ಏನೇ ಆದರೂ ಮತ ಎಣಿಕೆ ಮುಂದುವರಿಯಲಿದೆ; ಜೋ ಬೈಡೆನ್ ಪ್ರತಿಜ್ಞೆ

ನಾವು ಈ ಸ್ಪರ್ಧೆಯಲ್ಲಿ ಜಯಗಳಿಸುತ್ತೇವೆ, ಡೆಮಾಕ್ರಟ್ ಪಕ್ಷ 300ಕ್ಕೂ ಹೆಚ್ಚು ಎಲೆಕ್ಟಾರಲ್ ಮತಗಳನ್ನು ಗಳಿಸಲಿದೆ ಎಂದು ಬೈಡೆನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನೇ ಆದರೂ ಮತ ಎಣಿಕೆ ಮುಂದುವರಿಯಲಿದೆ; ಜೋ ಬೈಡೆನ್ ಪ್ರತಿಜ್ಞೆ

ಗೆಲುವಿಗೆ ಸನ್ನಿಹಿತವಾಗಿರುವ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್‌ ಯಾವುದೇ ಕಾರಣಕ್ಕೂ ಮತ ಎಣಿಕೆ ಸ್ಥಗಿತಗೊಳ್ಳುವುದಿಲ್ಲ, ಎಣಿಕೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಬೈಡೆನ್‌ “ನಿಮ್ಮ ಮತ ಎಣಿಕೆಯಾಗಲಿದೆ, ನಾವು ಈ ಹೊತ್ತಿನಲ್ಲಿ ತಾಳ್ಮೆಯಿಂದ ಇರಬೇಕು. ಮತ ಎಣಿಕೆಯನ್ನು ನಿಲ್ಲಿಸಲು ಯಾರು, ಹೇಗೆ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಅದನ್ನು ತಡೆಯಲು ಯಾರು ಎಷ್ಟೇ ಪ್ರಯತ್ನಿಸಿದರೂ ನಾನು ಅದಕ್ಕೆ ಅವಕಾಶ ಕೊಡುವುದಿಲ್ಲ” ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಾವು ಈ ಸ್ಪರ್ಧೆಯಲ್ಲಿ ಜಯಗಳಿಸುತ್ತೇವೆ, ಡೆಮಾಕ್ರಟ್ ಪಕ್ಷ 300ಕ್ಕೂ ಹೆಚ್ಚು ಎಲೆಕ್ಟಾರಲ್ ಮತಗಳನ್ನು ಗಳಿಸಲಿದೆ ಎಂದು ಬೈಡೆನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೋ ಬೈಡೆನ್‌ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಆದರೆ ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಈ ಫಲಿತಾಂಶವನ್ನು ಒಪ್ಪದೆ, ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಪೆನ್ಸಿಲ್ವೇನಿಯಾ ರಾಜ್ಯದ ಮತ ಎಣಿಕೆಯನ್ನು ಕೂಡಲೇ ನಿಲ್ಲಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆದರೆ ಜಾರ್ಜಿಯಾದಲ್ಲಿ ಮತಗಳ ಅಂತರ ಕಡಿಮೆಯಿರುವುದರಿಂದ ಮರು ಎಣಿಕೆಗೆ ಆದೇಶ ನೀಡಲಾಗಿದೆ.

ಏನೇ ಆದರೂ ಮತ ಎಣಿಕೆ ಮುಂದುವರಿಯಲಿದೆ; ಜೋ ಬೈಡೆನ್ ಪ್ರತಿಜ್ಞೆ
ಸಿಎಎ-ಎನ್‌ಆರ್‌ಸಿ ಭಾರತಕ್ಕೆ ಹೊಂದುವಂತದಲ್ಲ; ಅಮೇರಿಕಾ ಅಧ್ಯಕ್ಷೀಯ ಅಭ್ಯರ್ಥಿ

ನಿರ್ಣಾಯಕವೆನಿಸಿದ್ದ ಜಾರ್ಜಿಯಾ ಹಾಗೂ ಪೆನ್ಸಿಲ್ವೇನಿಯಾದಲ್ಲಿ ಮುನ್ನಡೆ ಗಳಿಸುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಅಗತ್ಯ ಬೇಕಿದ್ದ 270 ಎಲೆಕ್ಟಾರಲ್‌ ಮತವನ್ನು ಬೈಡೆನ್‌ ಪಡೆದುಕೊಂಡಂತಾಗಿತ್ತು.

ಟ್ರಂಪ್‌ ತನ್ನ ಸ್ಥಾನವನ್ನು ಬಿಟ್ಟುಕೊಡದೆ ಮೊಂಡು ಹಠ ಹೂಡಿದರೂ, ಈಗಾಗಲೇ ಅಧಿಕಾರ ವರ್ಗ ಜೋ ಬೈಡೆನ್‌ರ ಭದ್ರತೆಯನ್ನು ಹೆಚ್ಚಿಸಿದೆ. ಫೆಡೆರಲ್‌ ಏವಿಯೇಶನ್‌ ಅಡ್ಮಿನಿಸ್ಟ್ರೇಶನ್‌ (FAA)ಯು ಬೈಡೆನ್‌ ಅವರ ನಿವಾಸದ ಮೇಲೆ ವಿಮಾನ ಸಂಚಾರಕ್ಕೆ ನಿಷೇಧ ಹೇರಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com