ನಮ್ಮ ಧ್ವಜ ಮರಳಿ ಪಡೆಯುವವರೆಗೆ ಬೇರೆ ಧ್ವಜ ಹಿಡಿಯುವುದಿಲ್ಲ – ಮೆಹಬೂಬ ಮುಫ್ತಿ

ಎಲ್ಲಾ ರಂಗಗಳಲ್ಲಿ ವಿಫಲವಾದ ಕೇಂದ್ರ ಸರ್ಕಾರವು ಕಾಶ್ಮೀರ ಮತ್ತು 370 ನೇ ವಿಧಿಯನ್ನು ನೆನಪಿಸುತ್ತದೆ ಎಂದು ಪಿಡಿಪಿ ಮುಖ್ಯಸ್ಥೆ ಆರೋಪಿಸಿದ್ದಾರೆ.
ನಮ್ಮ ಧ್ವಜ ಮರಳಿ ಪಡೆಯುವವರೆಗೆ ಬೇರೆ ಧ್ವಜ ಹಿಡಿಯುವುದಿಲ್ಲ – ಮೆಹಬೂಬ ಮುಫ್ತಿ

ಜಮ್ಮು ಕಾಶ್ಮೀರದ ಬಾವುಟವನ್ನು ಹಾರಿಸಲು ಅನುಮತಿ ಸಿಕ್ಕೊಡನೆ ನಾವು ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ. ಅಲ್ಲಿಯವರೆಗೆ ನಾವು ಜಮ್ಮು ಕಾಶ್ಮೀರದ ಬಾವುಟವನ್ನೇ ಹಿಡಿಯುತ್ತೇವೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮುಫ್ತಿ, ನನ್ನ ಬಾವುಟ ಇದು (ತನ್ನೆದುರಿದ್ದ ಬಾವುಟ ತೋರಿಸಿ), ಈ ಬಾವುಟ ಮರಳಿ ಬಂದಾಗ ನಾವು ಆ ಬಾವುಟವನ್ನೂ (ತ್ರಿವರ್ಣ ಧ್ವಜ) ಎತ್ತಿ ಹಿಡಿಯುತ್ತೇವೆ. ನಮ್ಮ ಬಾವುಟವನ್ನು ನಾವು ಪಡೆಯುವವರೆಗೆ ಬೇರೆ ಯಾವುದೇ ಧ್ವಜವನ್ನು ಹಾರಿಸುವುದಿಲ್ಲ. ಈ ಧ್ವಜವೇ (ಜಮ್ಮು ಕಾಶ್ಮೀರದ ಧ್ವಜ) ನಮ್ಮನ್ನು ಆ ಧ್ವಜದೊಂದಿಗಿನ (ತ್ರಿವರ್ಣ ಧ್ವಜ) ಸಂಬಂಧವನ್ನು ರೂಪಿಸಿದೆ ಎಂದು ಅವರು ಹೇಳಿದ್ದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಮ್ಮ ಧ್ವಜ ಮರಳಿ ಪಡೆಯುವವರೆಗೆ ಬೇರೆ ಧ್ವಜ ಹಿಡಿಯುವುದಿಲ್ಲ – ಮೆಹಬೂಬ ಮುಫ್ತಿ
ಕಾಶ್ಮೀರ ಶಾಂತವಾಗಿದೆ ಎಂಬ ಮಿಥ್ಯಾ ಪ್ರಚಾರ

ಕೇಂದ್ರ ಸರ್ಕಾರ ತನ್ನ ವೈಫಲ್ಯ ಮರೆಮಾಚಲು 370 ನೇ ವಿಧಿಯನ್ನು ಹಿಡಿದುಕೊಂಡು ಮಾತನಾಡುತ್ತದೆ. ಎಲ್ಲಾ ರಂಗಗಳಲ್ಲಿ ವಿಫಲವಾದ ಕೇಂದ್ರ ಸರ್ಕಾರವು ಕಾಶ್ಮೀರ ಮತ್ತು 370 ನೇ ವಿಧಿಯನ್ನು ನೆನಪಿಸುತ್ತದೆ ಎಂದು ಪಿಡಿಪಿ ಮುಖ್ಯಸ್ಥೆ ಆರೋಪಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ರಾಜ್ಯ ನಾಗರಿಕ ಸಚಿವಾಲಯದ ತ್ರಿವರ್ಣದೊಂದಿಗೆ ಹಾರಾಟ ನಡೆಸುತ್ತಿದ್ದ ಜೆ & ಕೆ ರಾಜ್ಯ ಧ್ವಜವನ್ನು ತೆಗೆದುಹಾಕಲಾಗಿತ್ತು.

ನಮ್ಮ ಧ್ವಜ ಮರಳಿ ಪಡೆಯುವವರೆಗೆ ಬೇರೆ ಧ್ವಜ ಹಿಡಿಯುವುದಿಲ್ಲ – ಮೆಹಬೂಬ ಮುಫ್ತಿ
ಏನಿದು ಕಲಂ 370? ಇದರ ಹಿನ್ನೆಲೆ, ಇತಿಹಾಸವೇನು? ಭವಿಷ್ಯದ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಮಾಹಿತಿ

ರದ್ದುಪಡಿಸಿದ 370 ನೇ ವಿಧಿಯ ಅಡಿಯಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ತನ್ನದೇ ಆದ ಧ್ವಜವನ್ನು ಹೊಂದಲು ಅನುಮತಿ ನೀಡಲಾಗಿತ್ತು. ಈ ವಿಧಿಯ ರದ್ದತಿಯೊಂದಿಗೆ ಜಮ್ಮು ಕಾಶ್ಮೀರದ ಧ್ವಜದ ಮಾನ್ಯತೆಯನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸಿದೆ.

ಜಮ್ಮು ಕಾಶ್ಮೀರ ಧ್ವಜವನ್ನು ಇತರ ಸರ್ಕಾರಿ ಕಟ್ಟಡಗಳಿಂದಲೂ ತೆಗೆದುಹಾಕಲಾಗಿದೆ.

ಜಮ್ಮು ಕಾಶ್ಮೀರ ಧ್ವಜವನ್ನು ಜೂನ್ 7, 1952 ರಂದು ರಾಜ್ಯ ವಿಧಾನಸಭೆಯು ಅಂಗೀಕರಿಸಿತು, ಬಾವುಟದಲ್ಲಿರುವ ಮೂರು ಪಟ್ಟೆಗಳು ರಾಜ್ಯದ ಮೂರು ಪ್ರದೇಶಗಳಾದ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತಿನಿಧಿಸುತ್ತವೆ.

ನಮ್ಮ ಧ್ವಜ ಮರಳಿ ಪಡೆಯುವವರೆಗೆ ಬೇರೆ ಧ್ವಜ ಹಿಡಿಯುವುದಿಲ್ಲ – ಮೆಹಬೂಬ ಮುಫ್ತಿ
ಕಡು ಕೆಂಪಾಗದಿರಲಿ, ಹಸಿರು ಪಚ್ಚೆಯ ಕಾಶ್ಮೀರ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com