ಗಡಿಪ್ರದೇಶದಲ್ಲಿ ಕಳೆದ 50 ವರ್ಷಗಳಿಗಿಂತ ಹೆಚ್ಚು ಅಭಿವೃದ್ಧಿಯನ್ನು ಮೋದಿ ಆಡಳಿತ ಮಾಡಿದೆ- ಅಮಿತ್ ಶಾ

ಪಾಕಿಸ್ತಾನದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ಕಚ್, ಬನಸ್ಕಂತ ಮತ್ತು ಪಟಾನ್ ಜಿಲ್ಲೆಗಳ ಇತರ ಚುನಾಯಿತ ಪ್ರತಿನಿಧಿಗಳೊಂದಿಗೆ ಗ್ರಾಮದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಡಿಪ್ರದೇಶದಲ್ಲಿ ಕಳೆದ 50 ವರ್ಷಗಳಿಗಿಂತ ಹೆಚ್ಚು ಅಭಿವೃದ್ಧಿಯನ್ನು ಮೋದಿ ಆಡಳಿತ ಮಾಡಿದೆ- ಅಮಿತ್ ಶಾ

ನರೇಂದ್ರ ಮೋದಿ ಸರ್ಕಾರದ ಕಳೆದ ಆರು ವರ್ಷಗಳಲ್ಲಿ ದೇಶದ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಿಂದಿನ 50 ವರ್ಷಗಳಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಕ್ಷಣಾ ಪಡೆಗಳ ವಾಯುದಾಳಿ ಮತ್ತು ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಉಲ್ಲೇಖಿಸಿದ ಅಮಿತ್ ಶಾ, ಭಾರತವು ಕೇವಲ "ರಾಜತಾಂತ್ರಿಕ ಹೇಳಿಕೆ" ನೀಡುವ ಹಿಂದಿನ ಅಭ್ಯಾಸಕ್ಕಿಂತ ಹೆಚ್ಚಾಗಿ ಶತ್ರುಗಳಿಗೆ ಸೂಕ್ತವಾದ ಮರು-ಉತ್ತರವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಗುಜರಾತ್‌ನ ಕಚ್ ಜಿಲ್ಲೆಯ ಧೋರ್ಡೊ ಗ್ರಾಮದಲ್ಲಿ ನಡೆದ 'ಸಿಮಂತ್ ಕ್ಷೇತ್ರ ವಿಕಾಸೋತ್ಸವ -2020' ನಲ್ಲಿ ಅವರು ಜನರನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಗಡಿಯಲ್ಲಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ಕಚ್, ಬನಸ್ಕಂತ ಮತ್ತು ಪಟಾನ್ ಜಿಲ್ಲೆಗಳ ಇತರ ಚುನಾಯಿತ ಪ್ರತಿನಿಧಿಗಳೊಂದಿಗೆ ಗ್ರಾಮದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ವಲಸೆಯನ್ನು ನಿಲ್ಲಿಸಲು ಗಡಿನಾಡ ಹಳ್ಳಿಗಳಿಗೆ ನೀರು, ವಿದ್ಯುತ್ ಒದಗಿಸುವ ಬಗ್ಗೆ ಒತ್ತು ನೀಡಿದ್ದರು. ಆದರೆ, ಅವರ ಮರಣದ ನಂತರ ಕಾಂಗ್ರೆಸ್ ಸರ್ಕಾರ ಅದನ್ನು ಜಾರಿಗೆ ತಂದಿಲ್ಲ. "ಆದರೆ ಈಗ ಮೋದಿಜಿ ಆ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ" ಎಂದು ಎಂದು ಅಮಿತ್ ಶಾ ಹೇಳಿದ್ದಾರೆ.

2008 ಮತ್ತು 2014 ರ ನಡುವೆ ಗಡಿ ಪ್ರದೇಶಗಳಲ್ಲಿ ಕೇವಲ 170 ಕಿ.ಮೀ ರಸ್ತೆಗಳು ಮರುನಿರ್ಮಾಣ ಗೊಂಡಿದ್ದರೆ, ಮೋದಿ ಸರ್ಕಾರದ 2014 ಮತ್ತು 2020 ರ ನಡುವೆ 480 ಕಿ.ಮೀ. ರಸ್ತೆ ಮರುನಿರ್ಮಾಣಗೊಂಡಿದೆ ಎಂದು ಅವರು ಹೇಳಿದ್ದಾರೆ.

2008 ಮತ್ತು 2014 ರ ನಡುವೆ ಗಡಿಯ ಬಳಿ ನಿರ್ಮಿಸಲಾದ ಕೇವಲ ಒಂದು ಸುರಂಗವನ್ನು ಹಾಗೂ , 2014 ಮತ್ತು 2020 ರ ನಡುವೆ ಪೂರ್ಣಗೊಂಡ ಆರು ಸುರಂಗಗಳನ್ನು ಹೋಲಿಸಿದ ಅಮಿತ್ ಶಾ, “ಈ ಅಂಕಿ ಅಂಶಗಳು ನಮ್ಮ ಆದ್ಯತೆಯನ್ನು ತೋರಿಸುತ್ತವೆ. ಗಡಿ ಪ್ರದೇಶದ ಅಭಿವೃದ್ಧಿಗೆ ನಾವು 2020-21ನೇ ಸಾಲಿನಲ್ಲಿ, 11,800 ಕೋಟಿ ರುಪಾಯಿ ಬಜೆಟ್ ಅನ್ನು ನಿಗದಿಪಡಿಸಿದ್ದೇವೆ."

"ಮೋದಿ ಸರ್ಕಾರದ ಅಡಿಯಲ್ಲಿ ಕಳೆದ ಆರು ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ನಡೆಸಿದ ಮೂಲಸೌಕರ್ಯ ಅಭಿವೃದ್ಧಿ ಹಿಂದಿನ 50 ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನದಾಗಿದೆ" ಎಂದು ಅವರು ಹೇಳಿದ್ದಾರೆ. ದೇಶವು ತನ್ನ ಆಂತರಿಕ ಭದ್ರತೆಯನ್ನು ಬಲಪಡಿಸದೆ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ಗಡಿ ಪ್ರದೇಶಗಳಿಂದ ಜನರು ವಲಸೆ ಹೋಗುವುದನ್ನು ನಿಲ್ಲಿಸುವುದು ಅವಶ್ಯಕ ಎಂದು ಅವರು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com