ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ದಿಯ ವೇಗ ಹೆಚ್ಚುತ್ತದೆ – ಪ್ರಧಾನಿ ಮೋದಿ

ಅಧಿಕಾರ ಸಿಕ್ಕಿದರೆ ಸಂವಿಧಾನದ 370 ನೇ ವಿಧಿಯನ್ನು ವಾಪಾಸ್ ತರುತ್ತೇವೆ ಎನ್ನುವವರಿಗೆ ಮತ್ತೆ ಮತ ಕೇಳಲು ಎಷ್ಟು ಧೈರ್ಯ? ಅವರು ಬಿಹಾರಕ್ಕೆ ಅವಮಾನ ಮಾಡುತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ದಿಯ ವೇಗ ಹೆಚ್ಚುತ್ತದೆ – ಪ್ರಧಾನಿ ಮೋದಿ

“ಆರ್‌ಜೆಡಿಯು 15 ವರ್ಷಗಳಲ್ಲಿ ಸಾಧಿಸದ ಪ್ರಗತಿಯನ್ನು ಎನ್‌ಡಿಎ ಸರ್ಕಾರ ಸಾಧಿಸಿದೆ,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಹಾರ ಚುನಾವಣೆಯ ಅಂಗವಾಗಿ ಸಾಸಾರಾಂನಲ್ಲಿ ಆಯೋಜಿಸಲಾಗಿದ್ದ ತಮ್ಮ ಮೊತ್ತ ಮೊದಲ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಆರ್‌ಜೆಡಿ ಸರ್ಕಾರವು ಅಪರಾಧ ಹಾಗೂ ಭ್ರಷ್ಟಾಚಾರದಿಂದ ತುಂಬಿ ತುಳುಕಿತಿತ್ತು. ಈ ಬಾರಿ ಅಭಿವೃದ್ದಿಗೆ ಮತ ಹಾಕಿ. ಬಿಹಾರವನ್ನು ʼಭಿಮಾರುʼ ರಾಜ್ಯವನ್ನಾಗಿಸಿದವರಿಗಲ್ಲ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಈ ಹಿಂದೆ ಬಿಹಾರವನ್ನು ಆಳಿದ ಪಕ್ಷಗಳು ಅಭಿವೃದ್ದಿ ಹೊಂದುತ್ತಿರುವ ರಾಜ್ಯವನ್ನು ಆಸೆಗಣ್ಣಿನಿಂದ ನೋಡುತ್ತಿವೆ. ಆದರೆ, ಬಿಹಾರವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿದವರನ್ನು ಮರೆಯಬಾರದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧಃಪತನಗೊಂಡಿದ್ದ ಹಾಗೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದ ಕಾಲವದು. ಈಗ ಬಿಹಾರಿಗಳು ಸಂಜೆಯ ನಂತರವೂ ಯಾವುದೇ ಭಯವಿಲ್ಲದೇ ಬದುಕುತ್ತಿದ್ದಾರೆ,” ಎಂದು ಮೋದಿ ಹೇಳಿದ್ದಾರೆ.

ಇನ್ನು ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ದಿಯು ಎರಡು ಎಂಜಿನ್ ಒಮ್ಮೆಗೆ ಚಲಿಸಿದಲ್ಲಿ ಅಭಿವೃದ್ದಿಯ ಗಾಡಿ ವೇಗವಾಗಿ ಚಲಿಸುವುದು, ಎಂದಿದ್ದಾರೆ.

ಅಧಿಕಾರ ಸಿಕ್ಕಿದರೆ ಸಂವಿಧಾನದ 370 ನೇ ವಿಧಿಯನ್ನು ವಾಪಾಸ್ ತರುತ್ತೇವೆ ಎನ್ನುವವರಿಗೆ ಮತ್ತೆ ಮತ ಕೇಳಲು ಎಷ್ಟು ಧೈರ್ಯ? ಅವರು ಬಿಹಾರಕ್ಕೆ ಅವಮಾನ ಮಾಡುತ್ತಿದ್ದಾರೆ. ಯಾವ ರಾಜ್ಯದ ಜನರು ತಮ್ಮ ಮಕ್ಕಳನ್ನು ದೇಶ ಸೇವೆಗಾಗಿ ಗಡಿಗೆ ಕಳುಹಿಸುತ್ತಾರೋ, ಅವರಿಗೆ ಅವಮಾನ ಮಾಡಿದಂತೆ. ಎಂದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com