ಸಮಾಜವಾದಿ ಪಕ್ಷವನ್ನು ಸೋಲಿಸಲು ಬಿಜೆಪಿಗಾದರೂ ಮತ ಚಲಾಯಿಸುತ್ತೇವೆ- ಮಾಯಾವತಿ

ಸಮಾಜವಾದಿ ಪಕ್ಷವನ್ನು ಸೋಲಿಸಲು ನಾವು ಬಿಜೆಪಿಗಾದರೂ ಮತ ಚಲಾಯಿಸುತ್ತೇವೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿಕೆ ನೀಡಿರುವುದು ಬಿಜೆಪಿಯೇತರ ರಾಜಕೀಯ ಮುಖಂಡರ ತೀವ್ರ ವಿರೋಧಕ್ಕೆ ಒಳಗಾಗಿದೆ.
ಸಮಾಜವಾದಿ ಪಕ್ಷವನ್ನು ಸೋಲಿಸಲು ಬಿಜೆಪಿಗಾದರೂ ಮತ ಚಲಾಯಿಸುತ್ತೇವೆ- ಮಾಯಾವತಿ

ಬಿಹಾರದಲ್ಲಿ ಚುನಾವಣಾ ಕಣ ರಂಗೇರುತ್ತಿರುವ ನಡುವೆ ಉತ್ತರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಕಾವೇರಿದೆ. ತನ್ನ ಮಾಜಿ ಮಿತ್ರ ಪಕ್ಷದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿರುವ ಮಾಯಾವತಿ ಸಮಾಜವಾದಿಯನ್ನು ಸೋಲಿಸಲು ಬಿಜೆಪಿಗಾದರೂ ಮತ ಹಾಕುತ್ತೇವೆ ಎಂದಿದ್ದಾರೆ.

ಸಮಾಜವಾದಿ ಪಕ್ಷ ದಲಿತ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. 1995 ರಲ್ಲಿ ನನ್ನನ್ನು ಕೊಲ್ಲು ಯತ್ನ ನಡೆಯಿತು, ದುರ್ಬಲ ವರ್ಗದವರ ಪ್ರಾರ್ಥನೆಯಿಂದ ನಾನು ಬದುಕುಳಿದುಕೊಂಡೆ, ಬಳಿಕ ತಮ್ಮ ಸರ್ಕಾರವನ್ನು ಉಳಿಸಲು ಬಿಎಸ್‌ಪಿಯ ಶಾಸಕರನ್ನು ಅಪಹರಣಗೊಳಿಸಿದರು. ಇದೀಗ ಮತ್ತೊಮ್ಮೆ ಸಮಾಜವಾದಿ ಪಕ್ಷದ ದಲಿತ ವಿರೋಧಿ ಮುಖ ಅನಾವರಣಗೊಂಡಿದೆ ಎಂದಿದ್ದಾರೆ.

ಸಮಾಜವಾದಿ ಪಕ್ಷವನ್ನು ಸೋಲಿಸಲು ಬಿಜೆಪಿಗಾದರೂ ಮತ ಚಲಾಯಿಸುತ್ತೇವೆ- ಮಾಯಾವತಿ
ಹಥ್ರಾಸ್ ಪ್ರಕರಣ: ಸಿಬಿಐ ಭೀತಿಯ ಎದುರು ಉಡುಗಿಹೋಯ್ತೆ ದಲಿತ ನಾಯಕಿಯ ದನಿ?

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಮಾಜವಾದಿ ಪಕ್ಷವನ್ನು ಸೋಲಿಸಲು ನಮಗೆ ಸಿಕ್ಕುವ ಒಂದೇ ಒಂದು ಅವಕಾಶವನ್ನೂ ಕೈ ಚೆಲ್ಲುವುದಿಲ್ಲ ಎಂದಿರುವ ಬಿಎಸ್‌ಪಿ ಅಧಿನಾಯಕಿ ಮಾಯಾವತಿ, ಅಗತ್ಯವಿದ್ದರೆ ಬಿಜೆಪಿಗೆ ಮತ ಹಾಕಿಯಾದರೂ ಸಮಾಜವಾದಿ ಪಕ್ಷವನ್ನು ಸೋಲಿಸುತ್ತೇನೆ ಎಂದಿದ್ದಾರೆ.

ಈ ಹಿಂದೆ ಮೈತ್ರಿ ಮಾಡಿಕೊಂಡಿದ್ದಾಗ ಅವರ (ಸಮಾಜವಾದಿಯ) ಕೌಟುಂಬಿಕ ಕಲಹದಿಂದಾಗಿ ಸೋಲುವಂತಾಯ್ತು, ಆದರೆ ಮುಂದೆಂದೂ ಸಮಾಜವಾದಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.

