ಮದುವೆ ಉದ್ದೇಶಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್

ಮದುವೆಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಮಹಿಳೆಯ ಅರ್ಜಿಯನ್ನು ಆಲಿಸಿದ ಹೈಕೋರ್ಟ್‌ ಕೇವಲ ಮದುವೆ ಉದ್ದೇಶಕ್ಕಾಗಿ ಮತಾಂತರವಾಗುವುದು ಸ್ವೀಕಾರ್ಹವಲ್ಲ ಎಂದಿದೆ.
ಮದುವೆ ಉದ್ದೇಶಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್

ಕೇವಲ ವಿವಾಹದ ಉದ್ದೇಶಕ್ಕಾಗಿ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ. ಹಿಂದಿನ ಆದೇಶವನ್ನು ಉಲ್ಲೇಖಿಸಿದ ಅಲಹಾಬಾದ್ ಹೈಕೋರ್ಟ್ ದಂಪತಿಗಳು ಸಲ್ಲಿಸಿದ ಅರ್ಜಿಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ. ಅರ್ಜಿಯನ್ನು ಸಲ್ಲಿಸಿದ ಮಹಿಳೆ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದು, ಹಿಂದೂ ಪುರುಷನೊಂದಿಗೆ ಮದುವೆಯಾಗಲು ಮದುವೆಗೂ ಒಂದು ತಿಂಗಳ ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತಮ್ಮ ಸಂಬಂಧಿಕರು 'ದಬ್ಬಾಳಿಕೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ' ಎಂದು ನ್ಯಾಯಾಲಯದಿಂದ ನಿರ್ದೇಶನ ಕೋರಿದ ದಂಪತಿಗಳ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರ ಏಕ ನ್ಯಾಯಾಧೀಶರ ಪೀಠವು ವಜಾಗೊಳಿಸಿದೆ.

ನ್ಯಾಯಮೂರ್ತಿ ತ್ರಿಪಾಠಿ ಅವರ ಆದೇಶದಲ್ಲಿ, ಮಹಿಳೆ ಹುಟ್ಟಿನಿಂದಲೇ ಮುಸ್ಲಿಂ ಮತ್ತು ಈ ವರ್ಷದ ಜೂನ್‌ನಲ್ಲಿ ಅಂದರೆ ಮದುವೆಗೆ ಸರಿಯಾಗಿ ಒಂದು ತಿಂಗಳು ಮತ್ತು ಎರಡು ದಿನಗಳ ಮೊದಲು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಹೇಳಿದೆ.

"ನ್ಯಾಯಾಲಯವು ದಾಖಲೆಯನ್ನು ಪರಿಶೀಲಿಸಿದೆ ಮತ್ತು ಅರ್ಜಿದಾರಳು 29.6.2020 ರಂದು ತನ್ನ ಮತಾಂತರಗೊಂಡಿದ್ದಾರೆ. ಅದಾಗಿ ತಿಂಗಳ ನಂತರ, ಅಂದರೆ, 31.7.2020 ರಂದು ಮದುವೆಯಾಗಿದ್ದಾರೆ. ದು ಈ ಮತಾಂತರ ವಿವಾಹದ ಉದ್ದೇಶಕ್ಕಾಗಿ ಮಾತ್ರ ನಡೆಯಿತು ಎಂಬುವುದು ಇದು ನ್ಯಾಯಾಲಯಕ್ಕೆ ಸ್ಪಷ್ಟವಾಗಿ ತಿಳಿಸುತ್ತದೆ " ಎಂದು ಆದೇಶ ಹೇಳುತ್ತದೆ.

ನ್ಯಾಯಾಧೀಶರು ತಮ್ಮ ಆದೇಶದಲ್ಲಿ, 'ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರವನ್ನು ಸ್ವೀಕಾರಾರ್ಹವಲ್ಲ, ಎಂಬ ಅದೇ ನ್ಯಾಯಾಲಯದ 2014 ರ ಆದೇಶವನ್ನು ಉಲ್ಲೇಖಿಸಿದ್ದಾರೆ.

ನೂರ್ ಜಹಾನ್ ಬೇಗಂ ಅಲಿಯಾಸ್ ಅಂಜಲಿ ಮಿಶ್ರಾ ಪ್ರಕರಣದಲ್ಲಿ, ʼಕೇವಲ ಮದುವೆಯ ಉದ್ದೇಶಕ್ಕಾಗಿ ಧರ್ಮವನ್ನು ಇಸ್ಲಾಂಗೆ ಪರಿವರ್ತಿಸುವುದನ್ನು ಮಾನ್ಯ ಮಾಡಲಾಗುವುದಿಲ್ಲ. ಈ ವಿವಾಹಗಳು (ನಿಕಾ) ಪವಿತ್ರ ಕುರ್‌ಆನ್‌ನ ಸೂರಾ II ಅಯತ್ 221 ರಲ್ಲಿನ ಆದೇಶಕ್ಕೆ ವಿರುದ್ಧವಾಗಿದೆ " ಎಂದು 2014 ರ ತೀರ್ಪು ಹೇಳಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com