ನಿತೀಶ್ ಕುಮಾರ್ ಮತ್ತು ಬಿಜೆಪಿಗೆ ನಿರ್ಣಾಯಕವಾಗಿರುವ ಬಿಹಾರ ಗೆಲುವು!

ಕೇಂದ್ರದ ಬಿಜೆಪಿ ನಾಯಕರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪ್ರತಿಪಕ್ಷಗಳ ಬಾಯಿ ಮುಚ್ಚಿಸಬೇಕೆಂಬ ಲೆಕ್ಕಾಚಾರದೊಂದಿಗೆ ಇದ್ದಿದಾರೆ. ಅದರೀಗ ಚುವಣೋತ್ತರ ಸಮೀಕ್ಷೆಗಳು ಬಿಜೆಪಿ ನಾಯಕರ ಈ ಲೆಕ್ಕಾಚಾರಕ್ಕೆ ಕೊಳ್ಳಿ ಇಟ್ಟಿವೆ.
ನಿತೀಶ್ ಕುಮಾರ್ ಮತ್ತು ಬಿಜೆಪಿಗೆ ನಿರ್ಣಾಯಕವಾಗಿರುವ ಬಿಹಾರ ಗೆಲುವು!

ಬಿಹಾರ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಯನ್ನು ಚಿಂತೆಗೀಡುಮಾಡಿವೆ. ಅದಕ್ಕೂ ಮಿಗಿಲಾಗಿ‌ ಆತಂಕಗೊಡಿರುವವರು ಮುಖ್ಯಮಂತ್ರಿ ನಿತೀಶ್ ಕುಮಾರ್. ಬಿಜೆಪಿ ನಾಯಕರು ಮತ್ತು ನಿತೀಶ್ ಕುಮಾರ್ ಬಹಳ ಉತ್ಸಾಹದಿಂದ ಗೆದ್ದೇಬಿಡುತ್ತೇವೆ ಎಂಬ ಆತ್ಮವಿಶ್ವಾಸದಿಂದ ಚುನಾವಣೆಯನ್ನು ಆರಂಭಿಸಿದ್ದರು. ಎದುರಾಳಿ ಪಾಳೆಯದಲ್ಲಿದ್ದ ಗೊಂದಲ, ಅನಿಶ್ಚಿತತೆ ಹಾಗೂ ಅದಕ್ಕೂ ಮೀರಿದ ನಿರುತ್ಸಾಹ ಸಹಜವಾಗಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕರಿಗೆ ಹುರುಪು ತುಂಬಿತ್ತು. ಆದರೀಗ ಬಿಹಾರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಅಥವಾ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಗೆದ್ದೇ ಬಿಡಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವುದರಿಂದ ಬಿಜೆಪಿ-ಜೆಡಿಯು ಪಾಳೆಯದಲ್ಲಿ ತಳಮಳ ಶುರುವಾಗಿದೆ.

