ಬಿಹಾರ: ಗೆದ್ದ 68% ಅಭ್ಯರ್ಥಿಗಳಿಗೆ ಕ್ರಿಮಿನಲ್‌ ಹಿನ್ನೆಲೆ

ಅಪರಾಧ ಹಿನ್ನೆಲೆಯಿರುವ 123 ಅಭ್ಯರ್ಥಿಗಳಲ್ಲಿ 19 ಮಂದಿಯ ಮೇಲೆ ಕೊಲೆ ಪ್ರಕರಣವಿದೆ. 31 ಮಂದಿಯ ಮೇಲೆ ಕೊಲೆಯತ್ನ ಪ್ರಕರಣವಿದೆ. ಮಹಿಳೆಯರ ವಿರುದ್ಧದ ಪ್ರಕರಣಗಳನ್ನು ಎಂಟು ಮಂದಿ ಎದುರಿಸುತ್ತಿದ್ದಾರೆ.
ಬಿಹಾರ: ಗೆದ್ದ 68% ಅಭ್ಯರ್ಥಿಗಳಿಗೆ ಕ್ರಿಮಿನಲ್‌ ಹಿನ್ನೆಲೆ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ 163 ಅಭ್ಯರ್ಥಿಗಳು ಅಂದರೆ ಗೆದ್ದಿರುವ ಶಾಸಕರಲ್ಲಿ 68% ಮಂದಿ ತಮಗೆ ಅಪರಾಧ ಹಿನ್ನೆಲೆಯಿರುವುದಾಗಿ ಮತದಾನದ ಅಫಿಡವಿಟ್‌ಗಳಲ್ಲಿ ಘೋಷಿಸಿದ್ದಾರೆ ಎಂದು ಅಸೋಸಿಯೇಷನ್ಸ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ADR) ಹೇಳಿದೆ. ಅದರಲ್ಲಿ 73% ಅಭ್ಯರ್ಥಿಗಳು ಆರ್‌ಜೆಡಿ ಪಕ್ಷದವರು.

ಈ 163 ಶಾಸಕರಲ್ಲಿ 123 ಮಂದಿ ಶಾಸಕರು ಗಂಭೀರ ಪ್ರಮಾಣದ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಮಹಿಳೆಯರ ಮೇಲಿನ ಅಪರಾಧಗಳು ಸೇರಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2015 ರ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದ ಶಾಸಕರಲ್ಲಿ 142 ಮಂದಿಗೆ ಅಂದರೆ 58% ಶಾಸಕರಿಗೆ ಕ್ರಿಮಿನಲ್‌ ಹಿನ್ನೆಲೆಯಿತ್ತು. ಈ ಬಾರಿ ಅದು 10% ದಷ್ಟು ಏರಿಕೆಯಾಗಿದೆ.

ಗೆದ್ದಿರುವ 243 ಅಭ್ಯರ್ಥಿಗಳಲ್ಲಿ 241 ಮಂದಿಯ ಅಫಿಡವಿಟ್‌ಗಳನ್ನು ವಿಶ್ಲೇಷಿಸಿರುವ ಎಡಿಆರ್‌, ಇನ್ನುಳಿದ ಇಬ್ಬರ ವಿವರಗಳನ್ನು ನೀಡಿಲ್ಲ.

ಮೂರು ಹಂತಗಳಲ್ಲಿ ನಡೆದ ಬಿಹಾರ ಚುನಾವಣೆಯ ಫಲಿತಾಂಶವು ಬುಧವಾರ ಪ್ರಕಟವಾಗಿದ್ದು, ಸುಮಾರು 20 ತಾಸುಗಳ ಕಾಲ ಮತೆಣಿಕೆ ಪ್ರಕ್ರಿಯೆಯು ಜರುಗಿತ್ತು.

ಅಪರಾಧ ಹಿನ್ನೆಲೆಯಿರುವ 123 ಅಭ್ಯರ್ಥಿಗಳಲ್ಲಿ 19 ಮಂದಿಯ ಮೇಲೆ ಕೊಲೆ ಪ್ರಕರಣವಿದೆ. 31 ಮಂದಿಯ ಮೇಲೆ ಕೊಲೆಯತ್ನ ಪ್ರಕರಣವಿದೆ. ಮಹಿಳೆಯರ ವಿರುದ್ಧದ ಪ್ರಕರಣಗಳನ್ನು ಎಂಟು ಮಂದಿ ಎದುರಿಸುತ್ತಿದ್ದಾರೆ.

ಬಿಹಾರ: ಗೆದ್ದ 68% ಅಭ್ಯರ್ಥಿಗಳಿಗೆ ಕ್ರಿಮಿನಲ್‌ ಹಿನ್ನೆಲೆ
ಗುಜರಾತ್‌ ಉಪಚುನಾವಣೆ: 18 % ಅಭ್ಯರ್ಥಿಗಳಿಗೆ ಕ್ರಿಮಿನಲ್‌ ಹಿನ್ನೆಲೆ

ತೇಜಸ್ವಿ ಯಾದವ್‌ ನೇತೃತ್ವದ, ಅತಿದೊಡ್ಡ ಪಕ್ಷ ಆರ್‌ಜೆಡಿಯಲ್ಲಿ ಗೆದ್ದ 74 ಶಾಸಕರಲ್ಲಿ 54 ಮಂದಿಗೆ ಕ್ರಿಮಿನಲ್‌ ಪ್ರಕರಣ ಇದೆ, ಬಿಜೆಪಿಯ 73 ಶಾಸಕರಲ್ಲಿ 47 ಮಂದಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ. ಜೆಡಿಯು ಪಕ್ಷದ 43 ಶಾಸಕರಲ್ಲಿ 20 ಮಂದಿ ಕ್ರಿಮಿನಲ್‌ ಹಿನ್ನೆಲೆಯಿರುವವರು. ಕಾಂಗ್ರೆಸ್‌ನ 19 ಶಾಸಕರಲ್ಲಿ 16 ಶಾಸಕರೂ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಗಳು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದಿ ಲೆನಿನಿಸ್ಟ್ ಲಿಬರೇಶನ್‌ ಪಕ್ಷದ 12 ಶಾಸಕರಲ್ಲಿ 10 ಮಂದಿಗೆ ಕ್ರಿಮಿನಲ್‌ ಪ್ರಕರಣಗಳಿದೆ. ಎಐಎಮ್‌ಐಎಮ್‌ನ 5 ಮಂದಿ ಗೆದ್ದ ಅಭ್ಯರ್ಥಿಗಳಿಗೂ ಕ್ರಿಮಿನಲ್‌ ಹಿನ್ನೆಲೆಯಿದೆ. ಆರ್‌ಜೆಡಿಯ 44, ಬಿಜೆಪಿಯ 35, ಜೆಡಿಯುವಿನ 11, ಕಾಂಗ್ರೆಸ್‌ನ 11, CPI-MLL ನ 8, AIMIM ನ 5 ಅಭ್ಯರ್ಥಿಗಳಿಗೆ ಗಂಭೀರ ಅಪರಾಧ ಪ್ರಕರಣದ ಹಿನ್ನೆಲೆಯಿದೆ.

ಅಪರಾಧ ಹಿನ್ನೆಲೆಯಿರುವ ಶಾಸಕರನ್ನು ಹೊಂದಿರುವ ಪಕ್ಷಗಳು (ಶೇಕಡಾವಾರು ಲೆಕ್ಕದಲ್ಲಿ)

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com