ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಜೋ ಬೈಡೆನ್‌ ಗೆಲುವು

ಗೆಲುವಿಗೆ 270 ಎಲೆಕ್ಟೋರಲ್‌ ಮತದ ಅನಿವಾರ್ಯತೆ ಇದ್ದು, ಜೋ ಬೈಡೆನ್‌ 284 ಸ್ಥಾನಗಳಲ್ಲಿ ಗೆದ್ದು ಭರ್ಜರಿ ವಿಜಯ ದಾಖಲಿಸಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಜೋ ಬೈಡೆನ್‌ ಗೆಲುವು

ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡೆನ್,‌ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ರನ್ನು ಸೋಲಿಸಿದ್ದಾರೆ.

ಗೆಲುವಿಗೆ 270 ಎಲೆಕ್ಟೋರಲ್‌ ಮತದ ಅನಿವಾರ್ಯತೆ ಇದ್ದು, ಜೋ ಬೈಡೆನ್‌ 284 ಸ್ಥಾನಗಳಲ್ಲಿ ಗೆದ್ದು ಭರ್ಜರಿ ವಿಜಯ ದಾಖಲಿಸಿದ್ದಾರೆ. ಟ್ರಂಪ್‌ 214 ಮತಗಳನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಅಮೆರಿಕದ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದ್ದು ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ.

ಬೈಡನ್‌ 7,48,47,834 ಮತ ಗಳಿಸಿದ್ದು, ಡೊನಾಲ್ಡ್‌ ಟ್ರಂಪ್‌ 7,05,91,531 ಮತಗಳನ್ನು ಗಳಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com