ಅಸ್ತಿತ್ವದಲ್ಲೇ ಇಲ್ಲದ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾದ ಯೋಗಿ

‘ಲವ್ ಜಿಹಾದ್’ ಎನ್ನುವುದು ಹಿಂದೂ ಬಲಪಂಥೀಯ ಶಕ್ತಿಗಳು ಮುಸ್ಲಿಂ ಸಮುದಾಯದ ಮೇಲೆ ಅಪವಾದ ಹೊರಿಸಲು ರಚಿಸಿದ ಕಲ್ಪನೆ ಆಗಿದ್ದು, ಅವರು ಸ್ವತಃ ಕಲ್ಪಿಸಿಕೊಂಡ ಕಾಲ್ಪನಿಕ ಮೋಸ ಆಗಿದೆ.
ಅಸ್ತಿತ್ವದಲ್ಲೇ ಇಲ್ಲದ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾದ ಯೋಗಿ

ಹಿಂದೂ ಮುಸ್ಲಿಂ ಯುವಕ ಯುವತಿಯರ ಪ್ರೇಮ ಮತ್ತು ವಿವಾಹದ ಕುರಿತು ಈ ಹಿಂದೆ ದನಿ ಎತ್ತಿದ್ದ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಮೊನ್ನೆ ಮೊನ್ನೆ ಲವ್ ಜಿಹಾದ್ ವಿರುದ್ದ ಇನ್ನಷ್ಟು ಕಟುವಾಗಿ ಮಾತಾಡಿದ್ದಾರೆ. ಜೌನ್‌ಪುರದಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಆದಿತ್ಯನಾಥ್ ಅವರು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಒಬ್ಬ ವ್ಯಕ್ತಿಯು ಕೇವಲ ಮದುವೆಯಾಗಲು ಬೇರೆ ಧರ್ಮಕ್ಕೆ ಮತಾಂತರಗೊಂಡರೆ, ಆ ಮತಾಂತರವು ಮಾನ್ಯವಾಗುವುದಿಲ್ಲ, ಇದಕ್ಕಾಗಿಯೇ ಸರ್ಕಾರ ಲವ್ ಜಿಹಾದ್ ವಿರುದ್ದ ಸೂಕ್ತ ಕಠಿಣ ಕಾನೂನು ರಚಿಸಲು ಮುಂದಾಗಿದೆ ಎಂದು ಹೇಳಿದ್ದಾರೆ.

‘ಲವ್ ಜಿಹಾದ್’ ಎನ್ನುವುದು ಹಿಂದೂ ಬಲಪಂಥೀಯ ಶಕ್ತಿಗಳು ಮುಸ್ಲಿಂ ಸಮುದಾಯದ ಮೇಲೆ ಅಪವಾದ ಹೊರಿಸಲು ರಚಿಸಿದ ಕಲ್ಪನೆ ಆಗಿದ್ದು, ಅವರು ಸ್ವತಃ ಕಲ್ಪಿಸಿಕೊಂಡ ಕಾಲ್ಪನಿಕ ಮೋಸ ಆಗಿದೆ. ಇದರ ಪ್ರಕಾರ ಮುಸ್ಲಿಂ ಪುರುಷರು ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರಗೊಳಿಸುವ ಸಲುವಾಗಿ ಮದುವೆ ಆಗಿ ಮೋಸ ಮಾಡುತಿದ್ದಾರೆ ಎನ್ನಲಾಗುತ್ತಿದೆ. ಲವ್ ಜಿಹಾದ್ ಅಂತಿಮವಾಗಿ ದೇಶದಲ್ಲಿ ಶೇಕಡಾ 85 ರಷ್ಟು ಜನಸಂಖ್ಯೆಯನ್ನು ಹೊಂದಿರುವ - ಹಿಂದೂಗಳನ್ನೆ ಅಲ್ಪಸಂಖ್ಯಾತರನ್ನಾಗಿ ಮಾಡುವ ರಹಸ್ಯ ಯೋಜನೆಯ ಭಾಗವಾಗಿದೆ ಎಂದು ಹೇಳಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಸೇರಿದಂತೆ ನ್ಯಾಯಾಲಯಗಳು ಕೂಡಾ ಲವ್‌ ಜಿಹಾದ್‌ ಅನ್ನುವುದು ಇಲ್ಲ ಎಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಪರ್ಯಾಸವೆಂದರೆ, ಆದಿತ್ಯನಾಥ್ ಅವರು ಉಲ್ಲೇಖಿಸಿದ ಅಲಹಾಬಾದ್ ಕೋರ್ಟು ನೀಡಿದ ತೀರ್ಪಿಗೆ ಮತ್ತು ಲವ್ ಜಿಹಾದ್ ಆರೋಪಗಳಿಗೆ ಯಾವುದೇ ಸಂಬಂಧವಿಲ್ಲ. ಕೋರ್ಟ್‌ ತೀರ್ಪು, ಮುಸ್ಲಿಂ ಮಹಿಳೆ ಮತ್ತು ಹಿಂದೂ ಪುರುಷ - ತಮ್ಮ ಸ್ವಂತ ಇಚ್ಚೆಯಿಂದ ಮದುವೆಯಾದವರು - ಅವರ ಕುಟುಂಬಗಳ ವಿರೋಧದ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಮಾಡಿದ್ದ ಕೋರಿಕೆಗೆ ಸಂಬಂಧಿಸಿದೆ. ಆದಾಗ್ಯೂ, ಮದುವೆಯಾಗಲು ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಅವರ “ಶಾಂತಿಯುತ ದಾಂಪತ್ಯ ಜೀವನ” ದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ನ್ಯಾಯಾಲಯ ನಿರಾಕರಿಸಿತು.

