ಭ್ರಷ್ಟಾಚಾರ ಪ್ರಕರಣ: CBI ತನಿಖೆ ವಿರುದ್ದ ಸುಪ್ರಿಂ ಮೆಟ್ಟಿಲೇರಿದ ಉತ್ತರಾಖಂಡ್ ಸಿಎಂ

2016ರ ಭ್ರಷ್ಟಾಚಾರ ದ ಆರೋಪದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ಉತ್ತರಾಖಂಡ್‌ ಹೈಕೋರ್ಟ್‌ ಆದೇಶದ ವಿರುದ್ದ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಸುಪ್ರಿಂ ಮೊರೆ ಹೋಗಿದ್ದಾರೆ
ಭ್ರಷ್ಟಾಚಾರ  ಪ್ರಕರಣ: CBI ತನಿಖೆ ವಿರುದ್ದ ಸುಪ್ರಿಂ ಮೆಟ್ಟಿಲೇರಿದ ಉತ್ತರಾಖಂಡ್ ಸಿಎಂ

2016ರ ಭ್ರಷ್ಟಾಚಾರ ದ ಆರೋಪದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ಉತ್ತರಾಖಂಡ್‌ ಹೈಕೋರ್ಟ್‌ ಆದೇಶದ ವಿರುದ್ದ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಸುಪ್ರಿಂ ಮೊರೆ ಹೋಗಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿಎಂ ಸ್ಥಾನಕ್ಕೇರಿದ್ದ ರಾವತ್‌ ಅವರು ನೋಟು ನಿಷೇಧದ ಸಂದರ್ಭದಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉತ್ತರಾಖಂಡ್‌ನ ಸ್ಥಳೀಯ ಸುದ್ದಿವಾಹಿನಿ ಮಾಲಕ ಉಮೇಶ್‌ ಕುಮಾರ್‌ ಶರ್ಮಾ ಅವರು ಈ ಆರೋಪವನ್ನು ಹೊರಿಸಿದ್ದರು. ನೋಟು ನಿಷೇಧದ ಸಂದರ್ಭದಲ್ಲಿ ಜಾರ್ಖಂಡ್‌ನ ಗೋ ಸೇವಾ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಲು ಒಬ್ಬ ವ್ಯಕ್ತಿ ಸಿಎಂ ರಾವತ್‌ ಅವರ ಸಂಬಂಧಿಯೊಬ್ಬರಿಗೆ ರೂ. 25 ಲಕ್ಷಗಳ ಮೊತ್ತವನ್ನು ವರ್ಗಾಯಿಸಿದ್ದರು. ಆ ಸಂದರ್ಭದಲ್ಲಿ ಸಿಎಂ ರಾವತ್‌ ಅವರು ಜಾರ್ಖಂಡ್‌ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು, ಎಂದು ಉಮೇಶ್‌ ಅವರು ಆರೋಪಿಸಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಉತ್ತರಾಖಂಡ್‌ ಹೈಕೋರ್ಟ್‌, ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಸಿಬಿಐಗೆ ಎಫ್‌ಐಆರ್‌ ದಾಖಲಿಸಲು ನಿರ್ದೇಶನ ನೀಡಿತ್ತು. ಈಗ ಸಿಎಂ ರಾವತ್‌ ಅವರು ಹೈಕೋರ್ಟ್‌ನ ನಿರ್ದೇಶನದ ವಿರುದ್ದ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದು, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬಾರದು ಎಂದು ಕೋರಿಕೊಂಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com