ಉಚಿತ ಕೋವಿಡ್ ಲಸಿಕೆ ಭರವಸೆ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಚುನಾವಣಾ ಆಯೋಗ

ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರ ದೂರಿಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಈ ಪ್ರಣಾಳಿಕೆಯಲ್ಲಿ ಚುನಾವಣೆ ಸಂಹಿತೆಯ ನಿಬಂಧನೆಗಳ ಉಲ್ಲಂಘನೆ ಕಂಡುಬಂದಿಲ್ಲ ಎಂದು ತಿಳಿಸಿದೆ.
ಉಚಿತ ಕೋವಿಡ್ ಲಸಿಕೆ ಭರವಸೆ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಚುನಾವಣಾ ಆಯೋಗ

ಬಿಹಾರ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕರೋನಾ ವೈರಸ್ ಲಸಿಕೆ ನೀಡುವುದಾಗಿ ಬಿಜೆಪಿ ನೀಡಿದ ಭರವಸೆ ಚುನಾವಣೆ ಮಾದರಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರ ದೂರಿಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಈ ಪ್ರಣಾಳಿಕೆಯಲ್ಲಿ ಚುನಾವಣೆ ಸಂಹಿತೆಯ ನಿಬಂಧನೆಗಳ ಉಲ್ಲಂಘನೆ ಕಂಡುಬಂದಿಲ್ಲ ಎಂದು ತಿಳಿಸಿದೆ.

ಉಚಿತ ಕೋವಿಡ್ ಲಸಿಕೆ ಭರವಸೆ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಚುನಾವಣಾ ಆಯೋಗ
ಬಿಹಾರ ಚುನಾವಣೆ; ಬಿಜೆಪಿ ಪ್ರಣಾಳಿಕೆಗೆ ಕಾಂಗ್ರೆಸ್‌ ಮುಖಂಡರ ಟೀಕೆ

ಈ ಭರವಸೆಯ ಮುಖಾಂತರ ರಾಜ್ಯಗಳ ನಡುವೆ ತಾರತಮ್ಯ ಎಸಗಿದೆ ಹಾಗೂ ಚುನಾವಣಾ ಸಮಯದಲ್ಲಿ ಕೇಂದ್ರ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಸಾಕೇತ್ ಗೋಖಲೆ ಹೇಳಿಕೊಂಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉಚಿತ ಲಸಿಕೆ ಭರವಸೆಯು ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ತೀರ್ಮಾನಿಸಲು ಮಾದರಿ ನೀತಿ ಸಂಹಿತೆಯ ಭಾಗ VIII ರಲ್ಲಿರುವ ಕೆಲವು ಮಾರ್ಗಸೂಚಿಗಳನ್ನು ಚುನಾವಣಾ ಆಯೋಗವು ಉಲ್ಲೇಖಿಸಿದೆ ಎಂದು ಮೂಲಗಳು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿವೆ.

"ಸಂವಿಧಾನದಲ್ಲಿ ಪ್ರತಿಪಾದಿಸಿರುವ ರಾಜ್ಯ ನೀತಿಯ ನಿರ್ದೇಶನ ತತ್ವಗಳು ನಾಗರಿಕರಿಗಾಗಿ ವಿವಿಧ ಕಲ್ಯಾಣ ಕ್ರಮಗಳನ್ನು ರೂಪಿಸುವಂತೆ ರಾಜ್ಯಕ್ಕೆ ಆದೇಶಿಸುತ್ತವೆ. ಆದ್ದರಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಅಂತಹ ಕಲ್ಯಾಣದ ಭರವಸೆಗೆ ಯಾವುದೇ ಆಕ್ಷೇಪಣೆಗಳಿಲ್ಲ" ಎಂದು ಚುನಾವಣಾ ಆಯೋಗ ಉಲ್ಲೇಖಿಸಿದ ನಿಬಂಧನೆಗಳಲ್ಲಿ ಒಂದಾಗಿದೆ ಹೇಳಿದೆ.

ಉಚಿತ ಕೋವಿಡ್ ಲಸಿಕೆ ಭರವಸೆ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಚುನಾವಣಾ ಆಯೋಗ
ಟೀಕೆಗೆ ಗುರಿಯಾದ ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ; ತೇಪೆ ಹಚ್ಚಲು ಮುಂದಾದ ಕೇಂದ್ರ ಸಚಿವ

ಈ ಭರವಸೆಯನ್ನು ಈಡೇರಿಸಲು ಸಾಧ್ಯವಾದರೆ ಮಾತ್ರ ಮತದಾರರ ನಂಬಿಕೆಯನ್ನು ಪಡೆಯಬೇಕು ಎಂದು ಚುನಾವಣಾ ಆಯೋಗ ಉಲ್ಲೇಖಿಸಿರುವ ಇತರ ನಿಬಂಧನೆ ತಿಳಿಸಿದೆ.

"ಚುನಾವಣಾ ವಾತಾವರಣ ಹದಗೆಟ್ಟಾಗ ಕೇಂದ್ರ ಸರ್ಕಾರವು ನಿರ್ದಿಷ್ಟ ರಾಜ್ಯಕ್ಕಾಗಿ ಕರೋನಾ ಲಸಿಕೆಯನ್ನು ಘೋಷಿಸಿರುವುದನ್ನು ಎಂದು ಚುನಾವಣಾ ಆಯೋಗ ನಿರ್ಲಕ್ಷಿಸಿದೆ" ಎಂದು ಸಾಕೇತ್ ಗೋಖಲೆ ಶುಕ್ರವಾರ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಐಸಿಎಂಆರ್ ಬಿಡುಗಡಗೊಳಿಸಿದ ನಂತರ ಬಿಹಾರದ ಜನತೆಗೆ ಉಚಿತ ಕೋವಿಡ್ -19 ಲಸಿಕೆ ನೀಡುವ ಭರವಸೆ ನೀಡಿದ್ದರು.

ಉಚಿತ ಕೋವಿಡ್ ಲಸಿಕೆ ಭರವಸೆ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಚುನಾವಣಾ ಆಯೋಗ
ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!

ವಿರೋಧ ಪಕ್ಷಗಳು ಬಿಜೆಪಿಗೆ ತನ್ನ ಬಿಹಾರ ಮತದಾನ ಪ್ರಣಾಳಿಕೆಯಲ್ಲಿ ಉಚಿತ ಕೋವಿಡ್ -19 ಲಸಿಕೆಗಳನ್ನು ನೀಡುವುದಾಗಿ ಭರವಸೆ ನೀಡಿರುವದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗದಕ್ಕೆ ಒತ್ತಾಯಿಸಿತ್ತು, ಆಡಳಿತ ಪಕ್ಷವು ಸಾಂಕ್ರಾಮಿಕ ರೋಗವನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದರು.

ಆರ್‌ಜೆಡಿ, ಕಾಂಗ್ರೆಸ್, ಶಿವಸೇನೆ, ಸಮಾಜವಾದಿ ಪಕ್ಷ ಮತ್ತು ಎನ್‌ಸಿಪಿ ಬಿಹಾರಕ್ಕೆ ಉಚಿತ ಲಸಿಕೆ ನೀಡುವ ಬಿಜೆಪಿಯ ಮತದಾನದ ಭರವಸೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದು, ಬಿಜೆಪಿ ಸಾಂಕ್ರಾಮಿಕ ರೋಗವನ್ನು ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com