ಉತ್ತರಾಖಂಡ್‌ನಲ್ಲಿ 80 ಶಿಕ್ಷಕರಿಗೆ ಕರೋನಾ ಸೋಂಕು; ಮುಚ್ಚಲ್ಪಟ್ಟವು 84 ಶಾಲೆಗಳು

ಉತ್ತರಾಖಂಡ್‌ನಲ್ಲಿ ನಡೆದಿರುವ ಘಟನೆ, ಇದು ಶಾಲೆಗಳನ್ನು ತೆರೆಯಲು ಸಕಾಲವಲ್ಲ ಎಂಬ ಅಂಶವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ.
ಉತ್ತರಾಖಂಡ್‌ನಲ್ಲಿ 80 ಶಿಕ್ಷಕರಿಗೆ ಕರೋನಾ ಸೋಂಕು; ಮುಚ್ಚಲ್ಪಟ್ಟವು 84 ಶಾಲೆಗಳು

ದೇಶದಲ್ಲಿ ಕರೋನಾ ಸೋಂಕಿನ ಎರಡನೇ ಅಲೆ ಆರಂಭವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದರೂ, ಲಾಕ್‌ಡೌನ್‌ನನ್ನು ಸಂಪೂರ್ಣವಾಗಿ ತೆರವುಗೊಳಿಸಿ ಕೇಂದ್ರ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿಯೂ ಚಟುವಟಿಕೆಯನ್ನು ನಿರೀಕ್ಷಿಸುತ್ತದೆ. ಇದೇ ರೀತಿ ಶಾಲೆಗಳನ್ನು ಕೂಡಾ ಪುನರಾರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿರುವಾಗಲೇ, ಉತ್ತರಾಖಂಡ್‌ನ 84 ಶಾಲೆಗಳನ್ನು ಕೋವಿಡ್‌ನ ಕಾರಣದಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಉತ್ತರಾಖಂಡ್‌ ರಾಜ್ಯದ ಖಿರ್ಸು, ಪೌರಿ, ಕೋಟ್‌, ಪಾಬೋ ಮತ್ತು ಕಲ್ಜಿಕಾಲ್‌ ಎಂಬ ಪ್ರದೇಶದಲ್ಲಿ ಇರುವಂತಹ 84 ಶಾಲೆಗಳನ್ನು ಐದು ದಿನಗಳ ಮಟ್ಟಿಗೆ ಮುಚ್ಚಲು ಜಿಲ್ಲಾಡಳಿತ ಆದೇಶ ನೀಡಿದೆ. ಪೌರಿ ಜಿಲ್ಲೆಗೆ ಒಳಪಡುವ ಈ ಪ್ರದೇಶದ ಸುಮಾರು 80 ಶಿಕ್ಷಕರು ಕೋವಿಡ್‌ ಸೋಂಕಿಗೆ ತುತ್ತಾಗಿರುವುದರಿಂದ ಜಿಲ್ಲಾಡಳಿತ ಈ ನಿರ್ಧಾರವನ್ನು ತಾಳಿದೆ.

ಉತ್ತರಾಖಂಡ್‌ನಲ್ಲಿ 80 ಶಿಕ್ಷಕರಿಗೆ ಕರೋನಾ ಸೋಂಕು; ಮುಚ್ಚಲ್ಪಟ್ಟವು 84 ಶಾಲೆಗಳು
ಕೋವಿಡ್ ಎರಡನೇ ಅಲೆಯ ಆತಂಕದ ನಡುವೆ ಶಾಲಾ ಆರಂಭದ ತಲ್ಲಣ!

ಮಾಧ್ಯಮದವರೊಂದಿಗೆ ಮಾತನಾಡಿರುವ ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿರುವ ಅಮಿತ್‌ ನೇಗಿ ಅವರು, ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯದ ಎಲ್ಲಾ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಪಾಲಿಸಬೇಕಾದ ಕೋವಿಡ್‌ ನಿಯಮಾವಳಿಗಳನ್ನು ಕೂಡಾ ಬಿಡುಗಡೆ ಮಾಡಿದೆ, ಎಂದು ಹೇಳಿದ್ದಾರೆ.

ಉತ್ತರಾಖಂಡ್‌ನಲ್ಲಿ 80 ಶಿಕ್ಷಕರಿಗೆ ಕರೋನಾ ಸೋಂಕು; ಮುಚ್ಚಲ್ಪಟ್ಟವು 84 ಶಾಲೆಗಳು
ಕೋವಿಡ್ ಎರಡನೇ ಅಲೆಯ ಆತಂಕದ ನಡುವೆ ಶಾಲಾ ಆರಂಭದ ತಲ್ಲಣ!

ಶಿಕ್ಷಕರಿಗೆ ಕರೋನಾ ಸೋಂಕು ತಗುಲಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿಯೂ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಲಾಗಿತ್ತು. ನವೆಂಬರ್‌ 17ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ಆರಂಭಕ್ಕೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿರುವ ಸರ್ಕಾರ, ಆ ವಿದ್ಯಾರ್ಥಿಗಳ ಪ್ರತಿಕ್ರಿಯೆ ನೋಡಿಕೊಂಡು ಅದರ ಬೆನ್ನಲ್ಲೇ ಪದವಿಪೂರ್ವ ತರಗತಿಗಳನ್ನೂ ಆರಂಭಿಸಲು ಸಜ್ಜಾಗಿದೆ. ಈ ಕುರಿತಾಗಿ ವಿಸ್ತೃತವಾದ ವಿಶ್ಲೇಷಣೆಯನ್ನು ಪ್ರತಿಧ್ವನಿ ಪ್ರಕಟಿಸಿತ್ತು.

ಉತ್ತರಾಖಂಡ್‌ನಲ್ಲಿ 80 ಶಿಕ್ಷಕರಿಗೆ ಕರೋನಾ ಸೋಂಕು; ಮುಚ್ಚಲ್ಪಟ್ಟವು 84 ಶಾಲೆಗಳು
ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ: ಶುರುವಾಯಿತು ಪರ-ವಿರೋಧ ಚರ್ಚೆ

ಈಗ ಉತ್ತರಾಖಂಡ್‌ನಲ್ಲಿ ನಡೆದಿರುವ ಘಟನೆ, ಇದು ಶಾಲೆಗಳನ್ನು ತೆರೆಯಲು ಸಕಾಲವಲ್ಲ ಎಂಬ ಅಂಶವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ. ಈಗ ಶಾಲೆಗಳನ್ನು ತೆರೆಯುವುದು ಶಿಕ್ಷಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಅಪಾಯವನ್ನು ಒಡ್ಡುವಂತಹ ಸಂದರ್ಭಕ್ಕೆ ಎಡೆಮಾಡಿಕೊಡಲಿದೆ.

ಉತ್ತರಾಖಂಡ್‌ನಲ್ಲಿ 80 ಶಿಕ್ಷಕರಿಗೆ ಕರೋನಾ ಸೋಂಕು; ಮುಚ್ಚಲ್ಪಟ್ಟವು 84 ಶಾಲೆಗಳು
ಸೇತುಬಂಧ ಯಡವಟ್ಟು: ಸಾಧಕರ ಪಟ್ಟಿಯಲ್ಲಿ ಅಧಿಕಾರಿ ಹರ್ಷ ಗುಪ್ತಾ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com