ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ 1.4 ಲಕ್ಷ ಕೋಟಿ ರೂ ವಿತರಿಸಲಾಗಿದೆ: ನಿರ್ಮಲಾ ಸೀತಾರಾಮನ್

ಜಿಎಸ್ಟಿ ಸಂಗ್ರಹ 10 ಶೇಕಡಾ ಹೆಚ್ಚಾಗಿದೆ ಹಾಗೂ ಬ್ಯಾಂಕ್ ಕ್ರೆಡಿಟ್ 5.1 ಶೇಕಡಾ ಸುಧಾರಿಸಿದೆ, ಇಂಧನ ಬಳಕೆಯ ಬೆಳವಣಿಗೆ ಹೆಚ್ಚಾಗಿದೆ ಎಂದು ನಿರ್ಮಲಾ ಸೀತರಾಮನ್‌ ಹೇಳಿದ್ದಾರೆ
ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ 1.4 ಲಕ್ಷ ಕೋಟಿ ರೂ ವಿತರಿಸಲಾಗಿದೆ: ನಿರ್ಮಲಾ ಸೀತಾರಾಮನ್

ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 1.4 ಲಕ್ಷ ಕೋಟಿ ರೂ.ಗಳನ್ನು ರೈತರಿಗೆ ವಿತರಿಸಲಾಗಿದೆ. NBFCS/HFC ವಿಶೇಷ ಯೋಜನೆಯ ಮೂಲಕ 7,227 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಎಮೆರ್ಜೆನ್ಸಿ ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ ಒಟ್ಟು 61 ಲಕ್ಷ ಮಂದಿಗೆ 2.05 ಲಕ್ಷ ಕೋಟಿ ರೂ. ಮಂಜೂರಾಗಿದ್ದು ಅದರಲ್ಲಿ 1.52 ಲಕ್ಷ ಕೋಟಿ ರೂ. ವಿತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಪತ್ರಿಕಾಗೋಷ್ಟಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌, ಒನ್ ನೇಷನ್, ಒನ್ ರೇಷನ್ ಕಾರ್ಡ್ ಅಡಿಯಲ್ಲಿ 28 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೆಶಗಳ 68.6 ಕೋಟಿ ಭಾರತೀಯರನ್ನು ತರಲಾಗಿದೆ ಎಂದು ಹೇಳಿದ್ದಾರೆ. ಜಿಎಸ್ಟಿ ಸಂಗ್ರಹ 10 ಶೇಕಡಾ ಹೆಚ್ಚಾಗಿದೆ ಹಾಗೂ ಬ್ಯಾಂಕ್ ಕ್ರೆಡಿಟ್ 5.1 ಶೇಕಡಾ ಸುಧಾರಿಸಿದೆ; ಇಂಧನ ಬಳಕೆಯ ಬೆಳವಣಿಗೆ ಹೆಚ್ಚಾಗಿದೆ. NABARD ಮೂಲಕ ರೈತರಿಗೆ ಹೆಚ್ಚುವರಿ 25,000 ಕೋಟಿ ರೂ. ವಿತರಿಸಲಾಗಿದೆ. ಪಿಎಂ ಇದುವರೆಗೂ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ ಇದುವರೆಗೆ 1 ಕೋಟಿ 83 ಲಕ್ಷ ಅರ್ಜಿಗಳು ಬಂದಿವೆ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಕ್ಟೋಬರ್‌ನಲ್ಲಿ ಇಂಧನ ಬಳಕೆ ವರ್ಷದಿಂದ ವರ್ಷಕ್ಕೆ 12 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ, ಬ್ಯಾಂಕ್ ಸಾಲದ ಬೆಳವಣಿಗೆ 5.1 ಶೇಕಡಾ ಮತ್ತು ಷೇರು ಮಾರುಕಟ್ಟೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿವೆ ಎಂದು ಹೇಳಿದ್ದಾರೆ.

ಕ್ಯೂ 3 ನಲ್ಲಿ ಆರ್ಥಿಕತೆಯು ಸಕಾರಾತ್ಮಕ ಬೆಳವಣಿಗೆಗೆ ಮರಳುವ ಸಾಧ್ಯತೆಯಿದೆ ಎಂದು ಆರ್‌ಬಿಐ ಮುನ್ಸೂಚನೆ ನೀಡಿದೆ ಎಂದು ಹೇಳಿದ ಸಚಿವೆ, ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿಸ್ ದೇಶದ ಬೆಳವಣಿಗೆಯ ಸಂಖ್ಯೆಯನ್ನು ಮರು ಮೌಲ್ಯಮಾಪನ ಮಾಡಿದೆ ಎಂದು ತಿಳಿಸಿದ್ದಾರೆ.

ಉತ್ಪಾದನಾ ಕ್ಷೇತ್ರವನ್ನು ಹೆಚ್ಚಿಸುವ ಯೋಜನೆಯನ್ನು ಘೋಷಿಸಿದ ಒಂದು ದಿನದ ನಂತರ ಸೀತಾರಾಮನ್ ಪತ್ರಿಕಾ ಸಭೆ ನಡೆಸಿದ್ದು, ಟೆಲಿಕಾಂ, ವಾಹನಗಳು ಮತ್ತು ಔಷಧೀಯ ವಸ್ತುಗಳು ಸೇರಿದಂತೆ ಹತ್ತು ಪ್ರಮುಖ ಕ್ಷೇತ್ರಗಳಿಗೆ ಉತ್ಪಾದನಾ-ಲಿಂಕ್ಡ್ ಪ್ರೋತ್ಸಾಹಕ (PLI) ಯೋಜನೆಗೆ ಸರ್ಕಾರ ಬುಧವಾರ ಅನುಮೋದನೆ ನೀಡಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com