ಉದ್ಯೋಗ ಸೃಷ್ಟಿಯ ಭರವಸೆ ಮೂಲಕ ಬಯಲಾದ ಬಿಜೆಪಿಯ ನಿರ್ಲಜ್ಜ ಅಧಿಕಾರ ರಾಜಕಾರಣ

ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಪ್ರಣಾಳಿಕೆಯು, ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ ಮತ್ತು ಎಷ್ಟಾದರೂ ಸುಳ್ಳು ಭರವಸೆ ನೀಡಲು ಸಿದ್ದವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ.
ಉದ್ಯೋಗ ಸೃಷ್ಟಿಯ ಭರವಸೆ ಮೂಲಕ ಬಯಲಾದ ಬಿಜೆಪಿಯ ನಿರ್ಲಜ್ಜ ಅಧಿಕಾರ ರಾಜಕಾರಣ

ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ ನಂತರ ದೇಶದಲ್ಲಿ ಆರ್ಥಿಕತೆ ಸತತ ಕುಸಿತದ ಹಾದಿಯಲ್ಲೇ ಸಾಗಿದೆ. ಕೋವಿಡ್- 19 ಪೂರ್ವದಲ್ಲೇ ತೀವ್ರ ಕುಸಿತ ದಾಖಲಿಸಿದ್ದ ಆರ್ಥಿಕತೆಯು ಮತ್ತಷ್ಟು ಪ್ರಪಾತಕ್ಕೆ ಕುಸಿದಿದೆ. ಸರ್ಕಾರವೇ ಜಿಡಿಪಿ ಕುಸಿತದ ಪ್ರಮಾಣ ಶೇ.23.5 ರಷ್ಟು ಎಂದು ಅಧಿಕೃತವಾಗಿ ಹೇಳಿದೆ. ಉದ್ಯೋಗ ಸೃಷ್ಟಿಯಾಗುವುದಿರಲಿ, ಇದ್ದಷ್ಟೂ ಉದ್ಯೋಗಗಳು ನಷ್ಟವಾಗಿವೆ. ನಿರುದ್ಯೋಗ ಪ್ರಮಾಣವು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೇ ಗರಿಷ್ಠಮಟ್ಟಕ್ಕೇರಿದೆ. ಈ ನಡುವೆ ಅಕ್ಟೋಬರ್ 28 ರಿಂದ ನವೆಂಬರ್ 10 ರವರೆಗೆ ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ-ಜೆಡಿಯು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಜತಿನ್ ರಾಮ್ ಮಾಂಝಿ ಅವರು ತೀರಾ ಅಲ್ಪವಧಿಗೆ ಮುಖ್ಯಮಂತ್ರಿಯಾಗಿದ್ದರ ಹೊರತಾಗಿ ಕಳೆದ ಒಂದೂವರೆ ದಶಕದಿಂದಲೂ ಜೆಡಿಯು ನಾಯಕ ನಿತಿಷ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದೆ. ಬಿಜಿಪಿಯ ಸುಶೀಲ್ ಕುಮಾರ್ ಮೋದಿ ಈ ಒಂದೂವರೆ ದಶಕದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯು ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ ಮತ್ತು ಎಷ್ಟಾದರೂ ಸುಳ್ಳು ಭರವಸೆ ನೀಡಲು ಸಿದ್ದವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ. ಜತೆಗೆ ಈ ಹದಿನೈದು ವರ್ಷದಲ್ಲಿ ಬಿಹಾರದಲ್ಲಿ ಯಾವ ಅಭಿವೃದ್ಧಿಗಳೂ ಆಗಿಲ್ಲವೆಂಬುದನ್ನು ಇಡೀ ಪ್ರಮಾಣಳಿಕೆಯಲ್ಲಿ ಘೋಷಿಸಿರುವ ಭರವಸೆಗಳೇ ಸಾಕ್ಷಿಯಾದಂತಿವೆ.

ಉದ್ಯೋಗ ಸೃಷ್ಟಿಯ ಭರವಸೆ ಮೂಲಕ ಬಯಲಾದ ಬಿಜೆಪಿಯ ನಿರ್ಲಜ್ಜ ಅಧಿಕಾರ ರಾಜಕಾರಣ
ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

ನಿರ್ಲಜ್ಯತೆಗೊಂದು ಮಿತಿ ಬೇಡವೇ ?

ಈ ಪ್ರಶ್ನೆ ನಮ್ಮದಲ್ಲ, ಎನ್‌ಡಿಎ ಯೇತರ ರಾಜಕೀಯ ಪಕ್ಷಗಳ ಮುಖಂಡರದ್ದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಹರಿಸುವ ಲಕ್ಷಾಂತರ ಮಂದಿಯದ್ದು! ಅಷ್ಟಕ್ಕೂ ಬಿಜೆಪಿ ತೋರಿಸಿದ ನಿರ್ಲಜ್ಜತನ ಯಾವುದು? ಎನ್‌ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬಂದರೆ, ಬಿಹಾರದ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಿದೆ ಎಂಬುದು!

