ಅಝೀಮ್ ಪ್ರೇಮ್ ಜಿ ಅತ್ಯಂತ ಉದಾರಿ ಭಾರತೀಯ ಉದ್ಯಮಿ

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್‌ ಅಂಬಾನಿ ದೇಣಿಗೆ ನೀಡುವ ವಿಚಾರದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅಝೀಮ್ ಪ್ರೇಮ್ ಜಿ ಅತ್ಯಂತ ಉದಾರಿ ಭಾರತೀಯ ಉದ್ಯಮಿ

ಐಟಿ ಕ್ಷೇತ್ರ ದಿಗ್ಗಜ ವಿಪ್ರೋದ ಅಝೀಮ್‌ ಪ್ರೇಮ್ ‌ಜಿ ದಿನಕ್ಕೆ 22 ಕೋಟಿಯಂತೆ, ವರ್ಷಕ್ಕೆ ಒಟ್ಟು 7,904 ಕೋಟಿ ದಾನಮಾಡಿ ಲೋಕೋಪಕಾರಿ ಉದ್ಯಮಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಈ ಹಿಂದೆ ಹುರುನ್ ರಿಪೋರ್ಟ್ ಇಂಡಿಯಾ ಮತ್ತು ಎಡೆಲ್ಗೈವ್ ಫೌಂಡೇಶನ್ ಮಾಡಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ HCL ಟೆಕ್ನಾಲಜೀಸ್ ನ ಶಿವ ನಾಡರ್ ಅವರನ್ನು ಪ್ರೇಮ್ ‌ಜಿ ದೊಡ್ಡ ಅಂತರದಿಂದ ಹಿಂದಿಕ್ಕಿದ್ದಾರೆ. ಹಿಂದಿನ ವರ್ಷದಲ್ಲಿ 826 ಕೋಟಿ ದಾನ ಮಾಡಿದ್ದ ನಾಡರ್‌, ಈ ವರ್ಷ 795 ಕೋಟಿ ದಾನ ಮಾಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಪ್ರೇಮ್‌ಜಿ 426 ಕೋಟಿ ರುಪಾಯಿಗಳನ್ನು ದಾನ ಮಾಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಮುಕೇಶ್‌ ಅಂಬಾನಿಯ ರಿಲಾಯನ್ಸ್‌ ಇಂಡಸ್ಟ್ರೀಸ್, 458 ಕೋಟಿ ದಾನ ಮಾಡುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ವರ್ಷ 402 ಕೋಟಿಗಳನ್ನು ಸಂಸ್ಥೆ ದಾನ ಮಾಡಿತ್ತು.

ಕೋವಿಡ್‌ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಟಾಟಾ ಸನ್ಸ್‌ 1500 ಕೋಟಿ ದಾನ ಮಾಡಿ ಮೊದಲ ಸ್ಥಾನದಲ್ಲಿದೆ. ಪ್ರೇಮ್‌ಜಿ ಸಂಸ್ಥೆ 1125 ಕೋಟಿ ದೇಣಿಗೆ ನೀಡಿದರೆ, ಅಂಬಾನಿ 510 ಕೋಟಿ ದೇಣಿಗೆ ನೀಡಿದ್ದಾರೆ. ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅಝೀಮ್‌ ಪ್ರೇಮ್‌ ಜಿ ತಮ್ಮ ಸಂಪತ್ತಿನ ಬಹುಪಾಲು ಭಾಗವನ್ನು ಲೋಕೋಪಕಾರಿ ಕಾರಣಗಳಿಗಾಗಿ ದಾನ ಮಾಡಿದ್ದಾರೆ.

ಅಜೀಮ್‌ ಪ್ರೇಮ್‌ ಜಿ 2020 ರ ಅತ್ಯಂತ ಉದಾರ ಭಾರತೀಯರಾಗಿ ಹೊರಹೊಮ್ಮಿದ ನಂತರ, ಅವರ ಮಗ ರಿಷಾದ್ ಪ್ರೇಮ್‌ಜಿ ಸಂಪತ್ತಿನ ಬಗ್ಗೆ ತನ್ನ ತಂದೆಯ ಕಲ್ಪನೆಗಳನ್ನು ಹಂಚಿಕೊಂಡಿದ್ದಾರೆ. ತಂದೆ ಯಾವತ್ತೂ ಸಂಪತ್ತಿನ ಟ್ರಸ್ಟಿಯೆಂದು ತಮ್ಮನ್ನು ನಂಬಿದ್ದಾರೆ ಹೊರತು ಮಾಲೀಕನಾಗಿಯಲ್ಲ ಎಂದು ಹೇಳಿದ್ದಾರೆ. ನಾವು ವಾಸಿಸುವ ಮತ್ತು ಕೆಲಸ ಮಾಡುವ ಸಮಾಜದ ಭಾಗವಾಗಿರುವುದು ವಿಪ್ರೋದ ಪ್ರಮುಖ ತತ್ವಗಳಲ್ಲೊಂದು ಎಂದು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com