ಬಿಜೆಪಿಗೆ ಅಪಾರ ನಿರೀಕ್ಷೆ

ಬೆಲೆ ಏರಿಕೆಯನ್ನು ಸರಿದಾರಿಗೆ ತರಲಾಗದೆ, ನಿರುದ್ಯೋಗ ಸಮಸ್ಯೆ ನಿವಾರಸಲಾಗದೆ, ಜಿಡಿಪಿ ಕುಸಿತ ತಡೆಯಲಾಗದೆ, ಗಡಿ ಸಮಸ್ಯೆಗಳನ್ನು ಬಿಡಿಸಲಾಗದೆ ಪರಿತಪಿಸುತ್ತಿರುವ ಕೇಂದ್ರದ ಬಿಜೆಪಿ ನಾಯಕರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪ್ರತಿಪಕ್ಷಗಳ ಬಾಯಿ ಮುಚ್ಚಿಸಬೇಕೆಂಬ ಲೆಕ್ಕಾಚಾರದೊಂದಿಗೆ ಇದ್ದಿದಾರೆ. ಅದರೀಗ ಚುವಣೋತ್ತರ ಸಮೀಕ್ಷೆಗಳು ಬಿಜೆಪಿ ನಾಯಕರ ಈ ಲೆಕ್ಕಾಚಾರಕ್ಕೆ ಕೊಳ್ಳಿ ಇಟ್ಟಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಹಾರದ ಫಲಿತಾಂಶ ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಪ್ರಬಾವ ಬೀರಲಿದೆ. ಆದುದರಿಂದ ಶತಾಯಗತಾಯ ಬಿಹಾರದಲ್ಲಿ ಚುನಾವಣೆ ಗೆಲ್ಲಬೇಕು. ಬಿಹಾರ ಚುನಾವಣೆ ಗೆದ್ದರೆ ಪಶ್ಚಿಮ ಬಂಗಾಳದ ಚುನಾವಣೆಗೆ ಸ್ಪೂರ್ತಿ ಸಿಗಲಿದೆ. ಪಶ್ಚಿಮ ಬಂಗಾಳದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಲಿದೆ ಎನ್ನುವ ನಿರೀಕ್ಷೆಗಳು ಇದ್ದವು.‌ ಬಿಹಾರ ಬಳಿಕ ಪಶ್ಚಿಮ ಬಂಗಾಳ ಗೆದ್ದರೆ ಮುಂದೆ ಪ್ರಮುಖ‌ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆ ಎದುರಿಸುವುದಕ್ಕೂ ಸುಲಭವಾಗಲಿದೆ ಎಂಬ ದೊಡ್ಡ ನಿರೀಕ್ಷೆಯೇ ಇತ್ತು. ಆದುದರಿಂದ ಬಿಜೆಪಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿತ್ತು.

ಎಲ್ಲೂ, ಯಾವ ಕಾರಣಕ್ಕೂ ಲೋಪ ಆಗಬಾರದು, ವಿವಾದ ಆಗಬಾರದು ಎಂದು 'ಫೈರ್ ಬ್ರಾಂಡ್' ಗಿರಿ ರಾಜ್ ಸಿಂಗ್ ಅಂಥವರ ಬಾಯಿಗೆ ಪ್ಲಾಸ್ಟರ್ ಹಾಕಿತ್ತು. 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೀಸಲಾತಿ‌ ವಿರೋಧಿಸಿ ಮಾತನಾಡಿ 'ಆಟ ಕೆಡಿಸಿದ್ದ' ಆರ್ ಎಸ್ ಎಸ್ ನಾಯಕ ಮೋಹನ್ ಭಾಗವತ್ ಮೌನವಾಗಿದ್ದರು. ಅಷ್ಟೇ ಏಕೆ? ಬಿಜೆಪಿ ಪಾಲಿನ‌ ಚುನಾವಣಾ ಚಾಣಾಕ್ಷ ಎಂದೇ ಹೆಸರುವಾಸಿಯಾಗಿರುವ ಕೇಂದ್ರ ಗೃಹ‌ ಸಚಿವ ಅಮಿತ್ ಶಾಗೂ ಬಿಹಾರ ತಂಟೆಗೆ ಹೋಗದಂತೆ ಸೂಚಿಸಲಾಗಿತ್ತು. ಆದರೀಗ ತಮ್ಮ ನಿರೀಕ್ಷೆಗೆ ವ್ಯತಿರಿಕ್ತವಾದ ಚುನಾವಣೋತ್ತರ ಸಮೀಕ್ಷೆಗಳು ಬಂದಿರುವುದರಿಂದ ಬಿಜೆಪಿ ಚಿಂತಾಕ್ರಾಂತವಾಗಿದೆ.