ರಾತ್ರಿ 8 ಗಂಟೆ ಪ್ರೈಮ್ ಟೈಮ್ ನಲ್ಲಿ ಹಲವು ಬಾರಿ ಸುಧೀರ್ಘ ಭಾಷಣ ಮಾಡಿ, ತಟ್ಟೆ, ಲೋಟ, ಜಾಗಟೆ ಬಾರಿಸುವಂತೆ, ಚಪ್ಪಾಳೆ ತಟ್ಟುವಂತೆ, ದೀಪ ಹಚ್ಚುವಂತೆ ಪುಕ್ಕಟ್ಟೆ ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ವಿರುದ್ಧ ಹೋರಾಟಕ್ಕೆ 21 ದಿನ ಬೇಕಾಗುತ್ತದೆ ಎಂದು ಹೇಳಿ ನಗೆಪಾಟಲೀಗಿಡಾಗಿದ್ದರು. 21 ವಾರಗಳಾದ ನಂತರವೂ ಕೋವಿಡ್ ನಿಯಂತ್ರಣಕ್ಕೆ ಬಾರದಿದ್ದಾಗ, ಕೋವಿಡ್ ಬಗ್ಗೆ ಮಾತನಾಡುವುದನ್ನೇ ಬಿಟ್ಟರು. ಪ್ರಧಾನಿ ನರೇಂದ್ರ ಮೋದಿ ವೈಫಲ್ಯಗಳ ಕುರಿತಂತೆ ಪ್ರತಿ ಪಕ್ಷಗಳು ಟೀಕೆ ಮಾಡಿದಾಗ ಕೋವಿಡ್ ಅನ್ನು ರಾಜಕೀಯಕ್ಕೆ ಬಳಸಬಾರದು ಎಂದು ಬಿಜೆಪಿ ನಾಯಕರು ಮುಗಿಬಿದ್ದಿದ್ದರು.

ಉದ್ಯೋಗ ಸೃಷ್ಟಿಯ ಭರವಸೆ ಮೂಲಕ ಬಯಲಾದ ಬಿಜೆಪಿಯ ನಿರ್ಲಜ್ಜ ಅಧಿಕಾರ ರಾಜಕಾರಣ
ಬಿಹಾರ ಚುನಾವಣೆ: ಬಿಜೆಪಿ ನಾಯಕರಿಗೆ ಮಗ್ಗುಲ ಮುಳ್ಳಾದ ಚಿರಾಗ್‌ ಪಾಸ್ವಾನ್‌

ಕೋವಿಡ್ ವಿಚಾರ ರಾಜಕಾರಣಕ್ಕೆ ಬಳಸುವುದು ಅನೈತಿಕ ಎಂಬುದರದಲ್ಲಿ ಎರಡು ಮಾತಿಲ್ಲ. ಆದರೆ, ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಪ್ರಶ್ನಿಸಿದರೆ ಅದು ರಾಜಕಾರಣ ಹೇಗಾಗುತ್ತದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಕೋವಿಡ್ ನಿಯಂತ್ರಣದಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯತೆಯಿಂದಾಗಿ ಸೋಂಕು ಹರಡುವಿಕೆಯಲ್ಲಿ ಭಾರತ ಮೊದಲ ಸ್ಥಾನಕ್ಕೇರಿಬಿಟ್ಟಿದೆ. ಸಾವಿನ ಸಂಖ್ಯೆಯು ಹೆಚ್ಚುತ್ತಿದೆ. ಮೋದಿ ಸಂಪುಟದ ಸಹೋದ್ಯೋಗಿಯೂ ಕೋವಿಡ್ ಗೆ ಬಲಿಯಾಗಿದ್ದಾರೆ. ಈ ಮಾರಿಗೆ ಬಲಿಯಾದ ಜನಪ್ರತಿನಿಧಿಗಳ ಸಂಖ್ಯೆಯೂ ಹೆಚ್ಚಿದೆ. ಜನಸಾಮಾನ್ಯರು ಬಲಿಯಾದುದರ ಲೆಕ್ಕವನ್ನು ಕೇಂದ್ರ ಸರ್ಕಾರ ಪಕ್ಕಾ ಇಟ್ಟಿದಂತಿಲ್ಲ. ಇಂತಹ ಸಂಕಷ್ಟ, ಸಂದಿಗ್ದ ಪರಿಸ್ಥಿತಿಯಲ್ಲಿ ಲಸಿಕೆ ಕಂಡುಹಿಡಿದ ತಕ್ಷಣ ಇಡೀ ದೇಶದ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕಾಗಿರುವುದು ಕೇಂದ್ರ ಸರ್ಕಾರದ ನೈತಿಕ ಕರ್ತವ್ಯ.