ಅಸ್ತಿತ್ವದಲ್ಲೇ ಇಲ್ಲದ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾದ ಯೋಗಿ
ಮದುವೆ ಉದ್ದೇಶಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್

ನಾವು ಕಠಿಣ ಕಾನೂನನ್ನು ತರುತ್ತೇವೆ - ಅವರ ಹೆಸರು ಮತ್ತು ಗುರುತನ್ನು ಮರೆಮಾಚಿ ಹೆಣ್ಣುಮಕ್ಕಳ ಗೌರವದೊಂದಿಗೆ ಚೆಲ್ಲಾಟ ಆಡುವವರು, ಅವರ ಆಟ ನಿಲ್ಲಿಸಬೇಕು ಇಲ್ಲದಿದ್ದರೆ, ಅವರ ಅಂತಿಮ ಯಾತ್ರೆಯ ಮೆರವಣಿಗೆಗೆ ಸಿದ್ದರಾಗಬೇಕು ಎಂದು ಹೇಳಿದ್ದಾರೆ. ಇಲ್ಲಿ ಅವರು ಹಿಂದೂಗಳು ಅಂತಿಮ ಯಾತ್ರೆಯಲ್ಲಿ ಜಪಿಸುವ ‘ರಾಮ್ ನಾಮ್ ಸತ್ಯ ಹೈ’ ಎಂಬ ಮಾತನ್ನು ಬಳಸಿರುವುದು - ಆದಿತ್ಯನಾಥ್ ಅವರ ಮಾತು ಹಿಂದೂಯೇತರ ಪುರುಷರಿಗೆ ಹೇಳಿದ್ದು ಎಂದು ಹೇಳಲಾಗುತ್ತಿದೆ.

ಗುರುತನ್ನು ಮರೆಮಾಚಿ ಮಹಿಳೆಯನ್ನು ಮದುವೆಯಾದ ಕಾರಣ ಯಾರನ್ನಾದರೂ ಕಾನೂನುಬದ್ಧವಾಗಿ ಮರಣದಂಡನೆಗೆ ಒಳಪಡಿಸುವ ಯಾವುದೇ ಕಾನೂನು ಇಲ್ಲದಿರುವುದರಿಂದ, ಅಂತ್ಯಕ್ರಿಯೆಗಳ ಬಗ್ಗೆ ಮುಖ್ಯಮಂತ್ರಿಯವರ ಉಲ್ಲೇಖವು ಜನಸಮೂಹ ಹಿಂಸಾಚಾರವನ್ನು ನಡೆಸಲು ಉತ್ತೇಜಿಸುವುದಕ್ಕೆ ಸಮನಾಗಿರುತ್ತದೆ.