ನಿತೀಶ್ ಗೆ ಅಳಿವು ಉಳಿವಿನ ಪ್ರಶ್ನೆ

ಬಿಜೆಪಿಗೂ ಮಿಗಿಲಾಗಿ ನಿತೀಶ್ ಕುಮಾರ್ ಅವರಿಗೆ ಈ ಬಾರಿಯ ಚುನಾವಣೆ ಹೆಚ್ಚು ನಿರ್ಣಾಯಕವಾದುದು. ಏಕೆಂದರೆ ಈಗ ಸೋತರೆ ನಿತೀಶ್ ಕುಮಾರ್ ರಾಜಕೀಯವಾಗಿ ಅಪ್ರಸ್ತುತವಾಗಿಬಿಡುತ್ತಾರೆ. ಮೊದಲಿನಂತೆ ಬಿಜೆಪಿ ಮತ್ತು ಬಲಪಂಥವನ್ನು ವಿರೋಧಿಸಿಕೊಂಡಿದ್ದಿದ್ದೇಯಾದರೆ ರಾಷ್ಟ್ರ ಮಟ್ಟದಲ್ಲಿ ಅವರಿಗೊಂದು ಸ್ಥಾನ ಇರುತ್ತಿತ್ತು. ತೃತೀಯ ರಂಗ, ಪರ್ಯಾಯ ರಂಗಗಳ ಅಗತ್ಯ ಕಂಡುಬಂದಾಗಲೆಲ್ಲಾ ನಿತೀಶ್ ಕುಮಾರ್ ಮುಂಚೂಣಿಯಲ್ಲಿರುತ್ತಿದ್ದರು. ಆದರೀಗ ಬಿಜೆಪಿ ಸಹವಾಸ ಮಾಡಿ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣದ ಅವಕಾಶದಿಂದ ವಂಚಿತರಾಗಿದ್ದಾರೆ.

ನಿತೀಶ್ ಕುಮಾರ್ ಮತ್ತು ಬಿಜೆಪಿಗೆ ನಿರ್ಣಾಯಕವಾಗಿರುವ ಬಿಹಾರ ಗೆಲುವು!
ಬಿಹಾರ ಚುನಾವಣೋತ್ತರ ಸಮೀಕ್ಷೆ: ತೇಜಸ್ವಿ ಯಾದವ್‌ ಮುಖ್ಯಮಂತ್ರಿಯಾಗುವ ಸಾಧ್ಯತೆ

ಇನ್ನು ಚುನಾವಣೋತ್ತರ ಸಮೀಕ್ಷೆಗಳು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಬಿಜೆಪಿಗಿಂತಲೂ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು‌ ಹೇಳಿವೆ. ಇದರ ಅರ್ಥ ಜೆಡಿಯು ಅಧಿಕೃತವಾದ ಪ್ರತಿಪಕ್ಷವೂ ಆಗಿರುವುದಿಲ್ಲ. ಅಂಥ ಪರಿಸ್ಥಿತಿ ನಿರ್ಮಾಣವಾದರೆ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪರಿಸ್ಥಿತಿ ಬಿಹಾರದಲ್ಲಿ ನಿತೀಶ್ ಕುಮಾರ್ ಅವರಿಗೆ ಬರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.‌ ಎಲ್ಲಕ್ಕಿಂತ ಹೆಚ್ಚಾಗಿ ವಯಸ್ಸಿನ‌ ಕಾರಣಕ್ಕೆ ಮತ್ತೊಂದು ಅವಧಿವರೆಗೆ ಕಾಯುವ ಅವಕಾಶವೂ ಅವರಿಗಿಲ್ಲ. ನಿತೀಶ್ ಬಿಟ್ಟರೆ ಆ ಪಕ್ಷಕ್ಕೆ ಶಕ್ತಿ ತುಂಬ‌ ಬಲ್ಲ ಎರಡನೇ ಹಂತದ ನಾಯಕರೂ ಇಲ್ಲ. ಈ ಎಲ್ಲಾ ಕಾರಣಗಳಿಂದ ಈ‌ ಬಾರಿ ಸೋತರೆ ರಾಜಕೀಯವಾಗಿ ನಿತೀಶ್ ಕುಮಾರ್ ಅವರ ಅಧ್ಯಾಯ ಮುಗಿದ ಕತೆಯಾಗಲಿದೆ. ಆದುದರಿಂದಲೇ ನಿತೀಶ್ ಕುಮಾರ್ ಪ್ರಚಾರದ ಕಡೆಯ ದಿನ 'ಇದು ನನ್ನ ಕಡೆಯ ಚುನಾವಣೆ' ಎಂಬ 'ಅಂತಿಮ ಅಸ್ತ್ರವನ್ನೂ' ಪ್ರಯೋಗಿಸಿದರು. ಸಮೀಕ್ಷೆಗಳು ಆ ಅಸ್ತ್ರವೂ ಕೆಲಸ ಮಾಡಿಲ್ಲ ಎನ್ನುತ್ತಿವೆ. ನಾಳೆ (ನವೆಂಬರ್ 10) ನಿತೀಶ್ ಕುಮಾರ್ ಭವಿಷ್ಯ ಏನಾಗಲಿದೆ ಎಂಬುದು ‌ನಿರ್ಧಾರವಾಗಲಿದೆ.