ಆದರೆ, ಅಧಿಕಾರ ಗಳಿಸಲು, ಉಳಿಸಿಕೊಳ್ಳಲು ಯಾವ ಮಟ್ಟಕ್ಕೂ ಇಳಿಯಲು ಸಿದ್ದವಾಗಿರುವ ಬಿಜೆಪಿ ಬಿಹಾರದಲ್ಲಿ ಅಧಿಕಾರಕ್ಕೆ ಮರಳಿದರೆ ಬಿಹಾರದ ಜನತೆಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅಧಿಕಾರ ರಾಜಕಾರಣದ ಹಪಾಹಪಿಯಲ್ಲಿರುವ ಬಿಜೆಪಿ ನೈತಿಕತೆಯನ್ನೇ ಮರೆತುಬಿಟ್ಟಂತಿದೆ.

ಉದ್ಯೋಗ ಸೃಷ್ಟಿಯ ಭರವಸೆ ಮೂಲಕ ಬಯಲಾದ ಬಿಜೆಪಿಯ ನಿರ್ಲಜ್ಜ ಅಧಿಕಾರ ರಾಜಕಾರಣ
ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ

ಬಿಜೆಪಿಯ ಮತ್ತೊಂದು ಹಸೀ ಸುಳ್ಳಿನ ಭರವಸೆಯು ಅಧಿಕಾರಕ್ಕಾಗಿ ಯಾವ ಮಟ್ಟದ ಮತ್ತು ಎಷ್ಟಾದರೂ ಸುಳ್ಳು ಹೇಳಲು ಸಿದ್ದವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅದು- ಬಿಹಾರದಲ್ಲಿ 19 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ. ನರೇಂದ್ರ ಮೋದಿ ಪ್ರಧಾನಿಯಾಗುವ ಮುಂಚೆ ಅಂದರೆ, 2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿಯಂತೆ ಮುಂದಿನ ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಲಾಗಿತ್ತು. ಉದ್ಯೋಗ ಸೃಷ್ಟಿಯ ಭರವಸೆಯನ್ನೇ ಮರೆತ ಮೋದಿ ಸರ್ಕಾರವು ಉದ್ಯೋಗಳನ್ನು ನಷ್ಟ ಮಾಡುವ ಆರ್ಥಿಕ ನೀತಿಗಳನ್ನು ಅನುಸರಿಸಿತು. ಕಾರ್ಪೊರೆಟ್ ವಲಯಕ್ಕೆ ಪೂಕವಾಗುವ ಮತ್ತು ತಮ್ಮ ಆಪ್ತ ಕಾರ್ಪೊರೆಟ್ ಕುಳಗಳಿಗೆ ಅನುಕೂಲವಾಗುವ ನೀತಿಗಳನ್ನು ರೂಪಿಸಿ, ಜಾರಿ ಮಾಡಿತು. ದೇಶದಲ್ಲಿ ಕೋವಿಡ್ ಪೂರ್ವ ಕಾಲಘಟ್ಟದಲ್ಲಿ ದೇಶದ ಜನತೆ ಕಳೆದುಕೊಂಡ ಉದ್ಯೋಗಗಳ ಸಂಖ್ಯೆಯೇ ಸುಮಾರು 18 ಕೋಟಿ. ಕೋವಿಡ್ ನಂತರದಲ್ಲಿ ಈ ಸಂಖ್ಯೆ 25 ಕೋಟಿ ದಾಟಿದೆ. ಅಂದರೆ, ದೇಶದಲ್ಲಿನ ದುಡಿಯುವ 70 ಕೋಟಿ ಜನರಲ್ಲಿ ಶೇ.35ರಷ್ಟು ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಮೋದಿ ಸರ್ಕಾರದಲ್ಲಿ ಆಗಿರುವ ಪವಾಡ.

ಉದ್ಯೋಗ ಸೃಷ್ಟಿಯ ಭರವಸೆ ಮೂಲಕ ಬಯಲಾದ ಬಿಜೆಪಿಯ ನಿರ್ಲಜ್ಜ ಅಧಿಕಾರ ರಾಜಕಾರಣ
ಬಿಹಾರ ಚುನಾವಣೆ: ಬಿಜೆಪಿಯಿಂದ ʼಕರೋನಾ ಯುದ್ಧ ಗೆಲ್ಲುತ್ತಿದ್ದೇವೆʼ ಎಂಬ ಸುಳ್ಳು ಪ್ರಚಾರ

