ಮಾನನಷ್ಟ ಪ್ರಕರಣ: ಬೇಷರತ್ ಕ್ಷಮೆ ಯಾಚಿಸಿದ ಬಿಜೆಪಿಯ ಕಪಿಲ್ ಮಿಶ್ರಾ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ತನ್ನ ವಿರುದ್ಧ ಮಾನಹಾನಿ ಮಾಡಿದ್ದಕ್ಕಾಗಿ 2017 ರಲ್ಲಿ ಸತ್ಯೇಂದರ್ ಜೈನ್ ಅವರು ಕಪಿಲ್ ಮಿಶ್ರಾ ವಿರುದ್ಧ ದೂರು ದಾಖಲಿಸಿದ್ದರು.
ಮಾನನಷ್ಟ ಪ್ರಕರಣ: ಬೇಷರತ್ ಕ್ಷಮೆ ಯಾಚಿಸಿದ ಬಿಜೆಪಿಯ ಕಪಿಲ್ ಮಿಶ್ರಾ

ಆಪ್‌ ಮುಖಂಡ ಮತ್ತು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಿದ ನಂತರ ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧದ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದೆಹಲಿ ನ್ಯಾಯಾಲಯ ಮುಕ್ತಾಯಗೊಳಿಸಿದೆ.

ತಮ್ಮ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಕ್ಕಾಗಿ ಜೈನ್ ಅವರು 2017 ರಲ್ಲಿ ಕಪಿಲ್‌ ಮಿಶ್ರಾ ವಿರುದ್ಧ ದೂರು ದಾಖಲಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಅವರ ಮುಂದೆ ಬೇಷರತ್ತಾಗಿ ಕ್ಷಮೆಯಾಚಿಸಲು ಮಿಶ್ರಾ ಒಪ್ಪಿಕೊಂಡ ನಂತರ ಈ ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ.

ಮಾನನಷ್ಟ ಪ್ರಕರಣ: ಬೇಷರತ್ ಕ್ಷಮೆ ಯಾಚಿಸಿದ ಬಿಜೆಪಿಯ ಕಪಿಲ್ ಮಿಶ್ರಾ
ದೆಹಲಿ ಗಲಭೆಗೆ ಕಪಿಲ್‌ ಮಿಶ್ರಾ ಹೇಳಿಕೆ ಕಾರಣ : ಮಾರ್ಕ್‌ ಝುಕರ್‌ ಬರ್ಗ್‌

ಬೇಷರತ್ತಾದ ಕ್ಷಮೆ ಕೋರಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಸಿದ್ಧ ಎಂದು ಆರೋಪಿಯು (ಕಪಿಲ್ ಮಿಶ್ರಾ) ಒಪ್ಪಿದ್ದಾರೆ. ಇದಕ್ಕೆ ದೂರುದಾರ (ಸತ್ಯೇಂದರ್ ಜೈನ್) ಕೂಡಾ ಒಪ್ಪಿದ್ದು, ಆರೋಪಿಯು ನ್ಯಾಯಾಲಯದ ಮುಂದೆ ತನ್ನ ತಪ್ಪೊಪ್ಪಿಗೆ ನೀಡಿದರೆ, ದೂರನ್ನು ಹಿಂತೆಗೆದುಕೊಳ್ಳುವುದಾಗಿ ನ್ಯಾಯಾಲಯ ದಾಖಲಿಸಿತ್ತು.

ಸತ್ಯೇಂದರ್‌ ಜೈನ್ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ₹ 2 ಕೋಟಿ ಲಂಚವನ್ನು ನೀಡಿದ್ದಾರೆ ಎಂದು ಮಿಶ್ರಾ 2017 ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ‌ ಆರೋಪಿಸಿದ್ದರು. ಸತ್ಯಂದರ್ ಜೈನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಕಪಿಲ್‌ ಮಿಶ್ರಾ, ಪತ್ರಿಕಾ ಗೋಷ್ಠಿಯಲ್ಲಿ “ಸತ್ಯಂದರ್ ಜೈನ್ 2 ಕೋಟಿ ರೂ ಲಂಚ ಪಡೆದಿದ್ದಾರೆ. ಅರವಿಂದ್ ಕೇಜ್ರಿವಾಲ್‌ ಸಂಬಂಧಿಯೊಬ್ಬರಿಗೆ 50 ಕೋಟಿ ಮೌಲ್ಯದ ಆಸ್ತಿ ಪರಬಾರೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕಾಗಿ ಸತ್ಯಂದರ್ ಜೈನ್ ಜೈಲಿಗೆ ಹೋಗುತ್ತಾರೆ” ಎಂದು ಹೇಳಿದ್ದರು.

ಈ ಕುರಿತು ಮಾನನಷ್ಟ ಮೊಕದ್ದಮೆಯನ್ನು ಸತ್ಯಜಿತ್‌ ಹೂಡಿದ್ದರು. ತನ್ನ ಹೇಳಿಕೆಗೆ ಯಾವುದೇ ಆಧಾರವಿಲ್ಲವೆಂದು ಒಪ್ಪಿದ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ತನ್ನ ಬೇಷರತ್‌ ಕ್ಷಮೆಯಾಚನೆಯೊಂದಿಗೆ ತನ್ನ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com