ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!

ರಾಜ್ಯದಲ್ಲಿ ನಡೆಯುವ ಎಲ್ಲಾ ಉತ್ತಮ ಕೆಲಸಗಳಿಗೆ ಮೋದಿಯವರನ್ನು ಹೊಣೆಯಾಗಿಸಿಯೂ, ಎಲ್ಲಾ ನಕರಾತ್ಮಕ ಅಂಶಗಳನ್ನು ರಾಜ್ಯ ಮುಖ್ಯಮಂತ್ರಿಗಳ ತಲೆಗೆ ಹೊರಿಸುವ ಹುನ್ನಾರಕ್ಕೆ ಬಿಹಾರದ ಮತದಾರರೂ ಬಲಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!

ಜುಲೈ 2017 ರಲ್ಲಿ ಬಿಹಾರ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಚುನಾವಣಾ ಪೂರ್ವ ಮಿತ್ರ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳವನ್ನು ತೊರೆದು ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿದರು. ಆಗ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ಘೋಷಿಸಿದ್ದರು. ನೋಟು ಅಪನಗದೀಕರಣದ ವಿಫಲತೆಯ ನಂತರವೂ ಬಿಜೆಪಿಯು ಉತ್ತರ ಪ್ರದೇಶ ದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಬಹುಮತದೊಂದಿಗೆ ಜಯಗಳಿಸಿದ ಬೆನ್ನಲ್ಲೇ ಈ ಘೋಷಣೆ ಮಾಡಿದ್ದರು.

ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!
ಬಿಜೆಪಿಯ ಒಳೇಟಿಗೆ ನಿತೀಶ್ ನಿದ್ರಾಭಂಗ

ಬಿಜೆಪಿಯೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ನಿತೀಶ್ ಅವರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಅಡಿಪಾಯ ಹಾಕಿರುವುದಾಗಿ ಭಾವಿಸಿಕೊಂಡಿದ್ದರು. ಬಿಜೆಪಿಯೊಂದಿಗೆ, ನಿತೀಶ್ ಅವರ ಜನತಾದಳ (ಯುನೈಟೆಡ್) 2010 ರಲ್ಲಿ ಬಿಹಾರದಲ್ಲಿ 243 ಸ್ಥಾನಗಳಲ್ಲಿ 206 ಸ್ಥಾನಗಳನ್ನು ಗೆದ್ದಿತ್ತು. ಈ ಮೈತ್ರಿಯನ್ನು ಅಜೇಯವೆಂದು ರಾಜಕೀಯ ತಜ್ಞರು ಪರಿಗಣಿಸಿದ್ದರು. ಉತ್ತಮ ಆಡಳಿತದ ಮುಖವಾಗಿ ಮತ್ತು ಇತರ ಹಿಂದುಳಿದ ವರ್ಗಗಳ ನಾಯಕನಾಗಿ ಗುರುತಿಸಿಕೊಂಡಿರುವ ನಿತೀಶ್ ಜತೆಗೆ ಬಿಜೆಪಿ ಅದಕ್ಕೆ ಮೇಲ್ಜಾತಿಯ ಮತ ಬ್ಯಾಂಕ್ ಅನ್ನು ಸೇರಿಸಿತ್ತು. ಈ ಜೊತೆಯ ಎದುರಾಳಿಯಾಗಿ ಲಾಲು ಯಾದವ್ ಅವರ ಮುಸ್ಲಿಂ-ಯಾದವರ ಸಾಂಪ್ರದಾಯಿಕ ಮತಬ್ಯಾಂಕ್ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2019 ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಬಿಹಾರದಲ್ಲಿ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆದ್ದಾಗ ಇದೇ ಕಾಂಬಿನೇಷನ್ ವರ್ಕೌಟ್ ಆಗಿತ್ತು. ಆದರೆ ಇಂದು, ನೀವು ಬಿಹಾರಕ್ಕೆ ಹೋದರೆ ಅಲ್ಲಿನ ಜನತೆ ನಿತೀಶ್ ಕುಮಾರ್ ಸೋಲಬೇಕೆಂದು ಬಯಸುತ್ತಾರೆ, ಮತ್ತು ಅವರು ‘ಮೋದಿ! ಮೋದಿ! ಎಂಬ ಘೋಷಣೆಯೂ ಕೇಳಿ ಬರುತ್ತಿಲ್ಲ. ಅದರೆ ಮೋದಿಯ ಬಗ್ಗೆ ಜನರನ್ನು ಕೇಳಿದಾಗ ಅವರು ಅವರನ್ನು ಹೊಗಳುತ್ತಾರೆ. ನಿತೀಶ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶೌಚಾಲಯ ಮತ್ತು ಗ್ಯಾಸ್ ಸಿಲಿಂಡರ್ಗಳಿಂದ ಹಿಡಿದು ರಾಮ್ ಮಂದಿರ ಮತ್ತು ಕಾಶ್ಮೀರದವರೆಗೆ ಮೋದಿ ಚೆನ್ನಾಗಿದ್ದಾರೆ.

