ಬಿಹಾರ ಚುನಾವಣೆ: ಫಲಿತಾಂಶದ ಮೊದಲು ಲಾಲೂಗಿಲ್ಲ ಬಿಡುಗಡೆ ಭಾಗ್ಯ!

ಹೈಕೋರ್ಟ್ ವಿಚಾರಣೆಯಲ್ಲಿ, ವಾದ ಮಂಡಿಸಿದ ಲಾಲೂ ಪರ ವಕೀಲ ಕಪಿಲ್ ಸಿಬಲ್ ಸಿಬಿಐ "ಜಾಮೀನು ಅರ್ಜಿಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದೆ" ಎಂದು ಆರೋಪಿಸಿದ್ದಾರೆ.
ಬಿಹಾರ ಚುನಾವಣೆ: ಫಲಿತಾಂಶದ ಮೊದಲು ಲಾಲೂಗಿಲ್ಲ ಬಿಡುಗಡೆ ಭಾಗ್ಯ!

ಸಿಬಿಐ ಪರ ವಕೀಲರು ಜಾರ್ಖಂಡ್ ಹೈಕೋರ್ಟ್ ಮುಂದೆ ತಮ್ಮ ವಾದ ಸಲ್ಲಿಸದ ಕಾರಣ ಮೇವಿನ ಹಗರಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರ ಜಾಮೀನು ವಿಚಾರಣೆಯನ್ನು ನವೆಂಬರ್ 27 ಕ್ಕೆ ಮುಂದೂಡಲಾಗಿದೆ.

ಭ್ರಷ್ಟಾಚಾರದ ಆರೋಪದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಯಾದವ್ ಅವರಿಗೆ, ಸರ್ಕಾರದ ಹಣವನ್ನು ದುರ್ಬಳಕೆ ಮಾಡಿದ ಪ್ರಕರಣ ಹಾಗೂ ಇತರ ಹಲವು ಪ್ರಕರಣಗಳಲ್ಲಿ ಈಗಾಗಲೇ ಜಾಮೀನು ನೀಡಲಾಗಿದೆ. ಜಾಮೀನು ಸಿಗಲು ಇದು ಕೊನೆಯ ಪ್ರಕರಣವಾಗಿದ್ದು, ಲಾಲು ಯಾದವ್ ಈ ಬಾರಿ ನವೆಂಬರ್ 9 ಕ್ಕೆ ಜಾಮೀನಿನ ಮೇಲೆ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೈಕೋರ್ಟ್ ವಿಚಾರಣೆಯಲ್ಲಿ, ವಾದ ಮಂಡಿಸಿದ ಲಾಲೂ ಪರ ವಕೀಲ ಕಪಿಲ್ ಸಿಬಲ್ ಸಿಬಿಐ "ಜಾಮೀನು ಅರ್ಜಿಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದೆ" ಎಂದು ಆರೋಪಿಸಿದ್ದಾರೆ.

ಚೈಬಾಸ ಖಜಾನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದವ್ ಅವರಿಗೆ ಕಳೆದ ತಿಂಗಳು ಜಾಮೀನು ಪಡೆದಿದ್ದರು.

ಬಿಹಾರದ ಪ್ರಭಾವಿ ನೇತಾರರಾಗಿರುವ ಲಾಲೂ ಪ್ರಸಾದ್ ಯಾದವ್ ತನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನ ಸಭಾ ಚುನಾವಣಾ ಪ್ರಚಾರದಿಂದ ಹೊರಗುಳಿದಿದ್ದಾರೆ. ಲಾಲೂ ಪ್ರಸಾದ್ ಯಾದವ್ ರ ಅನುಪಸ್ಥಿತಿ ಹಿನ್ನಲೆಯಲ್ಲಿ ಅವರ ಪುತ್ರ ತೇಜಸ್ವಿ ಯಾದವ್ ಪಕ್ಷವನ್ನು ಮುನ್ನಡೆಸಿದ್ದರು.

ಬಿಹಾರ ಚುನಾವಣೆ: ಫಲಿತಾಂಶದ ಮೊದಲು ಲಾಲೂಗಿಲ್ಲ ಬಿಡುಗಡೆ ಭಾಗ್ಯ!
ಬಿಹಾರ: ಮತ ಎಣಿಕೆಯಂದು ಲಾಲೂ ಪ್ರಸಾದ್ ಯಾದವ್‌ ಜಾಮೀನಿನ ಮೇಲೆ ಬಿಡುಗಡೆಯಾಗುವ ಸಾಧ್ಯತೆ

ನವೆಂಬರ್ 10 ರಂದು ಬಿಹಾರ ಚುನಾವಣೆ ಫಲಿತಾಂಶ ಹೊರ ಬೀಳಲಿದ್ದು, ಅದಕ್ಕೂ ಒಂದು ದಿನ ಮುಂಚಿತವಾಗಿ ಲಾಲೂ ಪ್ರಸಾದ್ ಯಾದವ್ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ ಎನ್ನಲಾಗಿತ್ತು. ಅದರೆ ಸಿಬಿಐ ತನ್ನ ವಾದ ಮಂಡಿಸದ ಕಾರಣ ಜಾಮೀನು ಪ್ರಕ್ರಿಯೆ ಮುಂದೂಡಲ್ಪಟ್ಟಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com