬಿಜೆಪಿ ಅನಿವಾರ್ಯವಾಗಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲೇಬೇಕಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ನಡೆಯುವ ಚುನಾವಣೆಗಳು ಬಿಹಾರದ ಅನುಭವವನ್ನು ಪುನರಾವರ್ತಿಸಬೇಕಾದರೆ, ಬಿಹಾರದ ಜನರು ಹೆಮ್ಮೆಯಿಂದ ನಾವು ದಾರಿ ತೋರಿಸಿದ್ದೇವೆ ಎಂದು ಹೇಳಬಹುದಾಗಿದೆ. ಹೇಗೆಂದರೆ ಯುವ ನಾಯಕ ತೇಜಶ್ವಿ ಯಾದವ್ ಅವರು ಯುವ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಅಲ್ಲದೆ ಜನರು ಅವರ ಪಕ್ಷಕ್ಕೆ ಶೇಕಡವಾರು ಹೆಚ್ಚಿನ ಸಂಖ್ಯೆಯ ಮತಗಳನ್ನು ನೀಡುವ ಮೂಲಕ ಅವರನ್ನು ಈ ಚುನಾವಣೆಯ ಹೀರೋ ಮಾಡಿದ್ದು ಕೋವಿಡ್ 19 ನಂತರವೂ ರಾಜಕೀಯ ಶಕ್ತಿಯಾಗಲಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com