ಬಜಾಜ್ ಆಪೆಯಲ್ಲಿ ಸಂಚಾರಿ ಮನೆ ನಿರ್ಮಾಣ; ತಮಿಳುನಾಡು ಯುವಕನ ಆವಿಷ್ಕಾರ

ಈತ ವಿನ್ಯಾಸದಲ್ಲಿ ಮನೆಯಾಗಿ ರೂಪಾಂತರಗೊಂಡಿರುವ ಗೂಡ್ಸ್‌ ರಿಕ್ಷಾದಲ್ಲಿ ಕಿಚನ್‌ ಇದೆ, ಟಾಯ್ಲೆಟ್-ಬಾತ್ರೂಮ್‌ ಇದೆ, ಮಲಗಲು ಅವಕಾಶವಿದೆ, ಗಾಳಿ ಆಸ್ವಾದಿಸಲು ಬಾಲ್ಕನಿಯೂ ಇದೆ.
ಬಜಾಜ್ ಆಪೆಯಲ್ಲಿ ಸಂಚಾರಿ ಮನೆ ನಿರ್ಮಾಣ; ತಮಿಳುನಾಡು ಯುವಕನ ಆವಿಷ್ಕಾರ

ಸಂಚರಿಸುವ ಮನೆ, ಕೇಳುವಾಗಲೇ ಕುತೂಹಲ ಮೂಡಿಸುವ ಈ ಮಾದರಿ ಮನೆಗಳು ಆವಿಷ್ಕಾರಗೊಂಡು ಹಲವು ವರ್ಷಗಳೇ ಆಗಿವೆ. ಪ್ರಯಾಣದ ಕುರಿತು ತೀವ್ರ ಆಸಕ್ತಿ ಉಳ್ಳವರಲ್ಲಿ ಬಹುಪಾಲು ಮಂದಿ ಇಂತಹದ್ದೊಂದು ಸ್ವಂತ ಚಲಿಸುವ ಮನೆಯನ್ನು ಹೊಂದಲು ತೀವ್ರವಾಗಿ ಬಯಸುತ್ತಿರುತ್ತಾರೆ. ಸಂಚಾರದ ನಡುವೆ ತಂಗಲು, ತಮ್ಮ ಊಟವನ್ನು ತಾವೇ ಅಡುಗೆ ಮಾಡಿ ತಿನ್ನಲು ʼಸಂಚಾರ ಬದುಕುʼ ನಡೆಸುವವರಿಗೆ ಚಲಿಸುವ ಮೋಟಾರ್‌ ಮನೆಗಳು ಒಂದೇ ಆಯ್ಕೆ.

ಜನರ ಇಂತಹ ಬಯಕೆಗಳನ್ನು ಪೂರೈಸಲು ಹಲವಾರು ವಾಹನ ಕಂಪೆನಿಗಳು ತಾವೇ ಸಂಚಾರ ಮನೆಯನ್ನು ನಿರ್ಮಿಸಿ ಗ್ರಾಹಕರಿಗೆ ನೀಡುತ್ತವೆ. ಗ್ರಾಹಕರ ಬೇಡಿಕೆ ತಕ್ಕಂತೆ ವಾಹನಗಳನ್ನು ಮನೆಯನ್ನಾಗಿ ವಿನ್ಯಾಸಗೊಳಿಸುವ ನುರಿತ ವಿನ್ಯಾಸಕರೂ ಇದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂತಹದ್ದೇ ಸಂಚಾರ ಮನೆಯೊಂದನ್ನು ತಮಿಳುನಾಡಿನ ಯುವ ಆರ್ಕಿಟೆಕ್ಟ್‌ ಅರುಣ ಪ್ರಭು ಎನ್‌ ಜಿ ಸರಕು ಸಾಗಿಸುವ ಬಜಾಜ್‌ ರಿಕ್ಷಾವೊಂದನ್ನು ಸಂಚಾರ ಮನೆಯನ್ನಾಗಿ ಮಾರ್ಪಡಿಸಿ ಎಲ್ಲರ ಹುಬ್ಬೇರಿಸಿದ್ದಾನೆ.

