ಕಾಂಗ್ರೆಸ್ ಸೇರಲಿರುವ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್

2009 ರ ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ಸೇರಲಿರುವ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ 2019 ರಲ್ಲಿ ನಾಗರಿಕ ಸೇವಾ ಹುದ್ದೆಗೆ ರಾಜೀನಾಮೆ ನೀಡಿದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ರಾಜಕೀಯ ಧುಮುಕುವುದು ಖಚಿತವಾಗಿದೆ. ಸೆಂಥಿಲ್‌ ತಮಿಳುನಾಡು ಕಾಂಗ್ರೆಸ್ ಸೇರಲಿದ್ದಾರೆ ಎಂದು ಈಗ ದೃಢಪಡಿಸಿದ್ದಾರೆ.

"ದೇಶದಲ್ಲಿ ನಡೆಯುತ್ತಿರುವ ಎಲ್ಲವನ್ನು ಮತ್ತು ಕೇಂದ್ರ ಸರ್ಕಾರವು ನಮ್ಮನ್ನು ಕರೆದೊಯ್ಯುವ ವಿಧಾನವನ್ನು ವಿರೋಧಿಸಿ ನಾನು ರಾಜೀನಾಮೆ ನೀಡಿದ್ದೇನೆ" ಎಂದಿರುವ ಸೆಂಥಿಲ್‌, “ರಾಜಕೀಯ ಪರಿಹಾರಕ್ಕಾಗಿ ಎಲ್ಲರನ್ನೂ ಒಟ್ಟುಗೂಡಿಸಲು ಈ ಸಮಯ ಸರಿಯಾಗಿದೆ ಎಂದು ನಾನು ಈಗ ಭಾವಿಸುತ್ತೇನೆ. ನನಗೆ ಕಾರ್ಯ ನಿರ್ವಹಿಸಲು ಮತ್ತು ರಾಜಕೀಯ ಪರಿಹಾರವನ್ನು ಪಡೆಯಲು ಕಾಂಗ್ರೆಸ್ ಸರಿಯಾದ ವೇದಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ. ” ಎಂದು ನ್ಯೂಸ್‌ ಮಿನಿಟ್‌ ಗೆ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2009 ರ ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಸೇರಿಸಿಕೊಂಡಿರುವುದು ಸಂತೋಷವಾಗಿದೆ ಹಾಗೂ ತಾನು ಅದರ ಸಾಂಸ್ಥಿಕ ರಚನೆಯ ಭಾಗವಾಗಲಿದ್ದೇನೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

“ನಾನು ಸಾಮಾನ್ಯ ಶಾಸಕ, ಸಂಸದನಾಗುವುದಿಲ್ಲ. ನಾನು ಚುನಾವಣೆಯತ್ತ ಕೆಲಸ ಮಾಡುತ್ತೇನೆ ಮತ್ತು ಕಾಂಗ್ರೆಸ್ ಮೌಲ್ಯಗಳನ್ನು ಹರಡುತ್ತೇನೆ. ಸಮಾಜ ಅಥವಾ ವ್ಯಕ್ತಿಗಳಂತೆ ಎಲ್ಲರನ್ನೂ ರಾಜಕೀಯ ಪರಿಹಾರದತ್ತ ಒಗ್ಗೂಡಿಸುವುದು ನನ್ನ ಪ್ರಮುಖ ಕರ್ತವ್ಯ ಎಂದು ನಾನು ನೋಡುತ್ತೇನೆ. 2024 ರಲ್ಲಿ ನಾವು ಖಂಡಿತವಾಗಿಯೂ ಗೆಲುವು ಸಾಧಿಸುತ್ತೇವೆ ಎಂದು ನಾನು ನಂಬುತ್ತೇನೆ, ”ಎಂದು ಹೇಳಿದ್ದಾರೆ.

ಅಧಿಕಾರ ತ್ಯಜಿಸುವ ಸಮಯದಲ್ಲಿ, ದೇಶದಲ್ಲಿ "ಫ್ಯಾಸಿಸಂನ ಚೌಕಟ್ಟು" ಬೆಳೆಯುತ್ತಿದೆ ಮತ್ತು "ತರ್ಕಬದ್ಧ ಚರ್ಚೆಗೆ ಸ್ಥಳವಿಲ್ಲ" ಎಂದು ಸಸಿಕಾಂತ್ ಹೇಳಿದ್ದರು. ಬಳಿಕ ಸಾಮಾಜಿಕ ಹೋರಾಟ ರಂಗಕ್ಕೆ ಧುಮುಕಿದ ಸಸಿಕಾಂತ್ ಸೆಂಥಿಲ್‌, ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com