ರಾಜ್ಯದಲ್ಲಿ ನಡೆಯುವ ಎಲ್ಲಾ ಉತ್ತಮ ಕೆಲಸಗಳಿಗೆ ಮೋದಿಯವರನ್ನು ಹೊಣೆಯಾಗಿಸಿಯೂ, ಎಲ್ಲಾ ನಕರಾತ್ಮಕ ಅಂಶಗಳನ್ನು ರಾಜ್ಯ ಮುಖ್ಯಮಂತ್ರಿಗಳ ತಲೆಗೆ ಹೊರಿಸುವ ಹುನ್ನಾರಕ್ಕೆ ಬಿಹಾರದ ಮತದಾರರೂ ಬಲಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಅಲ್ಲದೆ, ಬಿಹಾರ ಪ್ರತಿಪಕ್ಷಗಳು ಮೋದಿಯ ವಿರುದ್ಧ ಮಾತನಾಡುವುದಿಲ್ಲ. ಈಗಾಗಲೇ ಜನಪ್ರಿಯಗೊಂಡಿರುವ ಮೋದಿಯ ವಿರುದ್ಧ ಮಾತನಾಡಿ ನಕರಾತ್ಮಕತೆಯನ್ನು ಎಳೆದುಕೊಳ್ಳಲು ಅವು ತಯಾರಿಲ್ಲ.

ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!
ಬಿಹಾರ ಚುನಾವಣೆ: ರಾಮಮಂದಿರ, ಸೀತಾಮಾತೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ

ಆಡಳಿತ ಪಕ್ಷದ ವಿರುದ್ದ ಜನರ ಕೋಪದ ಬಹುದೊಡ್ಡ ಕಾರಣವೆಂದರೆ ಬಿಹಾರದಲ್ಲಿ ಈ ಬಾರಿಯ ಕೋವಿಡ್ 19 ಲಾಕ್ ಡೌನ್ ಆಗಿದೆ. 2019 ರಲ್ಲಿಯೂ ನಿರುದ್ಯೋಗ ಸಾಕಷ್ಟು ಹೆಚ್ಚಿತ್ತು. ಆದರೆ ಲಾಕ್ಡೌನ್-ಪ್ರೇರಿತ ನಿರುದ್ಯೋಗವು ಜನರನ್ನು ಆಕ್ರೋಶಿತರನ್ನಾಗಿ ಮಾಡಿದೆ. ಕಡು ಬಡವರಿಗೆ ನೀಡಲಾಗುವ , ಉಚಿತ ಪಡಿತರ ಮತ್ತು ಲಾಕ್ ಡೌನ್ ಸಮಯದಲ್ಲಿ ನೀಡಲಾದ 500 ರೂ. ಪರಿಹಾರ ಸಾಕೆ ಎಂದು ಪ್ರಶ್ನಿಸುವ ಮಂದಿ ನಿತೀಶ್ ಕುಮಾರ್ ಹೋಗಬೇಕೆಂದು ಬಯಸುತ್ತಾರೆ. ಅದರೆ ಮೋದಿ ವಿರುದ್ದ ಮಾತಾಡುವುದಿಲ್ಲ.

ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!
ಬಿಹಾರ ಚುನಾವಣಾ ಕಣದಲ್ಲಿ ‌ʼರಾವಣʼನ ಪ್ರವೇಶ: ದಲಿತ ರಾಜಕಾರಣದಲ್ಲಿ ಸಂಚಲನ

ಲಾಕ್ ಡೌನ್ ಸಮಯದಲ್ಲಿ ಮೋದಿ ಸರ್ಕಾರವು ಬಡವರ ಬ್ಯಾಂಕ್ ಖಾತೆಗಳಿಗೆ 500 ರೂಪಾಯಿ ವರ್ಗಾವಣೆ ಮಾಡಿದ್ದು ಜನರಿಗೆ ತಲುಪಿದೆ. ಆದರೆ ಲಾಕ್ಡೌನ್ ಅನ್ನು ವಿಧಿಸಿದ್ದು ಮೋದಿ ಸರ್ಕಾರ ಮತ್ತು ಇದು 2016 ರಿಂದ ಭಾರತದ ಆರ್ಥಿಕತೆಯನ್ನು ಕುಸಿತಕ್ಕೆ ತಳ್ಳಿದ್ದು ಮೋದಿ ಸರ್ಕಾರದ ತಪ್ಪು ಆರ್ಥಿಕ ನೀತಿಗಳು. ಆದರೂ, ನಿತೀಶ್ ಕುಮಾರ್ ಅವರು ಜನರ ಕೋಪವನ್ನು ಎದುರಿಸುತ್ತಿದ್ದಾರೆ. ಲಾಕ್ಡೌನ್ ಒಳ್ಳೆಯದು ಎಂದು ಹೇಳುವ ಅದೇ ಜನರು ಕೋವಿಡ್ -19 ರಿಂದ ಜನರ ಜೀವಗಳು ಉಳಿಯಿತು ಎನ್ನುತ್ತಾರೆ. ಆದರೆ ಲಾಕ್ಡೌನ್ ಸಮಯದಲ್ಲಿ ಜನರ ಕಷ್ಟಗಳನ್ನು ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಬಿಹಾರಿ ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ಹಿಂತಿರುಗಲು ಸಾಧ್ಯವಿಲ್ಲ ಎಂದು ಹೇಳಿದ ನಿತೀಶ್ ಕುಮಾರ್ ಅವರು ಸಂಪೂರ್ಣವಾಗಿ ಸಂವೇದನಾಶೀಲರಾಗಿದ್ದಾರೆ ಎಂದು ದೂಷಿಸಬಹುದು, ಆದರೆ ಎಲ್ಲಾ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದವರು ನರೇಂದ್ರ ಮೋದಿಯವರಲ್ಲವೇ? ಆದರೂ, ಮೋದಿ ವಿರುದ್ದ ಯಾರೂ ಟೀಕಿಸುತ್ತಿಲ್ಲ.. ತೇಜಶ್ವಿ ಯಾದವ್ ನೇತೃತ್ವದ ಪ್ರತಿಪಕ್ಷ ಮೈತ್ರಿ ಕೂಡ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡಿದೆ ಹೊರತು ನರೇಂದ್ರ ಮೋದಿಯವರನ್ನಲ್ಲ, ಜನಪ್ರಿಯ ಮೋದಿಯವರ ವಿರುದ್ಧ ನಕಾರಾತ್ಮಕ ಅಭಿಯಾನವು ಅವರ ಮತಗಳಿಕೆಗೆ ಅಡ್ಡಿ ಆಗಬಹುದೆಂದು ಅವರು ಭಾವಿಸಿದ್ದಾರೆ.