ನಿಶ್ಚಿಂತವಾಗಿರುವ ಕಾಂಗ್ರೆಸ್

ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರಿಗೆ ಹೋಲಿಸಿಕೊಂಡರೆ ಕಾಂಗ್ರೆಸ್ ನಾಯಕರು ನಿಶ್ಚಿಂತವಾಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಿಹಾರದಲ್ಲಿ ತಮ್ಮ ಪರವಾಗಿ ಏನಾದರೂ ಆಗಬಹುದು ಎಂಬ ನಿರೀಕ್ಷೆಗಳೇ ಇಲ್ಲದಿದ್ದರಿಂದ ಅವರೀಗ ಸೋತುಬಿಟ್ಟರೆ ಎಂಬ ಭಯದಲ್ಲೇನೂ ಇಲ್ಲ. ಆರ್ ಜೆಡಿ‌ ಜೊತೆ ಗೆದ್ದರೆ ಅಧಿಕಾರ, ಇಲ್ಲದಿದ್ದರೆ ಈಗಿನಂತೆ ಪ್ರತಿಪಕ್ಷ ಎಂಬ ಲೆಕ್ಕಾಚಾರ ಅವರದು.

ಉದಯೋನ್ಮುಖ ನಾಯಕ ತೇಜಸ್ವಿ ಯಾದವ್

ಈ ಬಾರಿ ರಾಷ್ಟ್ರೀಯ ಜನತಾದಳ (ಆರ್ ಜೆಡಿ)ನೇತೃತ್ವದ ಮಹಾಘಟಬಂಧನ ಗೆಲ್ಲುತ್ತೋ ಬಿಡುತ್ತೋ ಆದರೆ ತೇಜಸ್ವಿ ಯಾದವ್ ಅಂತೂ ಯುವನಾಯಕನಾಗಿ ಹೊರಹೊಮ್ಮಿದ್ದಾರೆ. ಅಪ್ಪ ಲಾಲುಪ್ರಸಾದ್ ಯಾದವ್ ಅನುಪಸ್ಥಿತಿಯಲ್ಲಿ ಆರ್ ಜೆಡಿಯನ್ನು ಮುನ್ನಡೆಸಿ ಸೈ ಎನಿಸಿಕೊಂಡಿದ್ದಾರೆ. ಕುಟುಂಬದವರೇಯಾದ ಮಿಸ್ಸಾ ಭಾರತಿ (ಸಹೋದರಿ) ಕೊಟ್ಟ ಕಿರಿಕುಳದಿಂದ ಹಿಡಿದು, ಅಪ್ಪನ ಅನುಪಸ್ಥಿತಿಯನ್ನು ಅರಗಿಸಿಕೊಂಡು ಆರ್ ಜೆಡಿಯನ್ನು ಮುನ್ನಡೆಸಿದ್ದಾರೆ.‌ ಎಲ್ಲಕ್ಕಿಂತ ಹೆಚ್ಚಾಗಿ ಜನಕ್ಕೆ ಹತ್ತಿರವಾಗುವಂತಹ ವಿಷಯಗಳು ಯಾವುವು? ಅವುಗಳನ್ನು ಪ್ರಸ್ತುತ ಪಡಿಸುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಂಡಿದ್ದಾರೆ. ಈ ಬಾರಿ ಮಹಾಮೈತ್ರಿ ಸೋತರೂ ತೇಜಸ್ವಿ ಯಾದವ್ ಗೆ ಮುಂದಿನ ಬಾರಿಯಾದರೂ ಅವಕಾಶ ಸಿಗಬಹುದು. ಈ ಬಾರಿಯ ಸೋಲೆ ಮುಂದಿನ ಸಲಕ್ಕೆ ಅನುಕಂಪ ಸೃಷ್ಟಿಸಬಹುದು. ವಯಸ್ಸು ಇರುವ ಕಾರಣಕ್ಕೆ ತೇಜಸ್ವಿ ಯಾದವ್ ಈ ಚುನಾವಣೆ ಸೋತರೂ ಭವಿಷ್ಯ ಮಾತ್ರ ಉಜ್ವಲವಾಗೇ ಇರಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com