ಇದು ಇವಿಎಂ ಮೇಲೆ ದೂಷ ಹೊರಿಸುವ ಕಾಲವಲ್ಲ – ಕಾರ್ತಿ ಚಿದಂಬರಂ

ಬಿಹಾರ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಎನ್‌ಡಿಎ ಮೈತ್ರಿಕೂಟ ಬಹುಮತದತ್ತ ಸಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ ನಾಯಕರು ಇವಿಎಂ ಮೇಲೆ ದೋಷ ಹೊರಿಸಲು ಆರಂಭಿಸಿರುವ ಹೊತ್ತಿನಲ್ಲಿ ಕಾರ್ತಿ ಚಿದಂಬರಂ ಇವಿಎಂ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ಇವಿಎಂ ಮೇಲೆ ದೂಷ ಹೊರಿಸುವ ಕಾಲವಲ್ಲ – ಕಾರ್ತಿ ಚಿದಂಬರಂ

ಬಿಹಾರ ಚುನಾವಣೆಯ ನಂತರ ಹೊರಬಂದಂತಹ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿ ಎನ್‌ಡಿಎ ಮೈತ್ರಿಕೂಟವು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಸಾಗಿದೆ. ಮತ ಎಣಿಕೆ ಆರಂಭಗೊಂಡಾಗ ಎಲ್ಲವೂ ಲೆಕ್ಕಾಚಾರದಂತೆ ನಡೆದಂತೆ ಕಂಡುಬಂದರೂ, ನಂತರ ಬಿಜೆಪಿಯು ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.

ಈಗ ಕಾಂಗ್ರೆಸ್‌ ಮತ್ತು ಇತರ ಪಕ್ಷದ ನಾಯಕರು ತಮ್ಮ ಸೋಲಿಗೆ ಇವಿಎಂ ಅನ್ನು ದೂರುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರು, ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲವೆಂದಲ್ಲ. ಕೆಲವು ಭಾಗಗಳಲ್ಲಿ ಇವಿಎಂಗಳನ್ನು ತಿರುಚಲಾಗಿದೆ. ನಾವು ಸೋಲಲು ಸಾಧ್ಯವೇ ಇಲ್ಲದ ಕ್ಷೇತ್ರಗಳಲ್ಲಿ ಸಾವಿರಾರು ಮತಗಳ ಅಂತರದಲ್ಲಿ ಸೋತಿದ್ದೇವೆ, ಎಂದು ಹೇಳಿದ್ದಾರೆ.

ಇನ್ನು ಪ್ಲುರಲ್ಸ್‌ ಪಾರ್ಟಿ ಪಕ್ಷದ ಮುಖ್ಯಸ್ಥೆ ಪುಷ್ಪಂ ಪ್ರಿಯಾ ಚೌಧರಿ ಕೂಡಾ ಇವಿಎಂ ಅನ್ನು ಹ್ಯಾಕ್‌ ಮಾಡಿರುವ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.

ಈ ಹೊತ್ತಿನಲ್ಲಿಯೇ, ಕಾಂಗ್ರೆಸ್‌ನ ನಾಯಕ ಕಾರ್ತಿ ಚಿದಂಬರಂ ಇವಿಎಂ ಪರವಾಗಿ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ಇವಿಎಂ ಮೇಲೆ ದೋಷ ಹೊರಿಸುವುದನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ.

“ಚುನಾವಣೆಯ ಫಲಿತಾಂಶ ಏನೇ ಇರಲಿ. ಇವಿಎಂ ಮೇಲೆ ದೋಷ ಹೊರಿಸುವುದನ್ನು ನಿಲ್ಲಿಸುವ ಕಾಲ ಬಂದಿದೆ. ನನ್ನ ಅಭಿಪ್ರಾಯದ ಪ್ರಕಾರ ಇವಿಎಂ ಮೇಲೆ ಭರವಸೆಯನ್ನು ಇಡಬಹುದು ಮತ್ತು ಇದರ ಫಲಿತಾಂಶ ನಿಖರವಾಗಿರುತ್ತದೆ,” ಎಂದು ಅವರು ಹೇಳಿದ್ದಾರೆ.

ಇವಿಎಂ ಮೇಲೆ ಸಂದೇಃಪಡುವವರಿದ್ದಾರೆ. ಅದರಲ್ಲೂ ಫಲಿತಾಂಶ ಅವರ ಕಡೆಗೆ ಬರದಿದ್ದರೆ ಸಂದೇಹಪಡುವ ರಾಜಕೀಯ ಪಕ್ಷದವರಿದ್ದಾರೆ. ಆದರೆ, ಇವಿಎಂ ಅನ್ನು ತಿರುಚಬಹುದು ಎಂಬ ಕುರಿತು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಎಂದು ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com