ಬಿಹಾರ ಚುನಾವಣೆ: ಮಧ್ಯಾಹ್ನ ಒಂದು ಗಂಟೆಯವರೆಗೆ 34.82% ಮತದಾನ

ಬೇಗುಸರಾಯಿ ಮತದಾನ ಕೇಂದ್ರದ ಹೊರಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಗ್ರಾಮಸ್ಥರು, ಮತದಾನ ಮಾಡಲು ನಿರಾಕರಿಸಿರುವ ಘಟನೆ ನಡೆದಿದೆ.
ಬಿಹಾರ ಚುನಾವಣೆ: ಮಧ್ಯಾಹ್ನ ಒಂದು ಗಂಟೆಯವರೆಗೆ 34.82% ಮತದಾನ

ಬಿಹಾರದಲ್ಲಿ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಮಧ್ಯಾಹ್ನ ಒಂದು ಗಂಟೆಯವರೆಗೆ ಸುಮಾರು 34.82% ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬಿಹಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎಂಬುದನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

ಮಧ್ಯಾಹ್ನದವರೆಗೆ ಮತದಾನವು ನಿಧಾನಗತಿಯಲ್ಲೇ ಸಾಗಿದ್ದು, ಹತ್ತು ಗಂಟೆಯಷ್ಟು ಹೊತ್ತಿಗೆ 8.13% ಮತದಾನವಾಗಿತ್ತು. ಹನ್ನೊಂದು ಗಂಟೆಗೆ ಮತದಾನದ ಪ್ರಮಾಣವು 19.77%ದಷ್ಟು ಏರಿಕೆಯಾಗಿತ್ತು. ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಎಲ್ಲಾ ಪ್ರಮುಖ ನಾಯಕರು ಕೊನೆಯ ಹಂತದ ಮತದಾನಕ್ಕೆ ತೀವ್ರವಾದ ಪ್ರಚಾರ ಕೈಗೊಂಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮತದಾನಕ್ಕಾಗಿ ತಾತ್ಕಾಲಿಕ ಸೇತುವೆ:

ಬಿಹಾರದ ಮುಝಫ್ಫರ್‌ಪುರ್‌ನಲ್ಲಿ ಮತದಾರರು ಹಳ್ಳವನ್ನು ದಾಟಲು ತಾತ್ಕಾಲಿಕ ಸೇತುವೆಯನ್ನು ಅಲ್ಲಿನ ಸ್ಥಳೀಯರೇ ನಿರ್ಮಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಮತವನ್ನು ಚಲಾಯಿಸಬೇಕೆಂದು ಈ ರೀತಿ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.

ಮತದಾನ ಬಹಿಷ್ಕರಿಸಿದ ಬೇಗುಸರಾಯಿ ಗ್ರಾಮಸ್ಥರು:

ಬೇಗುಸರಾಯಿ ಪ್ರದೇಶದಲ್ಲಿ ಯಾವುದೇ ಸರ್ಕಾರಗಳು ಅಭಿವೃದ್ದಿ ಕಾರ್ಯವನ್ನು ಮಾಡಿಲ್ಲ ಎಂದು ಆರೋಪಿಸಿ ಸಂಪೂರ್ಣ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಮತದಾನ ಕೇಂದ್ರದ ಹೊರಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಗ್ರಾಮಸ್ಥರು, ಮತದಾನ ಮಾಡಲು ನಿರಾಕರಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com