ಯುವಕರಿಗೆ ಉದ್ಯೋಗ ದೊರಕದಿದ್ದರೆ ಅವರು ಬೀದಿಗಿಳಿಯುತ್ತಾರೆ– ರಘುರಾಮ್‌ ರಾಜನ್‌ ಎಚ್ಚರಿಕೆ

ಸಾಮಾಜಿಕ ಜಾಲತಾಣ ಹಾಗೂ ಸುಳ್ಳು ಸುದ್ದಿಗಳು ಹೆಚ್ಚು ಕಾಲ ಯುವಕರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ, ಎಂದು ರಾಜನ್‌ ಹೇಳಿದ್ದಾರೆ.
ಯುವಕರಿಗೆ ಉದ್ಯೋಗ ದೊರಕದಿದ್ದರೆ ಅವರು ಬೀದಿಗಿಳಿಯುತ್ತಾರೆ– ರಘುರಾಮ್‌ ರಾಜನ್‌ ಎಚ್ಚರಿಕೆ

ಭಾರತದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಕುರಿತು ಮಾತನಾಡಿರುವ ಆರ್‌ಬಿಐನ ಮಾಜಿ ಗವರ್ನರ್‌ ಹಾಗೂ ಆರ್ಥಿಕ ತಜ್ಞ ರಘುರಾಮ್‌ ರಾಜನ್‌ ಅವರು, ಒಂದು ವೇಳೆ ಯುವಕರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾದರೆ, ಯುವಕರು ಬೀದಿಗಿಳಿದು ಪ್ರತಿಭಟಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

“ಸಾಮಾಜಿಕ ಜಾಲತಾಣ ಹಾಗೂ ಸುಳ್ಳು ಸುದ್ದಿಗಳು ಹೆಚ್ಚು ಕಾಲ ಯುವಕರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಅಲ್ಪ ಕಾಲಕ್ಕೆ ಯುವಕರನ್ನು ಉದ್ಯೋಗದ ವಿಚಾರದೀಮ ವಿಮುಖರನ್ನಾಗಿಸಬಹುದು. ಆದರೆ, ನೀವು ಉದ್ಯೋಗ ಸೃಷ್ಟಿಸಿಲ್ಲವಾದರೆ, ಅವರು ಬೀದಿಗಿಳಿದು ಬರುತ್ತಾರೆ. ಸೋಷಿಯಲ್‌ ಮೀಡಿಯಾ ಮತ್ತು ಸುಳ್ಳು ಸುದ್ದಿಗಳಿಂದ ಯುವಕನ್ನು ಹೆಚ್ಚು ಕಾಲ ಹಿಡಿದಿಕೊಳ್ಳಲಾಗುವುದಿಲ್ಲ,” ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನು, ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಆಮದುಗಳನ್ನು ನಿರ್ಬಂಧಿಸಿ ಅಥವಾ ಅವುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಭಾರತದಲ್ಲೇ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆ, ಈ ಮೊದಲೇ ಪರೀಕ್ಷಿಸಿಯಾಗಿದೆ. ಆದರೆ, ನಾವು ಇದರಲ್ಲಿ ಯಶಸ್ವಿಯಾಗಲಿಲ್ಲ. ಈ ಹಾದಿಯಲ್ಲಿ ಮುಂದುವರೆಯುವುದು ಅಪಾಯಕಾರಿ, ಎಂದು ರಘುರಾಮ್‌ ಹೇಳಿದ್ದಾರೆ.

“ಚೀನಾ ಯಾಕೆ ರಫ್ತಿನಲ್ಲಿ ಅಗ್ರಗಣ್ಯವಾಗಿದೆ ಎಂದರೆ, ಅವರು ಈ ಹಿಂದೆ ಅಷ್ಟೇ ಸರಕನ್ನು ಆಮದು ಮಾಡಿಕೊಂಡಿದ್ದರು. ರಫ್ತು ಹೆಚ್ಚು ಮಾಡಬೇಕೆಂದರೆ, ಆಮದು ಕೂಡಾ ಮಾಡಬೇಆಗುತ್ತದೆ. ಹೆಚ್ಚಿನ ಆಮದು ತೆರಿಗೆ ವಿಧಿಸಬೇಡಿ. ಅದರ ಬದಲು ಉತ್ಪಾದನೆಗೆ ಪೂರಕವಾಗುವ ವಾತಾವರಣವನ್ನು ಭಾರತದಲ್ಲೇ ನಿರ್ಮಿಸಿ,” ಎಂದವರು ಸಲಹೆ ನೀಡಿದ್ದಾರೆ.

ನಿರ್ದಿಷ್ಟ ಗುರಿ ಇಟ್ಟುಕೊಂಡು ಹಣವನ್ನು ವ್ಯಯಿಸಿ ಉತ್ತಮ ಪ್ರತಿಫಲ ಪಡೆಯಬೇಕಾದರೆ, ಅಷ್ಟೇ ಜಾಗರೂಕತೆಯಿಂದ ಹಾಗೂ ಬುದ್ದಿವಂತಿಕೆಯಿಂದ ಮಾಡಬೇಕು. ಇಲ್ಲವಾದರೆ ಸಮಗ್ರ ಖರ್ಚು-ವೆಚ್ಚದ ಕುರಿತು ಲೆಕ್ಕವನ್ನು ಇಟ್ಟುಕೊಳ್ಳಬೇಕು. ಹೆಚ್ಚಿನ ಅವಧಿಯ ಗುರಿಯನ್ನು ಇಟ್ಟುಕೊಂಡು ವ್ಯಯಿಸಿದರೆ ಉತ್ತಮ ಪ್ರತಿಫಲ ದೊರಕುತ್ತದೆ, ಎಂದಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com