ಹವಾಮಾನ ವೈಪರೀತ್ಯ: ಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಟ್ರಂಪ್

ನಮಸ್ತೆ ಟ್ರಂಪ್‌ ಕಾರ್ಯಕ್ರಮ ಆಯೋಜಿಸುವಾಗ ಸ್ಲಮ್‌ ಗಳಿಗೆ ಗೋಡೆ ಕಟ್ಟಿಯೂ ಟ್ರಂಪ್‌ ಅನ್ನು ಖುಶಿಪಡಿಸಲು ಮೋದಿಗೆ ಸಾಧ್ಯವಾಗಲಿಲ್ಲ ಎಂದು ಈಗ ಜನರು ಕುಹಕವಾಡುತ್ತಿದ್ದಾರೆ.
ಹವಾಮಾನ ವೈಪರೀತ್ಯ: ಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಟ್ರಂಪ್

ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ಸಲುವಾಗಿ ಭಾರತ, ಚೀನಾ ಮೊದಲಾದ ದೇಶಗಳು ಏನೂ ಕೆಲಸ ಮಾಡುತ್ತಿಲ್ಲವೆಂದು ಡೊನಾಲ್ಡ್‌ ಟ್ರಂಪ್ ಮತ್ತೆ ಆರೋಪ ಮಾಡಿದ್ದಾರೆ.

ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ ಡೊನಾಲ್ಡ್‌ ಟ್ರಂಪ್, ಅಧ್ಯಕ್ಷೀಯ ಚರ್ಚೆಯಲ್ಲಿ ಹವಾಮಾನ ಬದಲಾವಣೆಯನ್ನು ಅಮೇರಿಕಾ ಸರಿಯಾಗಿ ನಿಭಾಯಿಸುತ್ತಿದೆ. ಆದರೆ ಭಾರತ, ಚೀನಾ, ರಷ್ಯಾ ಮೊದಲಾದ ದೇಶಗಳು ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಲು ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಡೆಮಾಕ್ರಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬಿಡೆನ್‌, ಅವರೊಂದಿಗೆ ನಡಸಿದ ಅಧ್ಯಕ್ಷೀಯ ಚರ್ಚೆ ನಡೆಸಿದ ಡೊನಾಲ್ಡ್‌ ಟ್ರಂಪ್‌, ಭಾರತ, ರಷ್ಯಾ, ಚೀನಾವನ್ನು ಗಮನಿಸಿ. ಅಲ್ಲಿನ ಗಾಳಿ ಹೊಲಸಾಗಿದೆ. ಅವರು ಹವಾಮಾನದ ಕುರಿತು ಕಾಳಜಿ ವಹಿಸುವುದಿಲ್ಲ ಎಂದಿದ್ದಾರೆ.

ಜಾಗತಿಕ ಮಾಲಿನ್ಯಕ್ಕೆ ಭಾರತ, ರಷ್ಯಾ, ಚೀನಾ ದೇಶಗಳು ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದು ಈ ಹಿಂದೆಯೂ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು.

ಟ್ರಂಪ್‌ ಈ ಮಾತು ಉಚ್ಚರಿಸುತ್ತಿದ್ದಂತೆಯೇ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಮುಖ್ಯವಾಗಿ ಭಾರತದಲ್ಲಿ ನರೇಂದ್ರ ಮೋದಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ. ನರೇಂದ್ರ ಮೋದಿಯ ಗೆಳೆಯ ಟ್ರಂಪ್‌, ತನ್ನ ದೇಶದ ಬಗ್ಗೆ ಅವಮಾನಕಾರಿ ಮಾತನ್ನಾಡಿದ್ದಾರೆ. ನರೇಂದ್ರ ಮೋದಿ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆಂದು ಪ್ರಶ್ನೆಗಳು ಎದ್ದಿವೆ.

ಪ್ರತಿಪಕ್ಷ ಕಾಂಗ್ರೆಸ್‌ ನ ಹಿರಿಯ ನಾಯಕ ಕಪಿಲ್‌ ಸಿಬಲ್ ಮೊದಲಾದವರು ಟ್ರಂಪ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ರಾಜಕೀಯ ವಿಶ್ಲೇಷಣೆಕಾರ ತೆಹ್ಸೀನ್‌ ಪೂನವಾಲ, ಟ್ರಂಪ್‌ ಹೇಳಿಕೆಗೆ ಪ್ರಧಾನಿ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ರಾಜಕೀಯ ನಾಯಕರು, ಪತ್ರಕರ್ತರು ಮಾತ್ರವಲ್ಲದೆ ಸಾಮಾಜಿಕ ಬಳಕೆದಾರರೂ ಟ್ರಂಪ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ನಮಸ್ತೆ ಟ್ರಂಪ್‌ ಕಾರ್ಯಕ್ರಮ ಆಯೋಜಿಸುವಾಗ ಸ್ಲಮ್‌ ಗಳಿಗೆ ಗೋಡೆ ಕಟ್ಟಿಯೂ ಟ್ರಂಪ್‌ ಅನ್ನು ಖುಶಿಪಡಿಸಲು ಮೋದಿಗೆ ಸಾಧ್ಯವಾಗಲಿಲ್ಲ ಎಂದು ಕುಹಕವಾಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com