ನಮ್ಮ ಗೆಳೆಯರ ಬಗ್ಗೆ ಮಾತನಾಡುವ ಕ್ರಮ ಇದಲ್ಲ: ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಿಸ್ಪರ್ಧಿ ಬಿಡೆನ್

ಅಮೇರಿಕಾ ಮತ್ತು ಭಾರತ ಎರಡರಲ್ಲೂ ಮಧ್ಯಮ ವರ್ಗದ ಜನರನ್ನು ಬೆಳೆಸುತ್ತೇವೆ ಮತ್ತು ಹವಾಮಾನ ಬದಲಾವಣೆ, ಜಾಗತಿಕ ಆರೋಗ್ಯ, ಭಯೋತ್ಪಾದನೆ ಮತ್ತು ಪರಮಾಣು ಪ್ರಸರಣದಂತಹ ಇತರ ಅಂತರರಾಷ್ಟ್ರೀಯ ಸವಾಲುಗಳನ್ನು ಒಟ್ಟಿಗೆ ಎದುರಿಸುತ್ತೇವೆ
ನಮ್ಮ ಗೆಳೆಯರ ಬಗ್ಗೆ ಮಾತನಾಡುವ ಕ್ರಮ ಇದಲ್ಲ: ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಿಸ್ಪರ್ಧಿ ಬಿಡೆನ್

ತಮ್ಮ ನಡುವಿನ ಅಧ್ಯಕ್ಷೀಯ ಚರ್ಚೆಯ ನಡುವೆ ಭಾರತದ ಗಾಳಿಯನ್ನು ಹೊಲಸು ಎಂದು ಕರೆದಿರುವ ಟ್ರಂಪ್‌ ಅನ್ನು ಅವರ ಪ್ರತಿಸ್ಪರ್ಧಿ ಜೊ ಬಿಡೆನ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಗೆಳೆಯರ ಬಗ್ಗೆ ಮಾತನಾಡುವ ಕ್ರಮ ಇದಲ್ಲ ಎಂದು ಅಮೆರಿಕಾ ಅಧ್ಯಕ್ಷರಿಗೆ ಬಿಡೆನ್‌ ಹೇಳಿದ್ದಾರೆ.

ಭಾರತದ ವಿರುದ್ಧದ ಹೇಳಿಕೆಯನ್ನು ಖಂಡಿಸಿರುವ ಬಿಡೆನ್‌, ನಾನು ಹಾಗೂ ಕಮಲಾ ಹ್ಯಾರಿಸ್‌ ಭಾರತದೊಂದಿಗಿನ ಅಮೇರಿಕಾದ ಸಂಬಂಧವನ್ನು ಬಹಳ ಗೌರವಯುತವಾಗಿ ಕಾಣುತ್ತೇವೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಟ್ರಂಪ್‌ ಭಾರತದ ಗಾಳಿಯನ್ನು ಹೊಲಸು ಎಂದು ಕರೆದಿದ್ದಾರೆ. ಗೆಳೆಯರ ಬಗ್ಗೆ ಮಾತನಾಡಬೇಕಾದ ರೀತಿ ಇದಲ್ಲ. ಜಾಗತಿಕ ಹವಾಮಾನ ಸವಾಲುಗಳನ್ನು ಎದುರಿಸುವ ಕ್ರಮ ಇದಲ್ಲ ಎಂದು ಮಾಜಿ ಉಪಾಧ್ಯಕ್ಷ ಬಿಡೆನ್‌ ಟ್ವೀಟ್‌ ಮಾಡಿದ್ದಾರೆ.

ಕಮಲಾ ಹ್ಯಾರಿಸ್‌ ಹಾಗೂ ನಾನು ಭಾರತ ಹಾಗೂ ಅಮೇರಿಕಾ ನಡುವಿನ ಸಹಭಾಗಿತ್ವವನ್ನು, ಸಂಬಂಧವನ್ನು ಗೌರವದಿಂದ ಕಾಣುತ್ತೇವೆ. ಹಾಗೂ ಗೌರವ ಕಳೆದುಕೊಂಡ ನಮ್ಮ ವಿದೇಶಾಂಗ ನೀತಿಗೆ ಮತ್ತೆ ಗೌರವ ತರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಒಬಾಮ-ಬಿಡೆನ್‌ ಕಾಲದಲ್ಲಿ ಭಾರತದೊಂದಿಗಿನ ಬಾಂಧವ್ಯ ಉತ್ತಮವಾಗಿತ್ತು. ಬಿಡೆನ್‌-ಹ್ಯಾರಿಸ್‌ ಕಾಲದಲ್ಲೂ ಅದು ಮತ್ತೆ ಮುಂದುವರಿಯಲಿದೆ, ನಾವು ಮಾರುಕಟ್ಟೆಗಳನ್ನು ತೆರೆಯುತ್ತೇವೆ ಮತ್ತು ಅಮೇರಿಕಾ ಮತ್ತು ಭಾರತ ಎರಡರಲ್ಲೂ ಮಧ್ಯಮ ವರ್ಗದ ಜನರನ್ನು ಬೆಳೆಸುತ್ತೇವೆ ಮತ್ತು ಹವಾಮಾನ ಬದಲಾವಣೆ, ಜಾಗತಿಕ ಆರೋಗ್ಯ, ಭಯೋತ್ಪಾದನೆ ಮತ್ತು ಪರಮಾಣು ಪ್ರಸರಣದಂತಹ ಇತರ ಅಂತರರಾಷ್ಟ್ರೀಯ ಸವಾಲುಗಳನ್ನು ಒಟ್ಟಿಗೆ ಎದುರಿಸುತ್ತೇವೆ" ಎಂದು ಬಿಡೆನ್ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com