ಮಂಗಳೂರು ವಿಮಾನ ನಿಲ್ದಾಣ ಅಧಿಕೃತವಾಗಿ ಅದಾನಿ ತೆಕ್ಕೆಗೆ

ಇದುವರೆಗೂ ಎಎಐ ಅಡಿಯಲ್ಲಿ ನಿರ್ವಹಿಸುತ್ತಿದ್ದ ಸರ್ಕಾರಿ ವಿಮಾನ ನಿಲ್ದಾಣವಾದ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ಶನಿವಾರ ಸುಪರ್ದಿಗೆ ತೆಗೆದುಕೊಂಡಿದೆ
ಮಂಗಳೂರು ವಿಮಾನ ನಿಲ್ದಾಣ ಅಧಿಕೃತವಾಗಿ ಅದಾನಿ ತೆಕ್ಕೆಗೆ

ಇದುವರೆಗೂ ಎಎಐ ಅಡಿಯಲ್ಲಿ ನಿರ್ವಹಿಸುತ್ತಿದ್ದ ಸರ್ಕಾರಿ ವಿಮಾನ ನಿಲ್ದಾಣವಾದ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ಶನಿವಾರ (ಅಕ್ಟೋಬರ್ 31) ಸುಪರ್ದಿಗೆ ತೆಗೆದುಕೊಂಡು ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ವಿಮಾನ ನಿಲ್ದಾಣ ಖಾಸಗೀಕರಣದ ಮೊದಲ ಹಂತದ ಹರಾಜು ಪ್ರಕ್ರಿಯೆಯ ನಂತರ ಅದಾನಿ ಸಮೂಹ ಆರು ಸರ್ಕಾರಿ ವಿಮಾನ ನಿಲ್ದಾಣಗಳನ್ನು ಹರಾಜಿನಲ್ಲಿ ಗೆದ್ದುಕೊಂಡಿತ್ತು. ಅದರಲ್ಲಿ ಮಂಗಳೂರು ವಿಮಾನ ನಿಲ್ದಾಣ ಕೂಡ ಒಂದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದಾನಿ ಗ್ರೂಪ್ ನವೆಂಬರ್ 2 ರಂದು ಲಕ್ನೋ ವಿಮಾನ ನಿಲ್ದಾಣ ಮತ್ತು ನವೆಂಬರ್ 7 ರಂದು ಅಹಮದಾಬಾದ್ ವಿಮಾನ ನಿಲ್ದಾಣವನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಎಎಐ ತನ್ನ ಆರು ವಿಮಾನ ನಿಲ್ದಾಣಗಳನ್ನು 2019 ರಲ್ಲಿ ಹರಾಜಿಗೆ ಹಾಕಿತ್ತು. ಅದಾನಿ ಗ್ರೂಪ್ ಎಲ್ಲಾ ಆರು ವಿಮಾನ ನಿಲ್ದಾಣಗಳಿಗೆ ಅತಿ ಹೆಚ್ಚು ಬಿಡ್‌ ಕೂಗಿತ್ತು. ಜೈಪುರ, ತಿರುವನಂತಪುರ ಮತ್ತು ಗುವಾಹಟಿಯ ಹರಾಜು ಮೊತ್ತಕ್ಕೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ.

ಫೆಬ್ರವರಿ 2019 ಕ್ಕೆ ಮುಕ್ತಾಯವಾದ ಎರಡು ಹಂತದ ಟೆಂಡರ್ ಪ್ರಕ್ರಿಯೆಯಡಿಯಲ್ಲಿ, ಅದಾನಿ ಗ್ರೂಪ್ ಭಾರತೀಯ ವಾಯುಯಾನದಲ್ಲಿ ಅಧಿಕೃತ ಪ್ರವೇಶ ನೀಡಿತು ಮತ್ತು ಎಲ್ಲಾ ಆರು ವಿಮಾನ ನಿಲ್ದಾಣಗಳಿಗೆ ಅತಿ ಹೆಚ್ಚು ಬಿಡ್ದಾರರಾಗಿ ಹೊರಹೊಮ್ಮಿತು.

ನವೆಂಬರ್ 2018 ರಲ್ಲಿ ಕೇಂದ್ರ ಸಚಿವ ಸಂಪುಟವು ಆರು ವಿಮಾನ ನಿಲ್ದಾಣಗಳನ್ನು ಅವುಗಳ ದಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಖಾಸಗೀಕರಣಗೊಳಿಸಲು ನಿರ್ಧರಿಸಿತು. ವಿಮಾನ ನಿಲ್ದಾಣಗಳಿಗೆ 50 ವರ್ಷಗಳ ಗುತ್ತಿಗೆ ಅವಧಿಯನ್ನು ನೀಡಲಾಗುವುದು. ಹೆಚ್ಚಿನ ಭಾಗವಹಿಸುವಿಕೆಯನ್ನು ಆಹ್ವಾನಿಸಲು, ವಿಮಾನ ನಿಲ್ದಾಣದ ನಿರ್ವಹಣೆಯಲ್ಲಿ ಅನುಭವದ ಹೊಂದಿರಬೇಕೆಂಬ ಕಡ್ಡಾಯ ಮಾನದಂಡಗಳಲ್ಲಿ ಇರಲಿಲ್ಲ.

ಗುಜರಾತ್‌ ಮೂಲದ ಅದಾನಿ ಗ್ರೂಪ್‌ ಭಾರತೀಯ ವಿಮಾನ ನಿಲ್ದಾಣದ ನಿರ್ವಹಣೆಯ ಯೋಜನೆ ಪಡೆಯುತ್ತಿದ್ದಂತೆಯೆ, ಪ್ರತಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆಯನ್ನು ಟೀಕಿಸಿದ್ದರು. ದೇಶದ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ನರೇಂದ್ರ ಮೋದಿ ತನ್ನ ಉದ್ಯಮಿ ಗೆಳೆಯರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com