ತಮಿಳುನಾಡು: ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರ ಬಂಧನ

ವೇಲ್ ಯಾತ್ರ ಆಯೋಜಿಸಲು ಬಿಜೆಪಿ ತಿಂಗಳ ಹಿಂದೆಯೇ ರಾಜ್ಯ ಸರ್ಕಾರದ ಬಳಿ ಅನುಮತಿ ಕೋರಿದ್ದರೂ, ಕೋವಿಡ್ ಕಾರಣಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಬಿಜೆಪಿ ರಾಜ್ಯ ಸರ್ಕಾರದ ಆದೇಶವನ್ನೂ ಮೀರಿ ಯಾತ್ರೆಯನ್ನು ಆಯೋಜಿಸಿದೆ.
ತಮಿಳುನಾಡು: ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರ ಬಂಧನ

ಸರ್ಕಾರದ ಅನುಮತಿಯಿಲ್ಲದೆ 'ವೇಲ್ ಯಾತ್ರ' ಆಯೋಜಿಸಿದ್ದ ಬಿಜೆಪಿಯನ್ನು ತಮಿಳುನಾಡು ಪೊಲೀಸರು ತಡೆದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ, ಬಿಜೆಪಿ ಹಿರಿಯ ನಾಯಕ ಎಚ್ ರಾಜಾ, ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಎಲ್ ಮುರುಗನ್ ಸೇರಿದಂತೆ ಹಲವು ನಾಯಕರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ 'ವೇಲ್ ಯಾತ್ರ' ವನ್ನು ತಿರುತ್ತಾನಿ ಬಳಿಯಲ್ಲಿ ಪೊಲೀಸರು ತಡೆದಿದ್ದಾರೆ.

ವೇಲ್ ಯಾತ್ರ ಆಯೋಜಿಸಲು ಬಿಜೆಪಿ ತಿಂಗಳ ಹಿಂದೆಯೇ ರಾಜ್ಯ ಸರ್ಕಾರದ ಬಳಿ ಅನುಮತಿ ಕೋರಿದ್ದರೂ, ಕೋವಿಡ್ ಕಾರಣಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಬಿಜೆಪಿ ರಾಜ್ಯ ಸರ್ಕಾರದ ಆದೇಶವನ್ನೂ ಮೀರಿ ಯಾತ್ರೆಯನ್ನು ಆಯೋಜಿಸಿದೆ.

ಬಿಜೆಪಿ ಆಯೋಜಿಸಿದ್ದ ಯಾತ್ರೆಯಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಬಿಜೆಪಿ ಈಗಾಗಲೇ ಶ್ರೀ ರಾಮ, ಶಬರಿಮಲೆ ಅಯ್ಯಪ್ಪನ ಹೆಸರಿನಲ್ಲಿ ರಾಜಕೀಯ ಮಾಡಿದೆ. ಇದೀಗ ತಮಿಳುನಾಡಲ್ಲೂ ಪಕ್ಷ ಬಲವರ್ಧನೆಗೆ ಶ್ರೀಕೃಷ್ಣನನ್ನು ಹಿಡಿದುಕೊಂಡಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com