ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ, ನಾವು ಬದ್ಧರಾಗಿದ್ದೇವೆ: ಬಿಜೆಪಿ

ಬಿಹಾರದ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್ ಕುಮಾರ್ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಹೇಳಿದೆ.
ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ, ನಾವು ಬದ್ಧರಾಗಿದ್ದೇವೆ: ಬಿಜೆಪಿ

ಬಿಹಾರದ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್ ಕುಮಾರ್ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಹೇಳಿದೆ.

ಬಿಹಾರದ 243 ಸ್ಥಾನಗಳಲ್ಲಿ 74 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ, ಎನ್‌ಡಿಎ ಮೈತ್ರಿಕೂಟವು ಅಗತ್ಯ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗೆದ್ದಿದ್ದರೂ, ಆದರೆ ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ ಪಕ್ಷದ ಸ್ಥಾನದಲ್ಲಿ ಕುಸಿತ ಕಂಡಿದೆ. ಕೇವಲ 43 ಕ್ಷೇತ್ರ ಗೆದ್ದಿರುವ ಜೆಡಿಯು ಮೈತ್ರಿಕೂಟದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ.

ನಿತೀಶ್ ಕುಮಾರ್ ಬಿಹಾರದಲ್ಲಿ ʼದೊಡ್ಡಣ್ಣʼ ಸ್ಥಾನಮಾನವನ್ನು ಕಳೆದುಕೊಂಡಿರುವುದರಿಂದ ಮತ್ತು ಬಿಜೆಪಿ ಮೊದಲ ಬಾರಿಗೆ, ತನ್ನ ಮುಖ್ಯಮಂತ್ರಿಯನ್ನು ಹೊಂದಿರದ ರಾಜ್ಯದಲ್ಲಿ ಮೇಲುಗೈ ಸಾಧಿಸುವುದರೊಂದಿಗೆ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಶ್ನೆಗಳೆದ್ದಿತ್ತು. ಅದಕ್ಕೆ ಬಿಜೆಪಿ ಸ್ಪಷ್ಟೀಕರಣ ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

"ನಮ್ಮ ಬದ್ಧತೆಯಂತೆ ನಿತೀಶ್‌ ಕುಮಾರ್ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ" ಎಂದು ಬಿಜೆಪಿಯ ಹಿರಿಯ ನಾಯಕ, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಬುಧವಾರ ಹೇಳಿದ್ದಾರೆ.

"ಚುನಾವಣೆಯಲ್ಲಿ, ಕೆಲವರು ಹೆಚ್ಚು ಸ್ಥಾನ ಗೆಲ್ಲುತ್ತಾರೆ ಮತ್ತು ಕೆಲವರು ಕಡಿಮೆ ಸ್ಥಾನ ಗೆಲ್ಲುತ್ತಾರೆ, ಆದರೆ ನಾವು ಸಮಾನ ಪಾಲುದಾರರು" ಎಂದು ಸುಶೀಲ್ ಮೋದಿ ಹೇಳಿದ್ದಾರೆ.

ಬಿಜೆಪಿ ಎಂದಿಗೂ ಸ್ವಂತವಾಗಿ ಬಿಹಾರವನ್ನು ಆಳಲಿಲ್ಲ ಮತ್ತು ನಿತೀಶ್ ಕುಮಾರ್ ಇಲ್ಲದೆ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ. ಆದರೆ ಫಲಿತಾಂಶಗಳು ಸರ್ಕಾರ ರಚಿಸುವಲ್ಲಿ ಬಿಜೆಪಿಗೆ ಹತೋಟಿ ನೀಡುತ್ತವೆ. ಮೂಲಗಳ ಪ್ರಕಾರ ನಿತೀಶ್ ಕುಮಾರ್ ಅವರ ನಾಲ್ಕನೇ ಅವಧಿಯಲ್ಲಿ, ಅಧಿಕಾರದ ಸಮತೋಲನವು ಸಂಪೂರ್ಣ ವಿಭಿನ್ನವಾಗಿರುತ್ತದೆ ಎನ್ನಲಾಗುತ್ತಿದೆ.

ಬದಲಾದ ಸಮೀಕರಣಗಳಿಗೆ ದೊಡ್ಡ ಕೊಡುಗೆ ನೀಡಿರುವುದು ಚಿರಾಗ್ ಪಾಸ್ವಾನ್. ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ಚಿರಾಗ್, ನಿತೀಶ್ ಕುಮಾರ್ ಅವರ ಪಕ್ಷದ ವಿರುದ್ಧ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದಾರೆ ಮತ್ತು ಮುಖ್ಯಮಂತ್ರಿ ಪಕ್ಷಕ್ಕೆ ಗರಿಷ್ಠ ಹಾನಿಯನ್ನುಂಟು ಮಾಡಿದ್ದಾರೆ. ಇದರ ಹಿಂದೆ ಬಿಜೆಪಿ ಷಡ್ಯಂತ್ರವಿದೆಯೆಂದು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ, ಪಾಸ್ವಾನ್‌ ಅವರ ಎಲ್‌ಜೆಪಿ ಪಕ್ಷವು ಎಲ್ಲಿಯೂ ಬಿಜೆಪಿಯನ್ನು ಎದುರ ಹಾಕಿಕೊಂಡಿಲ್ಲ, ಕೇವಲ ಜೆಡಿಯುಗೆ ಮಾತ್ರ ತೀವ್ರ ಹೊಡೆತ ನೀಡಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com