ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಕರ್ತರಾದರೇ ಓವೈಸಿ ?

ಬಿಹಾರದಲ್ಲಿ ಕಾಂಗ್ರೆಸ್‌ ಪಕ್ಷದ ಮತಗಳನ್ನು ತನ್ನೆಡೆಗೆ ಸೆಳೆದುಕೊಂಡು ಬಿಜೆಪಿ ಪಕ್ಷವು ಗೆಲ್ಲುವಲ್ಲಿ ಎಐಎಂಐಎಂ ಪಕ್ಷವು ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂಬ ಆರೋಪವು ಎಐಎಂಐಎಂ ಪಕ್ಷದ ವಿರುದ್ಧ ಕೇಳಿ ಬರುತ್ತಿದೆ. ಆದರೆ ಅಂಕಿ ಅಂಶ ಬೇರೆಯೇ ಹೇಳುತ್ತಿದೆ.
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಕರ್ತರಾದರೇ ಓವೈಸಿ ?

ಬಿಹಾರದಲ್ಲಿ ಮಹಾ ಘಟಬಂಧನ್‌ ವಿರುದ್ಧ ಎನ್.ಡಿ.ಎ ನಿರಾಯಾಸವಾಗಿ ಬಹುಮತ ಗಳಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದರೆ, ಇನ್ನೊಂದೆಡೆ ಅಚ್ಚರಿಯೆಂಬಂತೆ ಇದೇ ಪ್ರಥಮ ಬಾರಿಗೆ ಬಿಹಾರದ ಚುನಾವಣೆಯಲ್ಲಿ ಆಲ್‌ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್‌ ಮುಸ್ಲಿಮೀನ್‌ (AIMIM) ಪಕ್ಷವು 5 ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸೀಮಾಂಚಲ ಪ್ರದೇಶಗಳಲ್ಲಿನ ಐದು ಕ್ಷೇತ್ರಗಳಲ್ಲಿ ಎಐಎಂಐಎಂ ಪಕ್ಷವು ಜಯಗಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಹಾರದಲ್ಲಿ ಕಾಂಗ್ರೆಸ್‌ ಪಕ್ಷದ ಮತಗಳನ್ನು ತನ್ನೆಡೆಗೆ ಸೆಳೆದುಕೊಂಡು ಬಿಜೆಪಿ ಪಕ್ಷವು ಗೆಲ್ಲುವಲ್ಲಿ ಎಐಎಂಐಎಂ ಪಕ್ಷವು ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂಬ ಆರೋಪವು ಎಐಎಂಐಎಂ ಪಕ್ಷದ ವಿರುದ್ಧ ಕೇಳಿ ಬರುತ್ತಿದೆ. ಬಿಜೆಪಿ ಪಕ್ಷದ ಬಿ ಟೀಮ್‌ ಎಂಬ ರೀತಿಯಲ್ಲಿ ಎಐಎಂಐಎಂ ಪಕ್ಷವು ಕೆಲಸ ಮಾಡುತ್ತಿದೆ, ಸುಮಾರು ಹತ್ತಂಕ್ಕಿಂತಲೂ ಹೆಚ್ಚು ಸೀಟುಗಳನ್ನು ಕಾಂಗ್ರೆಸ್‌ ಸೋಲಲು ಈ ಪಕ್ಷದ ಸ್ಪರ್ಧೆಯೇ ಕಾರಣ ಎಂಬ ಆರೋಪಗಳು ಸಾಮಾಜಿಕ ಜಾಲ ತಾಣಗಳು ಸೇರಿದಂತೆ ಹಲವೆಡೆಗಳಲ್ಲಿ ಕೇಳಿ ಬರುತ್ತಿದೆ.

ಮತ ವಿಭಜಿಸುವುದು ಅಂದರೇನು?

ಎರಡು ಪ್ರಮುಖ ಪಕ್ಷಗಳು ಸ್ಪರ್ಧಿಸಿದಾಗ ಅಲ್ಲಿನ ಸೋಲು ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತವನ್ನು ಇನ್ನೊಂದು ಪಕ್ಷವು ಪಡೆದಿದ್ದರೆ ಆ ಪಕ್ಷವನ್ನು ಮತ ವಿಭಜಕ ಪಕ್ಷ ಎಂದೇ ಗುರುತಿಸುತ್ತಾರೆ. ಉದಾಹರಣೆಗೆ ಎಲ್.ಜೆ.ಪಿ ಪಕ್ಷದ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, “ ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದೇ ಜೆಡಿಯು ಪಕ್ಷವನ್ನು ಸೋಲಿಸಲು ಎಂದು ಹೇಳಿಕೆ ನೀಡಿದ್ದರು. ಹಾಗಾದರೆ ಬಿಹಾರದಲ್ಲಿ ಕಾಂಗ್ರೆಸ್‌ ಸೋಲಿಗೆ ಎಐಎಂಐಎಂ ಪಕ್ಷವೇ ಕಾರಣವಾಯಿತೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಸ್ಫರ್ಧೆಯನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು.

