ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕುನಾಲ್‌ ಕಮ್ರಾ ಬೆಂಬಲಕ್ಕೆ ನಿಂತ ಕಣ್ಣನ್‌ ಗೋಪಿನಾಥನ್‌

ಕುನಾಲ್‌ ಕಮ್ರಾ ಅವರ ಯಾವ ಟ್ವೀಟ್‌ನಿಂದಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಯಿತೋ, ಅದೇ ಟ್ವೀಟ್‌ ಅನ್ನು ಕಣ್ಣನ್‌ ಅವರು ರೀಟ್ವೀಟ್‌ ಮಾಡಿ ತನ್ನ ಮೇಲೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.
ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕುನಾಲ್‌ ಕಮ್ರಾ ಬೆಂಬಲಕ್ಕೆ ನಿಂತ ಕಣ್ಣನ್‌ ಗೋಪಿನಾಥನ್‌

ಕುನಾಲ್‌ ಕಮ್ರಾ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅನುಮತಿ ನೀಡಿದ ನಂತರ, ವೇಣುಗೋಪಾಲ್‌ ಅವರ ನಿರ್ಧಾರದ ಕುರಿತ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ಮುಖ್ಯವಾಗಿ ಈ ಹಿಂದೆ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕಣ್ಣನ್‌ ಗೋಪಿನಾಥನ್‌ ಅವರು ಸಮೂಹ ನ್ಯಾಯಾಂಗ ನಿಂದನೆ ಎಂದು ಪ್ರಕರಣ ದಾಖಲಿಸಲಿ ಎಂದು ಹೇಳಿದ್ದಾರೆ.

ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕುನಾಲ್‌ ಕಮ್ರಾ ಬೆಂಬಲಕ್ಕೆ ನಿಂತ ಕಣ್ಣನ್‌ ಗೋಪಿನಾಥನ್‌
ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸಿದ ಅಟಾರ್ನಿ ಜನರಲ್

ಕುನಾಲ್‌ ಕಮ್ರಾ ಪ್ರಕರಣದ ಕುರಿತಾಗಿ ಟ್ವಿಟರ್‌ ಮೂಲಕ ಪ್ರತಿಕ್ರಿಯಿಸಿರುವ ಕಣ್ಣನ್‌ ಗೋಪಿನಾಥನ್‌, “ನಮ್ಮೆಲ್ಲರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನಯ ದಾಖಲಿಸಲು ಅನುಮತಿ ಕೋರಿ ಯಾರಾದರೂ ಅಟಾರ್ನಿ ಜನರಲ್‌ ಅವರಿಗೆ ಪತ್ರ ಬರೆದರೆ ಉತ್ತಮ. ಇದನ್ನು ಸಮೂಹ ನ್ಯಾಯಾಂಗ ನಿಂದನೆಯಾಗಿ ಪರಿಗಣಿಸಲಿ. ಭಾರತದ ನಾಗರಿಕರ ವಾಕ್‌ ಸ್ವಾತಂತ್ರ್ಯವನ್ನು ಕಾಪಾಡುವುದು ಹೇಗೆ ಎಂದು ಸುಪ್ರಿಂ ಕೋರ್ಟ್‌ಗೆ ತಿಳಿಯದಿದ್ದರೆ, ನಾಗರಿಕರಿಗೆ ಅದನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿದಿದೆ ಎಂದು ಸುಪ್ರಿಂ ಕೋರ್ಟ್‌ ಕಲಿತುಕೊಳ್ಳಲಿ,” ಎಂದು ಖಾರವಾಗಿ ನುಡಿದಿದ್ದಾರೆ.

ಕುನಾಲ್‌ ಕಮ್ರಾ ಅವರ ಯಾವ ಟ್ವೀಟ್‌ನಿಂದಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಯಿತೋ, ಅದೇ ಟ್ವೀಟ್‌ ಅನ್ನು ಕಣ್ಣನ್‌ ಅವರು ರೀಟ್ವೀಟ್‌ ಮಾಡಿ ತನ್ನ ಮೇಲೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.

ರಿಪಬ್ಲಿಕ್‌ ಟಿವಿಯ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ಅವರಿಗೆ ಸುಪ್ರಿಂ ಕೋರ್ಟ್‌ ಜಾಮೀನು ನೀಡಿದ್ದನ್ನು ಟೀಕಿಸಿ ಕುನಾಲ್‌ ಕಮ್ರಾ ಲೇವಡಿ ಮಾಡಿದ್ದರು. ಕೋರ್ಟ್‌ನಲ್ಲಿ ನ್ಯಾಯಾಧೀಶರಿಗೆ ಗೌರವಾನ್ವಿತರೇ ಎಂದು ಸಂಬೋಧಿಸುವುದನ್ನು ಬಿಡಬೇಕು, ಏಕೆಂದರೆ ಗೌರವವು ಸುಪ್ರಿಂಕೋರ್ಟ್‌ನಿಂದ ಆಗಲೇ ಹೊರಗೆ ಹೋಗಿದೆ ಎಂದು ಕುನಾಲ್‌ ಟ್ವೀಟ್‌ ಮಾಡಿದ್ದರು. ಈಗ ಕಣ್ಣನ್‌ ಅವರು ಇದೇ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿ ಸುದ್ದಿಯಲ್ಲಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com