ಇಷ್ಟಾದರೂ ಬಿಜೆಪಿ ಈಗ ಬಿಹಾರದಲ್ಲಿ 19 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಬಗ್ಗೆ ಚಕಾರವನ್ನೇ ಎತ್ತದ ಬಿಜೆಪಿ ನಾಯಕರು ಬಿಹಾರದಲ್ಲಿ ಉದ್ಯೋಗ ಸೃಷ್ಟಿ ಮಾಡುವುದಾದರೂ ಹೇಗೆ? ಕೋವಿಡ್ ಸೋಂಕಿನಿಂದಾಗಿ ಸರ್ಕಾರ ಘೋಷಿಸಿದ ನಿರ್ದಯ ಲಾಕ್ ಡೌನ್ ನಿಯಮಗಳಿಂದ ಸಂಕಷ್ಟ ಎದುರಿಸಿದವರ ಪೈಕಿ ಬಿಹಾರದ ವಲಸೆ ಕಾರ್ಮಿಕರ ಸಂಖ್ಯೆ ಬಹುದೊಡ್ಡದು. ಅಂತಹ ಕಾರ್ಮಿಕರು ಬಹುತೇಕ ಬಿಹಾರದಲ್ಲೇ ಇದ್ದಾರೆ. ಮಹಾನಗರಗಳಲ್ಲಿ ಕಟ್ಟಡ ನಿರ್ಮಾಣ ವಲಯಗಳಲ್ಲಿ ಚಟುವಟಿಕೆಗಳು ಆರಂಭವಾಗಿದ್ದರೂ, ಕಾರ್ಮಿಕರ ಕೊರತೆಯಿಂದಾಗಿ ಕುಂಟುತ್ತಾ ಸಾಗಿವೆ. ಬಿಹಾರ ಚುನಾವಣೆ ಮುಗಿಯುವವರೆಗೂ ಈ ಕಾರ್ಮಿಕರು ಅದೇ ರಾಜ್ಯದಲ್ಲಿ ಉಳಿಯುವಂತೆ ಮಾಡಲಾಗಿದೆ. ಬಿಹಾರ ಚುನಾವಣೆ ಮುಗಿದ ನಂತರವಷ್ಟೇ, ಈ ಕಾರ್ಮಿಕರು ಮರಳಿ ಮಹಾ ನಗರಗಳತ್ತ ಬರಲು ಸಾಧ್ಯವಾಗಬಹುದು.

ಉದ್ಯೋಗ ಸೃಷ್ಟಿಯ ಭರವಸೆ ಮೂಲಕ ಬಯಲಾದ ಬಿಜೆಪಿಯ ನಿರ್ಲಜ್ಜ ಅಧಿಕಾರ ರಾಜಕಾರಣ
ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!

ಮಹಿಳೆಯರ ಸಬಲೀಕರಣ, ಆರೋಗ್ಯ ಮೂಲಭೂತ ಸೌಲಭ್ಯಗಳ ಸೃಷ್ಟಿ ಸೇರಿದಂತೆ ಮತ್ತಿತರ ಭರವಸೆಗಳ ಪಟ್ಟಿ ದೊಡ್ಡದಿದೆ. ಆ ಪಟ್ಟಿಯನ್ನು ನೋಡಿದರೆ, ಕಳೆದ 15 ವರ್ಷಗಳಲ್ಲಿ ಸರ್ಕಾರ ನಡೆಸಿದ ಎನ್‌ಡಿಎ ಸಾಧನೆಯಾದರು ಏನು ಎಂಬ ಪ್ರಶ್ನೆಗೆ ಬಿಜೆಪಿ ನಾಯಕರೇ ಉತ್ತರಿಸಬೇಕು.

ಆದರೆ, ಇಲ್ಲಿ ಮುಖ್ಯ ಪ್ರಶ್ನೆ ಇರುವುದು ಅಧಿಕಾರಕ್ಕಾಗಿ ಬಿಜೆಪಿ ಕೋವಿಡ್ ಲಸಿಕೆಯನ್ನು ರಾಜಕಾರಣಕ್ಕೆ ಬಳಸುವ ಮಟ್ಟಕ್ಕೆ ಇಳಿಯುತ್ತಾದಾ ಎಂಬುದು. ಮತ್ತೊಂದು ಪ್ರಶ್ನೆ ಎಂದರೆ, 2 ಕೋಟಿ ಉದ್ಯೋಗ ಭರವಸೆ ನೀಡಿ, ಆರು ವರ್ಷಗಳಲ್ಲಿ 25 ಕೋಟಿ ಉದ್ಯೋಗ ನಷ್ಟ ಮಾಡಿರುವ ಬಿಜೆಪಿ ಮತ್ತೆ ಬಿಹಾರ ಚುನಾವಣೆಯಲ್ಲಿ 19 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆಯಲ್ಲಾ? ಅಧಿಕಾರಕ್ಕಾಗಿ ಈ ಮಟ್ಟದ ಸುಳ್ಳು ಹೇಳಲು ಸಾಧ್ಯವೇ?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com