ಎಐಎಂಐಎಂ ಒಟ್ಟು ಸ್ಪರ್ಧಿಸಿದ ಕ್ಷೇತ್ರಗಳು: 20

ಎಐಎಂಐಎಂ ಪಕ್ಷವು ಜಯಗಳಿಸಿದ ಕ್ಷೇತ್ರಗಳು 5: ಅಮೋರ್,‌ ಬೈಸಿ, ಕೊಚಾದಾಮನ್‌, ಬಹದೂರ್‌ ಗಂಜ್‌ ಹಾಗೂ ಜೋಕಿಹಾತ್‌

ಮಹಾಘಟಬಂಧನವು ಜಯಗಳಿಸಿದ ಕ್ಷೇತ್ರಗಳು 9: ಅರಾರಿಯ, ಕಸ್ಬಾ, ಕಿಶನ್‌ ಗಂಜ್‌, ಮಣಿಹರಿ, ಫುಲ್ವಾರಿ, ಸಾಹೇಬ್‌ ಪುರ್‌ ಕಮಾಲ್‌, ಶೇರ್‌ ಘಾಟಿ, ಸಿಕ್ತಾ, ಠಾಕೂರ್‌ ಗಂಜ್‌

ಎನ್.ಡಿ.ಎ ಜಯಗಳಿಸಿದ ಕ್ಷೇತ್ರಗಳು 6: ಬರಾರಿ, ಚಟಾಪುರ್‌, ನರ್ಪತ್‌ ಗಂಜ್‌, ಪ್ರಾಣ್‌ ಪುರ್‌, ರಾಣಿ ಗಂಜ್‌, ಸಾಹೇಬ್‌ ಗಂಜ್‌

ಹಾಗಾದರೆ, ಇಲ್ಲಿ ಎಐಎಂಐಎಂ ಪಕ್ಷ ಮತ್ತು ಮಹಾಘಟಬಂಧನ್‌ ಜಯಿಸಿರುವ ಕ್ಷೇತ್ರಗಳಲ್ಲಿ ಹೇಗೂ ಎನ್.ಡಿ.ಎ ಸೋಲನ್ನಪ್ಪಿ ಕೊಂಡಿದೆ. ಹಾಗಾಗಿ, ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಎಐಎಂಐಎಂ ಸಹಾಯ ಮಾಡಿತು ಅನ್ನುವ ಪ್ರಶ್ನೆ ಉದ್ಭವವಾಗುವುದಿಲ್ಲ. ಇನ್ನು ಉಳಿದಿರುವ ಆರು ಕ್ಷೇತ್ರಗಳಲ್ಲಿನ ಅಂತರದೆಡೆಗೆ ಗಮನ ಹರಿಸೋಣ.

ಬರಾರಿ ಕ್ಷೇತ್ರ:

ಎನ್.ಡಿ.ಎ ಜಯ ಗಳಿಸಿದ ಅಂತರ: 10,438

ಎಐಎಂಐಎಂಗೆ ದೊರಕಿದ ಮತ: 6,598

ಛಟಪುರ್:‌

ಎನ್.ಡಿ.ಎ ಜಯದ ಅಂತರ: 20,635

ಎಐಎಂಐಎಂ ಗಳಿಸಿದ ಮತಗಳು: 1,990

ನರ್ಪಟ್‌ ಗಂಜ್:‌

ಎನ್.ಡಿ.ಎ ಜಯದ ಅಂತರ: 28,610

ಎಐಎಂಐಎಂ ಗಳಿಸಿದ ಮತಗಳು: 9,495

ಪ್ರಾಣ್‌ ಪುರ್:‌

ಎನ್.ಡಿ.ಎ ಜಯದ ಅಂತರ: 2,972

ಎಐಎಂಐಎಂ ಗಳಿಸಿದ ಮತಗಳು: 508

ರಾಣಿಗಂಜ್:‌

ಎನ್.ಡಿ.ಎ ಜಯದ ಅಂತರ: 2,304

ಎಐಎಂಐಎಂ ಗಳಿಸಿದ ಮತಗಳು: 2,412

ಸಾಹೇಬ್‌ ಗಂಜ್:‌

ಎನ್.ಡಿ.ಎ ಜಯದ ಅಂತರ: 15,333

ಎಐಎಂಐಎಂ ಗಳಿಸಿದ ಮತಗಳು: 4,055

(ಅಂಕಿ ಅಂಶ: ದಿ ಕ್ವಿಂಟ್)

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಕರ್ತರಾದರೇ ಓವೈಸಿ ?
ಬಿಹಾರದಲ್ಲಿ ಮಹಾಘಟಬಂಧನವೇ ಸರ್ಕಾರ ರಚಿಸುತ್ತೆ: ತೇಜಸ್ವಿ ಯಾದವ್

ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕಾದ ವಿಚಾರವೇನೆಂದರೆ ಕೇವಲ ಅರಾರಿಯಾ ಜಿಲ್ಲೆಯ ರಾಣಿ ಗಂಜ್‌ ಕ್ಷೇತ್ರದಲ್ಲಿ ಮಾತ್ರ ಮತಗಳ ಅಂತರಕ್ಕಿಂತ ಹೆಚ್ಚಿನ ವೋಟನ್ನು ಎಐಎಂಐಎಂ ಪಕ್ಷವು ಪಡೆದಿದೆ. ಅಲ್ಲಿ ಎನ್.ಡಿ.ಎ ಜಯದ ಅಂತರವು 2,304 ಆದರೆ ಎಐಎಂಐಎಂ ಪಕ್ಷದ ಒಟ್ಟು ಮತ ಚಲಾವಣೆಯ ಮೊತ್ತವು 2,412 ಆಗಿದೆ. ಒಟ್ಟು 108 ಮತಗಳನ್ನು ಎಐಎಂಐಎಂ ಪಕ್ಷವು ಜೆಡಿಯುವಿನ ಅಂತರಕ್ಕಿಂತ ಹೆಚ್ಚಾಗಿ ಪಡೆದುಕೊಂಡಿದೆ.

ರಾಣಿಗಂಜ್‌ ಕ್ಷೇತ್ರದಲ್ಲಿ ದಲಿತ ಮೀಸಲಾತಿ ಇರುವ ಕಾರಣ, ಎಐಎಂಐಎಂ ಪಕ್ಷವು ದಲಿತ ಸಮುದಾಯಕ್ಕೆ ಸೇರಿದ ರೋಶನ್‌ ದೇವಿಯವರನ್ನು ಕಣಕ್ಕಿಳಿಸಿತ್ತು. ಈ ಕ್ಷೇತ್ರದಲ್ಲಿ ಆರ್.ಜೆ.ಡಿಯ ಅವಿನಾಶ್‌ ಮಂಗ್ಲಮ್‌ ರ ವಿರುದ್ಧ ಜೆಡಿಯು ಪಕ್ಷದ ಅಚ್ಮಿತ್‌ ರಿಶಿದೇವ್‌ 2,304 ವೋಟುಗಳ ಅಂತರದಲ್ಲಿ ಜಯಗಳಿಸಿದರು.

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಕರ್ತರಾದರೇ ಓವೈಸಿ ?
ಬಿಹಾರದಲ್ಲಿ ಮುಂದುವರಿದ ಹಾವು ಏಣಿ ಆಟ; ಬಿಜೆಪಿಯ ವಿರುದ್ಧ ಫಲಿತಾಂಶ ತಿರುಚುವ ಆರೋಪ!

ಅಸಾದುದ್ದೀನ್ ಓವೈಸಿ ತನ್ನ ಪಕ್ಷ ಎಐಎಂಐಎಂ ಅನ್ನು ಮಹಾಘಟಬಂಧನ್‌ ನಲ್ಲಿ ಸೇರ್ಪಡೆಗೊಳಿಸುವ ಕುರಿತು ಮೊದಲೇ ಮಾತುಕತೆ ನಡೆಸಿದ್ದರು. ಆದರೆ ಮಹಾಘಟಬಂಧನ್‌ ನಲ್ಲಿ ಸೇರ್ಪಡೆಗೆ ವಿರೋಧ ಮತ್ತು ನಿರಾಕರಣೆಗಳು ವ್ಯಕ್ತವಾದ ಕಾರಣ ಎಐಎಂಐಎಂ ಸೇರ್ಪಡೆಗೊಂಡಿರಲಿಲ್ಲ.

ಸದ್ಯ ಅಚ್ಚರಿಯೆಂಬಂತೆ ಬಿಹಾರದ ಚುನಾವಣೆಯ ಐದು ಸ್ಥಾನಗಳಲ್ಲಿ ಜಯಗಳಿಸಿರುವ ಎಐಎಂಐಎಂ ಪಕ್ಷವು ಮುಂದೆ ಎಲ್ಲಾ ರಾಜ್ಯಗಳ ಚುನಾವಣೆಯಲ್ಲೂ ಸ್ಪರ್ಧಿಸುವ ಉತ್ಸಾಹವನ್ನು ಹೊಂದಿದೆ. ಪ್ರಮುಖವಾಗಿ ಪಕ್ಷದ ಮುಖಂಡ ಓವೈಸಿ ಹೇಳಿದಂತೆ, ಮುಂದೆ ನಡೆಯಲಿರುವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಚುನಾವಣೆಯಲ್ಲೂ ಎಐಎಂಐಎಂ ಸ್ಪರ್ಧಿಸುವ ಸಾಧ್ಯತೆ ಹೇರಳವಾಗಿದೆ. ಮುಸ್ಲಿಮರೊಂದಿಗೆ ಬಹುಸಂಖ್ಯಾತರ ವಿಶ್ವಾಸವನ್ನೂ ಗಳಿಸಿಕೊಂಡು ಮುನ್ನಡೆದರೆ ಎಐಎಂಐಎಂ ರಾಜಕೀಯ ಮುನ್ನಡೆ ಪಡೆಯಬಹುದು ಎಂಬುವುದು ರಾಜಕೀಯ ವಿಶ್ಲೇಷಕರ ಅಂಬೋಣ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com