ಈತ ವಿನ್ಯಾಸದಲ್ಲಿ ಮನೆಯಾಗಿ ರೂಪಾಂತರಗೊಂಡಿರುವ ಗೂಡ್ಸ್‌ ರಿಕ್ಷಾದಲ್ಲಿ ಕಿಚನ್‌ ಇದೆ, ಟಾಯ್ಲೆಟ್-ಬಾತ್ರೂಮ್‌ ಇದೆ, ಮಲಗಲು ಅವಕಾಶವಿದೆ, ಗಾಳಿ ಆಸ್ವಾದಿಸಲು ಬಾಲ್ಕನಿಯೂ ಇದೆ.

ಈತನಿಗೆ ಇಂತಹದ್ದೊಂದು ಯೋಚನೆ ಹೊಳೆದ ಕತೆ ಕುತೂಹಲ. ಜನರು ತಮ್ಮ ಸಣ್ಣ ನಿವೇಶನದಲ್ಲಿ ಸರಿಯಾಗಿ ಮನೆ ಕಟ್ಟದೆ, ಸ್ಥಳವನ್ನು ಅನುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅರುಣ್‌ ಕುಮಾರ್‌ ಹೇಳುತ್ತಾರೆ.

ಮುಖ್ಯವಾಗಿ, ಸ್ಲಮ್‌ ಗಳಲ್ಲಿ ಹೇಗೆ ಸ್ಥಳವನ್ನು ಸದುಪಯೋಗ ಪಡಿಸಬೇಕೆಂದು ಅಧ್ಯಯನ ಮಾಡಿರುವ ಅರುಣ್‌ ಕುಮಾರ್‌, ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಜನರಿಗೆ ಮನದಟ್ಟು ಮಾಡಿಸಲು ಈ ಯೋಜನೆಯನ್ನು ಪೂರ್ತಿಗೊಳಿಸಿದ್ದಾರೆ ಎನ್ನುತ್ತಾರೆ ಅರುಣ್‌.

ಚೆನ್ನೈ ಹಾಗೂ ಮುಂಬೈ ಕೊಳೆಗೇರಿ ನಿವಾಸಿಗಳ ಮನೆಗಳನ್ನು ಅಭ್ಯಸಿಸಿರುವ ಅರುಣ್‌, ಯೋಜನಾಬದ್ಧವಾದ ಕ್ರಮದಿಂದ ಇರುವ ಸಣ್ಣ ಸ್ಥಳವನ್ನು ಪ್ರಯೋಜನಕಾರಿಯಾಗಿ ಬಳಸಬಹುದೆಂದು ಸಾಬೀತುಪಡಿಸಿ ತೋರಿಸಿದ್ದಾರೆ.

ಹಾಗೇ ನಿರ್ಮಿಸಿದ ಸಂಚಾರಿ ಮನೆಗೆ ಅವರು ಸೋಲೋ 01 ಎಂದು ಹೆಸರಿಟ್ಟಿದ್ದಾರೆ. ಇದರ ವೆಚ್ಚ ಬರೀ ಒಂದು ಲಕ್ಷದೊಳಗೆ ಮುಗಿಸಿದ್ದಾರೆ. 36 ಚದರ ಅಡಿ ವಿಸ್ತೀರ್ಣದ ರಿಕ್ಷಾದಲ್ಲಿ ಬೆಡ್ರೂಮ್‌, ಲಿವಿಂಗ್‌ ರೂಮ್‌, ಕಿಚನ್‌, ಕೆಲಸ ಮಾಡುವ ಸ್ಥಳ, ಟಾಯ್ಲೆಟ್‌ ಬಾತ್ರೂಮ್‌, ಮಾತ್ರವಲ್ಲದೆ 250 ಲೀಟರ್‌ ನೀರಿನ ಟ್ಯಾಂಕ್‌ ಇದೆ, 600 ವ್ಯಾಟ್‌ ನ ಸೋಲಾರ್‌ ಪ್ಯಾನೆಲ್‌ ಇದೆ, ಬ್ಯಾಟರಿ, ಕಪ್‌ ಬೋರ್ಡ್‌, ಹ್ಯಾಂಗರ್‌, ಮೆಟ್ಟಿಲು ಎಲ್ಲವನ್ನೂ ಯೋಜನಾಬದ್ಧವಾಗಿ ಜೋಡಿಸಲಾಗಿದೆ.

ಅರುಣ್‌ ರ ಈ ಆವಿಷ್ಕಾರಕ್ಕೆ ಇದೀಗ ಬಜಾಜ್‌ ಆಟೋ ಲಿಮಿಟೆಡ್‌ ಭೇಷ್‌ ಎಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಆತನ ಕತೆಯನ್ನು ಹಂಚಿಕೊಂಡಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com