ಸಮಾಜವಾದಿ ಪಕ್ಷವನ್ನು ಸೋಲಿಸಲು ಬಿಜೆಪಿಗಾದರೂ ಮತ ಚಲಾಯಿಸುತ್ತೇವೆ- ಮಾಯಾವತಿ
ಬಿಹಾರ ಚುನಾವಣಾ ದಿಕ್ಕುದೆಸೆ ನಿರ್ಧರಿಸುತ್ತಿರುವ ಇಬ್ಬರು ಯುವ ನಾಯಕರು!

ಬಿಎಸ್‌ಪಿಯ ಏಳು ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿದ ಮಾಯಾವತಿ

ಬಿಎಸ್‌ಪಿಯ ರಾಜ್ಯಸಭಾ ಅಭ್ಯರ್ಥಿಯ ವಿರುದ್ಧ ಬಂಡಾಯವೆದ್ದ ಬಿಎಸ್‌ಪಿಯ ಏಳು ಶಾಸಕರನ್ನು ಮಾಯಾವತಿ ಗುರುವಾರದಂದು ಪಕ್ಷದಿಂದ ಉಚ್ಛಾಟಿಸಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಬಿಎಸ್‌ಪಿಯ ಅಧಿಕೃತ ಅಭ್ಯರ್ಥಿ ರಾಮ್ಜಿ ಗೌತಮ್ ಅವರ ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿ ಪಕ್ಷದ ಏಳು ಶಾಸಕರು ಬಂಡಾಯವೆದ್ದಿದ್ದರು. ಏಳು ಶಾಸಕರಲ್ಲಿ ಚೌಧರಿ ಅಸ್ಲಂ ಅಲಿ, ಹಕೀಮ್ ಲಾಲ್ ಬೈಂಡ್, ಮೊಹಮ್ಮದ್ ಮುಜತಾಬಾ ಸಿದ್ದಿಕಿ, ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರ್ಗೋವಿಂದ್ ಭಾರ್ಗವ ಮತ್ತು ಬಂದನಾ ಸಿಂಗ್ ಸೇರಿದ್ದಾರೆ.

ಸಮಾಜವಾದಿ ಪಕ್ಷವನ್ನು ಸೋಲಿಸಲು ಬಿಜೆಪಿಗಾದರೂ ಮತ ಚಲಾಯಿಸುತ್ತೇವೆ- ಮಾಯಾವತಿ
ಬಿಹಾರ ಚುನಾವಣಾ ಕಣದಲ್ಲಿ ‌ʼರಾವಣʼನ ಪ್ರವೇಶ: ದಲಿತ ರಾಜಕಾರಣದಲ್ಲಿ ಸಂಚಲನ

ಪಕ್ಷದಿಂದ ಉಚ್ಛಾಟನೆಗೊಳಗಾದ ಒಂದು ದಿನದ ಮೊದಲೇ, ಬಂಡಾಯ ಶಾಸಕರು ಸಮಾಜವಾದಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ರನ್ನು ಭೇಟಿಯಾಗಿರುವುದು ಹಲವು ಊಹಾಪೋಹಗಳಿಗೆ ನಾಂದಿಯಾಗಿತ್ತು. ಅಲ್ಲದೆ, ಏಳು ಮಂದಿ ಬಂಡಾಯ ಶಾಸಕರಲ್ಲಿ ನಾಲ್ವರು ಅಫಿದವಿಟ್‌ ಸಲ್ಲಿಸಿದ್ದರು. ರಾಮ್ಜಿ ಗೌತಮ್ ಅವರ ರಾಜ್ಯಸಭಾ ಚುನಾವಣೆಗೆ ನಾಮನಿರ್ದೇಶನ ಮಾಡುವ ಬಗ್ಗೆ ತಮ್ಮ ಸಹಿಯನ್ನು "ನಕಲಿ" ಮಾಡಲಾಗಿದೆ ಅಫಿದವಿಟ್‌ನಲ್ಲಿ ಅವರು ಹೇಳಿದ್ದರು.

ಮಾಯಾವತಿ ಹೇಳಿಕೆಗೆ ಪ್ರಿಯಾಂಕ ಖಂಡನೆ

ಸಮಾಜವಾದಿ ಪಕ್ಷವನ್ನು ಸೋಲಿಸಲು ಬಿಜೆಪಿಗಾದರೂ ಮತ ಹಾಕುತ್ತೇನೆ ಎಂದು ಮಾಯಾವತಿ ಹೇಳಿರುವುದನ್ನು ಸೋನಿಯಾ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ. ಮಾಯವತಿ ಮಾತನಾಡಿರುವ ವೀಡಿಯೋವನ್ನು ತನ್ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಂಡ ಪ್ರಿಯಾಂಕ ಗಾಂಧಿ ವಾದ್ರ, ʼಇದಾದ ಬಳಿಕ, ನಿಮಗೆ ಇನ್ನೇನಾದರೂ ಹೇಳಲು ಉಳಿದಿದೆಯೆʼ ಎಂದು ಪ್ರಶ್ನಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com