ಕಳೆದ ಆಗಸ್ಟ್ನಲ್ಲಿ, ಆದಿತ್ಯನಾಥ್ ಸರ್ಕಾರವು ಲವ್ ಜಿಹಾದ್ ಅನ್ನು ತಡೆಗಟ್ಟಲು ಸುಗ್ರೀವಾಜ್ಞೆ ಮತ್ತು ಕ್ರಿಯಾ ಯೋಜನೆ ಯನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಿದ್ದರು. ಸರ್ಕಾರದ ಮುಂದಿನ ಹಂತಗಳು ಏನೇ ಇರಲಿ, ರಾಜ್ಯದಲ್ಲಿ ಅಂತರ್-ಧಾರ್ಮಿಕ ವಿವಾಹವು ಯುವ ದಂಪತಿಗಳಿಗೆ ಹೆಚ್ಚು ಅಪಾಯಕಾರಿಯಾಗಲಿದೆ ಎಂಬುದು ಸ್ಪಷ್ಟವಾಗಿದೆ. ಅಂತಹ ದಂಪತಿಗಳು ಉತ್ತರ ಪ್ರದೇಶದ ಮಾತ್ರವಲ್ಲದೆ ಭಾರತದ ಇತರ ಭಾಗಗಳಲ್ಲಿಯೂ ತಮ್ಮ ಕುಟುಂಬದ ಸದಸ್ಯರಿಂದ ಎದುರಾಗುವ ಬೆದರಿಕೆಯನ್ನು ಗಮನಿಸಿ ಪೊಲೀಸರು ಮತ್ತು ನ್ಯಾಯಾಲಯಗಳು ದಂಪತಿಗಳ ದೈಹಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವುದು ವಾಡಿಕೆ.

ಆದರೆ ಉತ್ತರ ಪ್ರದೇಶದಲ್ಲಿ ಕಾನ್ಪುರದ ಪೊಲೀಸರು 'ಲವ್ ಜಿಹಾದ್' ಮತ್ತು ನ್ಯಾಯಾಲಯಗಳ ಬಗ್ಗೆ ತನಿಖೆ ನಡೆಸಲು 'ವಿಶೇಷ ತನಿಖಾ ತಂಡ'ವೊಂದನ್ನು ರಚಿಸಿದ್ದಾರೆ. ಮಧ್ಯಪ್ರದೇಶ ಮತ್ತು ಇತರ ಒಂಬತ್ತು ರಾಜ್ಯಗಳಂತೆ, ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನು ಇಲ್ಲ. ಕಳೆದ ವರ್ಷ ರಾಜ್ಯ ಕಾನೂನು ಆಯೋಗವು ಆದಿತ್ಯನಾಥ್ ಸರ್ಕಾರಕ್ಕೆ ಕಾನೂನು ರಚಿಸುವ ಕರಡು ವರದಿಯನ್ನು ಸಲ್ಲಿಸಿತು. ಕರಡು ಕಾನೂನು ಇತರ ರಾಜ್ಯಗಳು ಬಲವಂತದ ಮತಾಂತರಗಳನ್ನು ನಿಷೇಧಿಸಲು ಅಥವಾ ಆಕರ್ಷಣೆಗಳಿಂದ ಪ್ರಚೋದನೆಗೊಳಗಾಗಿ ಮತಾಂತರ ಆಗುವುದನ್ನು ನಿಷೇಧಿಸಿದರೆ, ಇದು ಕೇವಲ ವಿವಾಹದ ಸಲುವಾಗಿ ಧಾರ್ಮಿಕ ಮತಾಂತರವನ್ನು ನಿಷೇಧಿಸುತ್ತದೆ - ಇದು 2017 ರಲ್ಲಿ ಜಾರಿಗೆ ಬಂದ ಉತ್ತರಾಖಂಡ್ ಕಾನೂನಿನಲ್ಲಿ ಮಾತ್ರ ಕಂಡುಬರುತ್ತದೆ.

ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಅಲಹಾಬಾದ್ ಹೈಕೋರ್ಟಿನ ಕೆಲವು ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು, ಮತಾಂತರಗೊಳ್ಳುವ ಮೂಲಕ ಒಂದು ಧರ್ಮದ ಪುರುಷನು ಮತ್ತೊಂದು ಧರ್ಮದ ಮಹಿಳೆಯರೊಂದಿಗೆ ವಿವಾಹದ ಏಕೈಕ ಉದ್ದೇಶಕ್ಕಾಗಿ ಮತಾಂತರಗಳನ್ನು ಮಾಡಲಾಗುತ್ತಿದೆ. ಈ ಮತಾಂತರ ಮದುವೆಗೆ ಮೊದಲು ಅಥವಾ ನಂತರ ಪುರುಷ ಅಥವಾ ಮಹಿಳೆಯರನ್ನು ಮತಾಂತರಗೊಳಿಸುವ ಮೂಲಕ ಮಾಡಲಾಗುತ್ತಿದೆ. ಆದ್ದರಿಂದ ಅಂತಹ ಮತಾಂತರವನ್ನು ತಡೆಯಲು ಮತ್ತು ಅಂತಹ ವಿವಾಹಗಳನ್ನು ಅನೂರ್ಜಿತವೆಂದು ಘೋಷಿಸುವ ಅವಶ್ಯಕತೆಯಿದೆ, ಅಲ್ಲಿ ವಿವಾಹದ ಏಕೈಕ ಉದ್ದೇಶಕ್ಕಾಗಿ ಮತಾಂತರ ಮಾಡಲಾದ ಕುರಿತು ವಿಚಾರಣೆ ನಡೆಸಲು, ಕುಟುಂಬ ನ್ಯಾಯಾಲಯಕ್ಕೆ ಅಧಿಕಾರ ನೀಡಬೇಕು ಮತ್ತು ಅರ್ಜಿಯನ್ನು ನ್ಯಾಯಾಲಯದಲ್ಲಿ ವಿಲೇವಾರಿ ಮಾಡುವ ಸಂಭಂಧ ಎರಡೂ ಕಡೆಗಳವರಿಗೆ ಸೂಕ್ತ ಅವಕಾಶ ನೀಡಬೇಕು ಎಂದು ಕರಡು ಪ್ರಸ್ತಾಪಿಸಿದೆ.

2000 ರಲ್ಲಿ ಸುಪ್ರೀಂ ಕೋರ್ಟ್ ಲಿಲಿ ಥಾಮಸ್ ಪ್ರಕರಣದಲ್ಲಿ, ಐತಿಹಾಸಿಕ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಎರಡನೇ (ಹಿಂದೂ) ಮಹಿಳೆಯನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಳ್ಳಲು ಹೊರಟಿದ್ದ ಹಿಂದೂ ವ್ಯಕ್ತಿಯೊಬ್ಬನ ಹಿಂದೂ ಪತ್ನಿ ಪ್ರಕರಣ ದಾಖಲಿಸಿದ್ದರು. ಆದರೆ ಕೇವಲ ವಿವಾಹಕ್ಕಾಗಿ ಹಿಂದೂ ವೈಯಕ್ತಿಕ ಕಾನೂನಿನ ನಿಷೇಧವನ್ನು ಬದಿಗೊತ್ತಿ ಮುಸ್ಲಿಂ ವೈಯಕ್ತಿಕ ಕಾನೂನಿನ ‘ಪ್ರಯೋಜನಗಳನ್ನು’ ಪಡೆಯಲು ಗಂಡನಿಗೆ ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿತು. ಆದರೆ, ಇತ್ತೀಚೆಗೆ ಅಲಹಾಬಾದ್ ಹೈಕೋರ್ಟಿನ ಮುಂದೆ ನಡೆದ ಪ್ರಕರಣಕ್ಕೆ ಅಂತಹ ಆಯಾಮಗಳಿಲ್ಲ. ಮುಸ್ಲಿಂ ಮಹಿಳೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ಮತ್ತು ದಂಪತಿಗಳು ಹಿಂದೂ ಆಚರಣೆಗಳ ಅಡಿಯಲ್ಲಿ ತಮ್ಮ ಮದುವೆಯನ್ನು ಮಾಡಿಕೊಂಡಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com