ಬಿಹಾರ ಚುನಾವಣೆ; ಬಿಜೆಪಿ ಪ್ರಣಾಳಿಕೆಗೆ ಕಾಂಗ್ರೆಸ್‌ ಮುಖಂಡರ ಟೀಕೆ

ಬಿಜೆಪಿಯು ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಕರೋನಾ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ಇದು ಮತದಾರರನ್ನು ಹಾದಿ ತಪ್ಪಿಸುವ ಸಂಚು ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಬಿಹಾರ ಚುನಾವಣೆ; ಬಿಜೆಪಿ ಪ್ರಣಾಳಿಕೆಗೆ ಕಾಂಗ್ರೆಸ್‌ ಮುಖಂಡರ ಟೀಕೆ

ಬಿಹಾರ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಬಹಳಷ್ಟು ಟೀಕೆಗೆ ಒಳಗಾಗಿದೆ. ಉದ್ಯೋಗ ಮತ್ತು ಕೋವಿಡ್‌ ಲಸಿಕೆಯನ್ನು ಮುಂದಿಟ್ಟುಕೊಂಡು ಚುನಾವಣೆಡ ಹೊರಟಿರುವ ಬಿಜೆಪಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಹಿಂದಿಯಲ್ಲಿ ಶಾಯರಿ ಬರೆದೆರುವ ರಾಹುಲ್‌ ಅವರು “ಬಿಹಾರದ ವಾತಾವರಣ ಗುಲಾಬಿಯಷ್ಟೇ ಅಂದವಾಗಿದೆ. ಆದರೆ, ನಿಮ್ಮ ಅಂಕಿ-ಅಂಶಗಳು ಸುಳ್ಳು ಮತ್ತು ಹೇಳಿಕೆಗಳು ಪುಸ್ತಕದಲ್ಲಿ ಮಾತ್ರ ಇವೆ,” ಎಂದು ಹೇಳಿದ್ದಾರೆ.

“ಕರೋನಾವಿರಲಿ ಅಥವಾ ನಿರುದ್ಯೋಗವಿರಲಿ ಸುಳ್ಳು ಅಂಕಿ-ಅಂಶಗಳಿಂದ ಇಡೀ ಭಾರತ ಸಂಕಷ್ಟದಲ್ಲಿದೆ. ಬನ್ನಿ, ಈ ಸುಳ್ಳು&ಕೆಟ್ಟ ಆಡಳಿತದಿಂದ ಮುಕ್ತರಾಗೋಣ,” ಎಂದು ಅವರು ಹೇಳಿದ್ದಾರೆ.

ಬಿಜೆಪಿಯು ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಕರೋನಾ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ಇದು ಮತದಾರರನ್ನು ಹಾದಿ ತಪ್ಪಿಸುವ ಸಂಚು ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಸಿಎಂ ಸಿದ್ದರಾಮಯ್ಯರಿಂದಲೂ ವಿರೋಧ:

ಚುನಾವಣಾ ಪ್ರಣಾಳಿಕೆಯಲ್ಲಿ ಕೋವಿಡ್‌ ಲಸಿಕೆಯನ್ನು ಕೂಡಾ ನಮೂದಿಸಿರುವುದನ್ನು ಸೂಚ್ಯವಾಗಿ ಟೀಕಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು “ಸರ್ಕಾರದಿಂದ ಉಚಿತ ಕೋವಿಡ್‌ ಲಸಿಕೆ ಪಡೆಯುವ ಘೋಷಣೆಗಾಗಿ ಕನ್ನಡಿಗರು ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕರ್ನಾಟಕ ಬಿಜೆಪಿಯ ಅಧ್ಯಕ್ಷರು ಇದನ್ನು ಖಚಿತಪಡಿಸಬಲ್ಲರೇ?,” ಎಂದು ನಳಿನ್‌ ಕುಮಾರ್‌ ಕಟೀಲ್‌ಗೆ ಪ್ರಶ್ನಿಸಿದ್ದಾರೆ.

“ಅಥವಾ, ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಕೂಡಾ ಒಂದು ಭರವಸೆಯಾಗಿ ನೀಡಲು ಸಿಎಂ ಬಿಎಸ್‌ವೈ ಅವರಿಗೆ ಹೇಳುತ್ತಾರೆಯೇ?,” ಎಂದು ಟ್ವೀಟ್‌ ಮಾಡಿದ್ದಾರೆ.

“ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತರಾಮನ್‌ ಅವರ ಮನವೊಲಿಸಿ, ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದದಲ್ಲಿ ಕೊರೊನಾದಿಂದ ಭೀತಿಗೊಳಗಾಗಿರುವ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ 'ಧಮ್' (ಇದು ನಿಮ್ಮದೇ ಭಾಷೆ) ನಿಮಗಿದೆಯೇ ನಳಿನ್‌ ಕುಮಾರ್‌ ಕಟೀಲ್‌ ಅವರೇ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com