ಅಮಿತ್‌ ಶಾ ಎಲ್ಲರಿಗೂ ಹಣ ನೀಡಿದ್ದಾರೆ; ಆಪರೇಷನ್‌ ಕಮಲ ಸತ್ಯ ಬಿಚ್ಚಿಟ್ಟ ಗುಜರಾತ್‌ ಶಾಸಕ

ಸ್ಟಿಂಗ್‌ ಆಪರೇಷನ್ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಕೇತ್ರದ ಜನರನ್ನು ನೀವು ಮಾರಿಕೊಂಡಿದ್ದೀರಿ ಎಂದು ಸೋಮಭಾಯಿ ಅವರಿಗೆ ಜನರು ಛೀಮಾರಿ ಹಾಕುತ್ತಿದ್ದಾರೆ.
ಅಮಿತ್‌ ಶಾ ಎಲ್ಲರಿಗೂ ಹಣ ನೀಡಿದ್ದಾರೆ; ಆಪರೇಷನ್‌ ಕಮಲ ಸತ್ಯ ಬಿಚ್ಚಿಟ್ಟ ಗುಜರಾತ್‌ ಶಾಸಕ

ಆಪರೇಷನ್‌ ಕಮಲದಂತಹ ಅಕ್ರಮ ದಾರಿ ಹಿಡಿದು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರ ಸ್ಥಾಪಿಸಿರುವ ಬಿಜೆಪಿಯವರು, ಈಗ ಗುಜರಾತ್‌ನಲ್ಲಿ ತಮ್ಮದೇ ಸರ್ಕಾರವಿದ್ದರೂ, ಕಾಂಗ್ರೆಸ್‌ ನಾಯಕರಿಗೆ ಗಾಳ ಹಾಕುತ್ತಿದ್ದಾರೆ. ಭಾರಿ ಮೊತ್ತದ ಹಣವನ್ನು ಕಾಂಗ್ರೆಸ್‌ ನಾಯಕರಿಗೆ ನೀಡಿರುವುದು ಒಂದು ಸ್ಟಿಂಗ್‌ ಆಪರೇಷನ್‌ನಿಂದ ಬಯಲಾಗಿದೆ. ಈಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಗುಜರಾತ್‌ ಕಾಂಗ್ರೆಸ್‌ ನಾಯಕರಾದ ಸೋಮಭಾಯ್‌ ಪಟೇಲ್‌ ಅವರು, ತಾವು ಹಣ ಪಡೆದಿರುವುದಾಗಿ ಈ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಓರ್ವ ಅನಾಮಿಕ ವ್ಯಕ್ತಿಯೊಂದಿಗಿನ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್‌ ಮಾಡಲಾಗಿದೆ. ಇದರಲ್ಲಿ ತಾನು ಅಮಿತ್‌ ಶಾ ಅವರಿಂದ 20 ಕೋಟಿ ಪಡೆದಿಲ್ಲ, ಕೇವಲ ಹತ್ತು ಕೋಟಿ ಮಾತ್ರ ಪಡೆದಿದ್ದೇನೆ. ನನ್ನ ಹಾಗೇ ಎಲ್ಲರಿಗೂ ಹಣ ಸಿಕ್ಕಿದೆ. ಕೆಲವರಿಗೆ ಹಣ ನೀಡಿದರೆ, ಇನ್ನು ಕೆಲವರಿಗೆ ಟಿಕೆಟ್‌ ನೀಡುವುದಾಗಿ ಡೀಲ್‌ ಆಗಿದೆ, ಎಂದು ಹೇಳಿರುವುದು ದಾಖಲಾಗಿದೆ.

ಯಾರಾದರೂ ಸುಖಾಸುಮ್ಮನೆ ಏಕೆ ರಾಜಿನಾಮೆ ನೀಡುತ್ತಾರೆ? ನಾಲ್ಕು ಬಾರಿ ಸಂಸದನಾಗಿದ್ದೇನೆ. ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ಒಂದೇ ಕ್ಷೇತರದಿಂದ ನಾಲ್ಕು ಬಾರಿ ಗೆಲ್ಲುವುದು ಸಾಮಾನ್ಯ ವಿಚಾರವಲ್ಲ. ಬಿಜೆಪಿಯವರು ನನಗಾಗಿ ಹಣ ಖರ್ಚು ಮಾಡಿದ್ದಾರೆ. ಅಮಿತ್‌ ಶಾ ಎಲ್ಲರಿಗೂ ಹಣ ಹಂಚಿದ್ದಾರೆ, ಎಂದಿದ್ದಾರೆ.

ಇನ್ನು ಅನಾಮಿಕ ವ್ಯಕ್ತಿಯು, ಇಷ್ಟೊಂದು ಹಣ ಬಿಜೆಪಿಯವರು ಎಲ್ಲಿಂದ ತರುತ್ತಾರೆ ಎಂದು ಕೇಳಿದ್ದಕ್ಕೆ, ಯಾರಿಗೂ ಹೇಳ್ಬೇಡಿ, ರಿಲಾಯನ್ಸ್‌, ಟಾಟಾ ಎಲ್ಲಾ ಬಿಜೆಪಿಯೊಂದಿಗೆ ಇದ್ದಾರೆ. ತುಂಬಾ ಹಣ ಇದೆ ಇವರ ಬಳಿ, ಎಂದು ಸೋಮಭಾಯಿ ಉತ್ತರ ನೀಡಿದ್ದಾರೆ.

ನಿಮಗೆ 20 ಕೋಟಿ ಕೊಟ್ಟಿದ್ದಾರೆಂದು ಹೇಳುತ್ತಿದ್ದಾರೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಸೋಮಭಾಯಿ ಅವರು, ಇದು ಶುದ್ದ ಸುಳ್ಳು. ಯಾರಿಗೂ 10 ಕೋಟಿಗಿಂತ ಹೆಚ್ಚು ನೀಡಿಲ್ಲ, ಎಂದಿದ್ದಾರೆ.

ಇನ್ನು ಬಿಜೆಪಿ ಪರವಾಗಿ ಗುಜರಾತ್‌ ಬಿಜೆಪಿಯ ಅಧ್ಯಕ್ಷರು ಹಾಗೂ ಸಿಎಂ ವಿಜಯ್‌ ರೂಪಾನಿ ಅವರು ನೇರವಾಗಿ ಡೀಲ್‌ ಮಾಡುತ್ತಾರೆ, ಎಂಬ ಮಾಹಿತಿಯನ್ನು ಕೂಡಾ ಬಹಿರಂಗಪಡಿಸಿದ್ದಾರೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಕೇತ್ರದ ಜನರನ್ನು ನೀವು ಮಾರಿಕೊಂಡಿದ್ದೀರಿ ಎಂದು ಸೋಮಭಾಯಿ ಅವರಿಗೆ ಜನರು ಛೀಮಾರಿ ಹಾಕುತ್ತಿದ್ದಾರೆ.

ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿ ವಿ ಅವರು ಕೂಡಾ ಈ ವೀಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಮಿತ್‌ ಶಾ ಅವರ ಹೊಸ ಶಾಪಿಂಗ್‌ನಲ್ಲಿ ಮಾರಲ್ಪಟ್ಟ ಕಾಂಗ್ರೆಸ್‌ ಶಾಸಕ ಸೋಮಭಾಯಿ ಪಟೇಲ್‌ ಅವರು ಗುಟ್ಟು ರಟ್ಟು ಮಾಡಿದ್ದಾರೆ,” ಎಂದು ಬರೆದುಕೊಂಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com