ಈಗ ಪ್ರತಿ ರಾಜ್ಯದಲ್ಲೂ. ಆಗುವ ಎಲ್ಲ ಒಳ್ಳೆಯ ಕೆಲಸಗಳೂ ಮೋದಿಯಿಂದಲೇ, ಮತ್ತು ಏನಾದರೂ ತಪ್ಪಾದರೆ ಅದನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸುವ ಪದ್ದತಿ ಆರಂಭಗೊಂಡಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಕೂಡ ಇದಕ್ಕೆ ಹೊರತಲ್ಲ. ಮುಜಫರ್ ಪುರ್ ನಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳು ನಿತೀಶ್ ಕುಮಾರ್ ಅವರ ಬೆನ್ನು ಬಿದ್ದವು. ಆದರೆ ವಾಹಿನಿಗಳು ಎಂದಿಗೂ ಮೋದಿಯವರನ್ನು ನಿರುದ್ಯೋಗದ ಬಗ್ಗೆ ಪ್ರಶ್ನಿಸುವುದಿಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಹೆಚ್ಚಿಸದೆ ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ನರೇಂದ್ರ ಮೋದಿಯವರ ನೀತಿಯಾಗಿತ್ತು. ಇದು ಕೃಷಿ ತೊಂದರೆಗೆ ಕಾರಣವಾಯಿತು, ಇದರ ಪರಿಣಾಮವಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್ ಘಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲು ಉಂಟಾಯಿತು, ಅಲ್ಲಿ ಕೃಷಿ ಸಾಲ ಮನ್ನಾ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಗೆದ್ದಿತು. ಮೋದಿ ರೈತರಿಗೆ ವರ್ಷಕ್ಕೆ 6,000 ರೂ ಖಾತೆಗೆ ಹಾಕುವ ಮೂಲಕ ಜನಪ್ರಿಯರಾಗಿದ್ದಾರೆ.

ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!
ಬಿಹಾರ ಚುನಾವಣಾ ದಿಕ್ಕುದೆಸೆ ನಿರ್ಧರಿಸುತ್ತಿರುವ ಇಬ್ಬರು ಯುವ ನಾಯಕರು!

ನಿತೀಶ್ ಕುಮಾರ್ ಅವರು ಮೋದಿಯ ಎದುರು ಶರಣಾಗತರಾಗದಿದ್ದರೆ ಎಲ್ಲ ಜನರ ಕಷ್ಟಗಳನ್ನು ಮೋದಿ ವಿರುದ್ದ ಸುಲಭವಾಗಿ ಹೊರಿಸಬಹುದಿತ್ತು. ದೆಹಲಿಯ ವಿರುದ್ಧ ಹೋರಾಡುವ ಬಿಹಾರಿ ಜನರ ಚಾಂಪಿಯನ್ ಎಂದು ಸ್ವತಃ ತೋರಿಸಿಕೊಳ್ಳಬಹುದಿತ್ತು. 2015 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನೀತೀಶ್ ಅವರು ಮಾಡಿದ್ದು ಅದನ್ನೇ. ಲಾಲು ಯಾದವ್ ಅವರ ಮತ ಬ್ಯಾಂಕ್ ಜೊತೆಗೆ, ಅವರು ಹಣದುಬ್ಬರ ನಿರುದ್ಯೋಗ ಸಮಸ್ಯೆಗಳಿಗೆ ಸುಲಭವಾಗಿ ಮೋದಿ ಅವರನ್ನು ಕಾರಣರನ್ನಾಗಿಸಬಹುದಿತ್ತು. ಆದರೆ ಬದಲಾಗಿ, ಅವರು ಮೋದಿಯ ನಾಯಕತ್ವವನ್ನು ಅಂಗೀಕರಿಸಲು, ಮೋದಿಯವರ ಹೆಸರಿನಲ್ಲಿ ಮತಗಳನ್ನು ಪಡೆಯಲು ಹೊರಟಿದ್ದಾರೆ. ನವೆಂಬರ್ 10 ರ ನಂತರ ಬಿಹಾರಕ್ಕೆ ಎನ್ಡಿಎ ಸರ್ಕಾರ ದೊರೆತರೂ, ನಿತೀಶ್ ಕುಮಾರ್ ಈ ಚುನಾವಣೆಯಲ್ಲಿ ಅತಿ ಹೆಚ್ಚು ಸೋಲು ಉಣ್ಣುವುದು ಖಚಿತ. ಇದು ಅವರ ಪಕ್ಷ ಗಳಿಸುವ ಸ್ಥಾನಗಳಿಂದ ಗೊತ್ತಾಗುತ್ತದೆ. ಅವರು ಜುಲೈ 2017 ಕ್ಕೆ ಹಿಂತಿರುಗಿ ನೋಡಿದಾಗ ತಾವು ಈಗ ಮಾಡಿಕೊಂಡಿರುವುದು ರಾಜಕೀಯ ಆತ್ಮಹತ್ಯೆ ಎಂದು ಅರಿವಾಗುತ್ತದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com