ಕ್ವಾಡ್‌ ರಾಷ್ಟ್ರಗಳ ಜಂಟಿ ನೌಕಾಭ್ಯಾಸ; ಕ್ಯಾತೆ ತೆಗೆದ ಚೀನಾ

ಈ ಅಭ್ಯಾಸದ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿರುವ ಚೀನಾವು, ಇಂಡೋ-ಪೆಸಿಫಿಕ್‌ ವಲಯ ಕ್ವಾಡ್‌ ರಾಷ್ಟ್ರಗಳು ತಮ್ಮ ಪ್ರಭಾವ ಬೀರಲು ಈ ಅಭ್ಯಾಸವನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳಿದೆ.
ಕ್ವಾಡ್‌ ರಾಷ್ಟ್ರಗಳ ಜಂಟಿ ನೌಕಾಭ್ಯಾಸ; ಕ್ಯಾತೆ ತೆಗೆದ ಚೀನಾ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಇನ್ನೂ ಜ್ವಲಂತವಾಗಿರುವ ಸಂದರ್ಭದಲ್ಲಿಯೇ, ಕ್ವಾಡ್‌ ರಾಷ್ಟ್ರಗಳು ಎಂದರೆ, ಭಾರತ, ಅಮೇರಿಕಾ, ಜಪಾನ್‌ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ನೌಕಾ ಸೇನೆಗಳು ಜಂಟಿಯಾಗಿ ಬಂಗಾಳ ಕೊಲ್ಲಿಯಲ್ಲಿ ಮಲಬಾರ್‌ ನೌಕಾಭ್ಯಾಸ ಆರಂಭಿಸಿವೆ. ಗಡಿಯ ವಿಚಾರದಲ್ಲಿ ತಕರಾರು ಎತ್ತಿದ್ದ ಚೀನಾ, ಈಗ ಜಂಟಿ ಸಮರಾಭ್ಯಾಸಕ್ಕೂ ತಕರಾರು ಎತ್ತಿದೆ.

ಬಂಗಾಲ ಕೊಲ್ಲಿಯ ಸಮೀಪದ ಮಲಕ್ಕಾ ಸ್ಟ್ರೈಟ್‌ನಲ್ಲಿ ಈ ನೌಕಾಭ್ಯಾಸ ನಡೆಯುತ್ತಿದೆ. ಇದಾದ ಬಳಿಕ ಅರಬ್ಬೀ ಸಮುದ್ರದಲ್ಲೂ ಮಲಬಾರ್‌ ನೌಕಾಭ್ಯಾಸ ನಡೆಯಲಿದೆ. ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿ ಕ್ವಾಡ್‌ ರಾಷ್ಟ್ರಗಳು ಒಟ್ಟು ಸೇರಿ ಸಮರಾಭ್ಯಾಸ ನಡೆಸುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಅಭ್ಯಾಸದ ಮೊದಲ ಹಂತ ಅಂದರೆ, ನವೆಂಬರ್‌ 6ವರೆಗೆ, ಒಂದು ರಾಷ್ಟ್ರದ ನೌಕಾಧಿಕಾರಿಗಳು ಇನ್ನೊಂದು ರಾಷ್ಟ್ರದ ನೌಕಾಧಿಕಾರಿಯನ್ನು ಭೇಟಿಯಾಗುವ ಹಾಗಿಲ್ಲ. ಕೋವಿಡ್‌ನ ಕಾರಣದಿಂದ ಈ ನಿರ್ಧಾರವನ್ನು ತಾಳಲಾಗಿದೆ.

ಅಭ್ಯಾಸದಲ್ಲಿ ಭಾರತದ ಒಂದು ಸಬ್‌ಮರೈನ್‌ ಸೇರಿದಂತೆ ಐದು ನೌಕೆಗಳು, ಅಮೇರಿಕಾ ನೌಕಾದಳದ ಜಾನ್‌ ಎಸ್‌ ಮೆಕೈನ್‌ ಮಿಸೈಲ್‌ ಡಿಸ್ಟ್ರಾಯರ್‌, ಆಸ್ಟ್ರೇಲಿಯಾದ ಬಾಲರಾಟ್‌ ಫ್ರಿಗೇಟ್‌ ಮತ್ತು ಜಪಾನ್‌ನ ಒಂದು ನೌಕೆಯು ಪಾಲ್ಗೊಂಡಿದೆ.

ಆಸ್ಟ್ರೇಲಿಯಾದ ರಕ್ಷಣಾ ಮಂತ್ರಿ ಲಿಂಡಾ ರೆನೋಲ್ಡ್ಸ್‌ ನೌಕಾಭ್ಯಾಸದ ಕುರಿತು ಮಾತನಾಡಿ, ಸಮಾನ ಮನಸ್ಕ ರಾಷ್ಟ್ರಗಳ ನಡುವಿನ ಸಮನ್ವಯತೆ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ. ಇಂಡೋ-ಪೆಸಿಫಿಕ್‌ ವಲಯವನ್ನು ಸದೃಢ ಮತ್ತು ಮುಕ್ತವಾಗಿರಿಸಲು ಈ ಅಭ್ಯಾಸವು ಸಹಕಾರಿಯಾಗಲಿದೆ, ಎಂದು ಹೇಳಿದ್ದಾರೆ.

ಚೀನಾ ಕ್ಯಾತೆ:

ನೌಕಾಭ್ಯಾಸದ ಕುರಿತು ಕೊಂಕು ನುಡಿಗಳನ್ನಾಡಿರುವ ಚೀನಾ, ಈ ಅಭ್ಯಾಸವು ಶಾಂತಿಗಾಗಿ ಮತ್ತು ಸದೃಢತೆಗಾಗಿ ಇದ್ದರೆ ಒಳಿತು. ಇದಕ್ಕೆ ವಿರುದ್ದವಾಗಿ ಇರುವುದು ಬೇಡ. ಚೀನಾ ವಿರುದ್ದವಾಗಿರುವ ರಾಷ್ಟ್ರಗಳನ್ನು ಅಮೇರಿಕವು ಒಗ್ಗೂಡಿಸುತ್ತಿದೆ. ಇದರಿಂದಾಗಿ ಎಲ್ಲರಲ್ಲೂ ʼಶಿತಲ ಸಮರದʼ ಮನಸ್ಥಿತಿ ಉಂಟಾಗಿದೆ, ಎಂದಿದೆ.

ಇನ್ನು ಈ ಅಭ್ಯಾಸದ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿರುವ ಚೀನಾವು, ಇಂಡೋ-ಪೆಸಿಫಿಕ್‌ ವಲಯ ಕ್ವಾಡ್‌ ರಾಷ್ಟ್ರಗಳು ತಮ್ಮ ಪ್ರಭಾವ ಬೀರಲು ಈ ಅಭ್ಯಾಸವನ್ನು ಬಳಸಿಕೊಳ್ಳುತ್ತಿವೆ ಎಂದು ಹೇಳಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com