ಟೀಕೆಗೆ ಗುರಿಯಾದ ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ; ತೇಪೆ ಹಚ್ಚಲು ಮುಂದಾದ ಕೇಂದ್ರ ಸಚಿವ

ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ ಅಭಿವೃದ್ದಿಯ ವಿಚಾರಕ್ಕೆ ಸುದ್ದಿಯಾಗುವುದಕ್ಕಿಂತ ಹೆಚ್ಚಾಗಿ, ಟೀಕೆಗಳಿಗೆ ಸುದ್ದಿಯಾಗುತ್ತಿದೆ.
ಟೀಕೆಗೆ ಗುರಿಯಾದ ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ; ತೇಪೆ ಹಚ್ಚಲು ಮುಂದಾದ ಕೇಂದ್ರ ಸಚಿವ

ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ ದೇಶದೆಲ್ಲೆಡೆಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಕೋವಿಡ್‌ನಂತಹ ಸಂಕಷ್ಟದ ಪರಿಸ್ಥಿತಿಯನ್ನು ಕೂಡಾ ರಾಜಕಾರಣಕ್ಕೆ ಬಳಸಿಕೊಂಡ ಬಿಜೆಪಿಯ ಮನಸ್ಥಿತಿಯ ಕುರಿತು ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈಗ ತನ್ನ ತಪ್ಪನ್ನು ಅರಿತುಕೊಂಡಿರುವ ಬಿಜೆಪಿ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ.

ಕೇಂದ್ರ ಮಂತ್ರಿ ಪ್ರತಾಪ್‌ ಸಾರಂಗಿ ಅವರು ಕೋವಿಡ್‌ ಲಸಿಕೆ ದೇಶದ ಎಲ್ಲಾ ನಾಗರಿಕರಿಗೂ ಸಿಗುತ್ತದೆ ಎಂದು ಹೇಳಿದ್ದಾರೆ. ಆದರೆ, ಎಲ್ಲಾ ನಾಗರಿಕರಿಗೂ ಉಚಿತವಾಗಿ ಕೋವಿಡ್‌ ಲಸಿಕೆಯನ್ನು ನೀಡಲಾಗುವುದೇ ಎನ್ನುವ ಕುರಿತು ಯಾವುದೇ ಸ್ಪಷ್ಟನೆಯನ್ನು ಸಾರಂಗಿ ಅವರು ನೀಡಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಪ್ರತೀ ವ್ಯಕ್ತಿಗೂ ಸುಮಾರು ರೂ. 500ರಂತೆ ಕೋವಿಡ್‌ ಲಸಿಕೆ ನೀಡುವ ಸಾಧ್ಯತೆಯಿದೆ,” ಎಂದು ಅವರು ಹೇಳಿದ್ದಾರೆ. ಹಾಗಾದರೆ, ಬಿಹಾರದಲ್ಲಿ ಮಾತ್ರ ಏಕೆ ಉಚಿತ ಕೋವಿಡ್‌ ಲಸಿಕೆ ನೀಡುತ್ತೀರಿ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

ಟೀಕೆಗೆ ಗುರಿಯಾದ ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ; ತೇಪೆ ಹಚ್ಚಲು ಮುಂದಾದ ಕೇಂದ್ರ ಸಚಿವ
ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!

ಇನ್ನು ಅಕ್ಟೋಬರ್‌ 20ರಂದು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿಯೂ ಕೋವಿಡ್‌ ಲಸಿಕೆಯ ವಿಚಾರವನ್ನು ಪ್ರಸ್ತಾಪಿಸಿದ್ದ ಅವರು, ಭಾರತತೀಯ ವಿಜ್ಞಾನಿಗಳು ಹಲವು ಮಾದರಿಗಳ ಕೋವಿಡ್‌ ಲಸಿಕೆಯನ್ನು ತಯಾರಿಸುವ ಹಂತದಲ್ಲಿದ್ದಾರೆ. ಪ್ರಯೋಗಗಳು ಪ್ರಗತಿಯ ಹಂತದಲ್ಲಿದೆ ಎಂದು ಹೇಳಿದ್ದರು. ಎಲ್ಲರಿಗೂ ಕೋವಿಡ್‌ ಲಸಿಕೆ ಸಿಗುತ್ತದೆ ಎಂಬ ಭರವಸೆಯನ್ನೂ ನೀಡಿದ್ದರು. ಆದರೆ, ಇಲ್ಲಿಯೂ ಉಚಿತ ಕೋವಿಡ್‌ ಲಸಿಕೆಯ ಕುರಿತ ಪ್ರಸ್ತಾಪವನ್ನು ಪ್ರಧಾನಿಗಳು ಮಾಡಿರಲಿಲ್ಲ.

ಟೀಕೆಗೆ ಗುರಿಯಾದ ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ; ತೇಪೆ ಹಚ್ಚಲು ಮುಂದಾದ ಕೇಂದ್ರ ಸಚಿವ
ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

ಒಟ್ಟಿನಲ್ಲಿ, ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ ಅಭಿವೃದ್ದಿಯ ವಿಚಾರಕ್ಕೆ ಸುದ್ದಿಯಾಗುವುದಕ್ಕಿಂತ ಹೆಚ್ಚಾಗಿ, ಟೀಕೆಗಳಿಗೆ ಸುದ್ದಿಯಾಗುತ್ತಿದೆ. ಕೋವಿಡ್‌ ಲಸಿಕೆಯನ್ನು ಕೂಡಾ ಮತ ಸೆಳೆಯಲು ಬಳಸಿಕೊಳ್ಳುವುದರ ಮೂಲಕ ದೇಶದ ಜನರ ಕೆಂಗಣ್ಣಿಗೆ ಬಿಜೆಪಿ ಗುರಿಯಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com