ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್: ಸೆಷನ್ಸ್‌ ಕೋರ್ಟ್‌ ಮೊರೆ ಹೋದ ಅರ್ನಾಬ್

ಅರ್ನಬ್‌ ಗೋಸ್ವಾಮಿ ಸೋಮವಾರ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಅಲಿಬಾಗ್‌ನಲ್ಲಿರುವ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್: ಸೆಷನ್ಸ್‌ ಕೋರ್ಟ್‌ ಮೊರೆ ಹೋದ ಅರ್ನಾಬ್

ಬಂಧನ ಮತ್ತು ರಿಮಾಂಡ್ ವಿರುದ್ಧ ಅರ್ನಾಬ್‌ ಗೋಸ್ವಾಮಿ ಸಲ್ಲಿಸಿದ್ದ ಹೇಬಿಯಸ್ ಅರ್ಜಿಯಲ್ಲಿ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನಿರಾಕರಿಸಿದೆ. ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಜಸ್ಟೀಸ್‌ ಎಸ್‌ ಎಸ್‌ ಶಿಂದೆ ಹಾಗೂ ಜಸ್ಟೀಸ್‌ ಎಂ ಎಸ್‌ ಕಾರ್ಣಿಕ್‌ ಅವರಿದ್ದ ಪೀಠವು, ಅರ್ನಾಬ್‌ ಗೋಸ್ವಾಮಿ ಅವರಿಗೆ ಸೆಕ್ಷನ್‌ 493ರ ಅಡಿಯಲ್ಲಿ ಸಾಮಾನ್ಯ ಜಾಮೀನು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಈ ಅರ್ಜಿಯನ್ನು ನಾಲ್ಕು ದಿನದ ಒಳಗಾಗಿ ಸೆಷನ್ಸ್‌ ನ್ಯಾಯಾಲಯವು ಇತ್ಯರ್ಥಪಡಿಸಬೇಕು ಎಂದು ಹೇಳಿದೆ.

ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್: ಸೆಷನ್ಸ್‌ ಕೋರ್ಟ್‌ ಮೊರೆ ಹೋದ ಅರ್ನಾಬ್
ಅರ್ನಾಬ್ ಬಂಧನಕ್ಕೆ 40 ಮಂದಿಯ ತಂಡ ರಚಿಸಿದ್ದ ಮಹಾರಾಷ್ಟ್ರ ಗೃಹ ಇಲಾಖೆ

ಈ ಹಿನ್ನೆಲೆಯಲ್ಲಿ ಅರ್ನಬ್‌ ಗೋಸ್ವಾಮಿ ಸೋಮವಾರ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಅಲಿಬಾಗ್‌ನಲ್ಲಿರುವ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್: ಸೆಷನ್ಸ್‌ ಕೋರ್ಟ್‌ ಮೊರೆ ಹೋದ ಅರ್ನಾಬ್
ಅರ್ನಬ್‌ ಗೋಸ್ವಾಮಿ ಪ್ರಕರಣದ ವಿಚಾರಣೆ; ಸುಪ್ರೀಂ ಕೋರ್ಟ್‌ ತಾರತಮ್ಯಕ್ಕೆ ಟ್ವಿಟ್ಟಿಗರ ಅಸಮಾಧಾನ!

ಈ ಪ್ರಕರಣದಲ್ಲಿ ಅರ್ನಾಬ್ ಮತ್ತು ಇತರ ಇಬ್ಬರು ಆರೋಪಿಗಳನ್ನು ಕಸ್ಟಡಿ ನೀಡುವುದನ್ನು ನಿರಾಕರಿಸಿದ ಮತ್ತು ಮೂವರನ್ನು ನ್ಯಾಯಾಂಗ ಬಂಧನದಲ್ಲಿಡಬೇಕೆಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನವೆಂಬರ್ 4 ರ ಆದೇಶವನ್ನು ಪ್ರಶ್ನಿಸಿ ಅಲಿಬಾಗ್ ಪೊಲೀಸರು ಸಲ್ಲಿಸಿದ ಪರಿಷ್ಕೃತ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ಪ್ರಸ್ತುತ ವಿಚಾರಣೆ ನಡೆಸುತ್ತಿದೆ.

ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್: ಸೆಷನ್ಸ್‌ ಕೋರ್ಟ್‌ ಮೊರೆ ಹೋದ ಅರ್ನಾಬ್
ಕೋವಿಡ್ ಕೇಂದ್ರದಲ್ಲಿ ಮೊಬೈಲ್ ಬಳಕೆ: ತಲೋಜ್ ಜೈಲಿಗೆ ಅರ್ನಾಬ್ ಸ್ಥಳಾಂತರ

‌ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಗೋಸ್ವಾಮಿ ಮತ್ತು ಇತರ ಇಬ್ಬರು - ಫಿರೋಜ್ ಶೇಖ್ ಮತ್ತು ನಿತೀಶ್ ಸರ್ದಾ ಅವರನ್ನು ನವೆಂಬರ್ 4 ರಂದು ಬಂಧಿಸಲಾಯಿತು. ಮುಂಬಯಿಯಲ್ಲಿರುವ ಅರ್ನಾಬ್ ನಿವಾಸದಿಂದ ಬಂಧನಕ್ಕೊಳಗಾದ ನಂತರ, ಅವರನ್ನು ಅಲಿಬಾಗ್‌ಗೆ ಕರೆದೊಯ್ಯಲಾಯಿತು, ಅರ್ನಾಬ್‌ರನ್ನು ಪೊಲೀಸ್ ಕಸ್ಟಡಿಯಲ್ಲಿ ರಿಮಾಂಡ್ ಮಾಡಲು ಮುಖ್ಯ ಮ್ಯಾಜಿಸ್ಟ್ರೇಟ್ ನಿರಾಕರಿಸಿದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗೋಸ್ವಾಮಿ ಮತ್ತು ಇತರ ಇಬ್ಬರನ್ನು ನವೆಂಬರ್ 18 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿದೆ.

ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್: ಸೆಷನ್ಸ್‌ ಕೋರ್ಟ್‌ ಮೊರೆ ಹೋದ ಅರ್ನಾಬ್
ಮಾಧ್ಯಮಗಳ ಕೋಮು ದ್ವೇಷ ; ಅರ್ನಬ್‌ ಗೋಸ್ವಾಮಿ ವಿರುದ್ದ ಮೊಕದ್ದಮೆ ದಾಖಲು

ಗೋಸ್ವಾಮಿಯನ್ನು ಆರಂಭದಲ್ಲಿ ಅಲಿಬಾಗ್ ಜೈಲಿಗೆ COVID-19 ಕೇಂದ್ರವೆಂದು ಗೊತ್ತುಪಡಿಸಲಾದ ಸ್ಥಳೀಯ ಶಾಲೆಯಲ್ಲಿ ಇರಿಸಲಾಗಿತ್ತು, ನ್ಯಾಯಾಂಗ ಬಂಧನದಲ್ಲಿದ್ದಾಗ ಮೊಬೈಲ್ ಫೋನ್ ಬಳಸಿದ ಆರೋಪದಡಿ ಅವರನ್ನು ಭಾನುವಾರ ರಾಯಗಡ್ ಜಿಲ್ಲೆಯ ತಾಲೋಜ ಜೈಲಿಗೆ ಸ್ಥಳಾಂತರಿಸಲಾಯಿತು.

ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್: ಸೆಷನ್ಸ್‌ ಕೋರ್ಟ್‌ ಮೊರೆ ಹೋದ ಅರ್ನಾಬ್
ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!
Attachment
PDF
Arnab_Bail_Order_HC.pdf
Preview

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com