ಕರೋನಾ ಸಂಕಷ್ಟ: ಅಂಬಾನಿಗೆ 5 ಶತಕೋಟಿ ಡಾಲರ್‌ ನಷ್ಟ

ಕರೋನಾ ವೈರಸ್‌ ನಿಂದಾಗಿ ಇಂಧನ ಬೇಡಿಕೆಯಲ್ಲಿ ಭಾರೀ ಕುಸಿತವಾಗಿದ್ದು, ತ್ರೈಮಾಸಿಕದ ಲಾಭದಲ್ಲಿ 15% ಕುಸಿತಗೊಂಡು 9,570 ಕೋಟಿ ನಷ್ಟಗೊಂಡಿದೆ ಎಂದು ವರದಿಯಾಗಿದೆ.
ಕರೋನಾ ಸಂಕಷ್ಟ: ಅಂಬಾನಿಗೆ 5 ಶತಕೋಟಿ ಡಾಲರ್‌ ನಷ್ಟ

ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಷೇರು ಮೌಲ್ಯ ಕಳೆದ ಮೂರು ತಿಂಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಕುಸಿಯುತ್ತಿರುವುದರಿಂದ ಅಂಬಾನಿ ಐದು ಶತಕೋಟಿ ಡಾಲರ್‌ ನಷ್ಟಗೊಂಡಿದ್ದಾರೆ.

ಕಂಪನಿಯ ಷೇರುಗಳು ಸೋಮವಾರ ಮಧ್ಯಾಹ್ನ 12: 21 ರ ವೇಳೆಗೆ ಮುಂಬಯಿಯಲ್ಲಿ 6.8% ನಷ್ಟು ಕುಸಿದಿದೆ, ಷೇರು ಮೌಲ್ಯ ಮೇ 12 ರಿಂದ ಹೆಚ್ಚು ಕುಸಿಯುತ್ತಿದ್ದು ಜುಲೈ 20 ಕ್ಕೆ ಕನಿಷ್ಠ ಮಟ್ಟವನ್ನು ತಲುಪಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರೋನಾ ವೈರಸ್‌ ನಿಂದಾಗಿ ಇಂಧನ ಬೇಡಿಕೆಯಲ್ಲಿ ಭಾರೀ ಕುಸಿತವಾಗಿದ್ದು, ತ್ರೈಮಾಸಿಕದ ಲಾಭದಲ್ಲಿ 15% ಕುಸಿತಗೊಂಡು 9,570 ಕೋಟಿ ನಷ್ಟಗೊಂಡಿದೆ ಎಂದು ವರದಿಯಾಗಿದೆ. ಕರೋನಾ ಹಿನ್ನೆಲೆಯಲ್ಲಿ ಜನರು ಹೊರಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾದ್ದರಿಂದ ಸಾರಿಗೆ ಇಂಧನದ ಬೇಡಿಕೆಯು ಕಡಿಮೆಯಾಗಿರುವುದು ರಿಲಾಯನ್ಸಿಗೂ ತಟ್ಟಿದೆ.

ರಿಲಯನ್ಸ್‌ನ ಒಟ್ಟು ಸಂಸ್ಕರಣಾ ಅಂಚು - ಅಥವಾ ಬ್ಯಾರೆಲ್ ಕಚ್ಚಾ ತೈಲವನ್ನು ಇಂಧನಗಳಾಗಿ ಸಂಸ್ಕರಿಸುವ ಲಾಭ – ಈ ವರ್ಷಾರಂಭಕ್ಕೆ ಹೋಲಿಸಿದರೆ ಇತ್ತೀಚಿನ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರೆಲ್‌ಗೆ 9.4 ಡಾಲರಿಂದ 5.7 ಡಾಲರಿಗೆ ಇಳಿದಿದೆ ಎಂದು ಕಂಪನಿಯು ತಿಳಿಸಿದೆ. ಈ ನಡುವೆ ರಿಲಾಯನ್ಸ್‌ ಜಿಯೋದ ಲಾಭವು ಮೂರು ಪಟ್ಟು ಹೆಚ್ಚಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com