19 ಲಕ್ಷ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರಿಗೂ ಕರೋನಾ ಲಸಿಕೆ; ಬಿಹಾರ ಬಿಜೆಪಿಯ ಭರವಸೆ

ಕೇಂದ್ರ ಅರ್ಥ ಮಂತ್ರಿ ನಿರ್ಮಲಾ ಸೀತರಾಮನ್‌ ನಾವು ಗೆದ್ದರೆ ಬಿಹಾರದ ಪ್ರತಿ ಜನರಿಗೂ ಉಚಿತವಾಗಿ ಕೋವಿಡ್‌ ಲಸಿಕೆ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ
19 ಲಕ್ಷ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರಿಗೂ ಕರೋನಾ ಲಸಿಕೆ; ಬಿಹಾರ ಬಿಜೆಪಿಯ ಭರವಸೆ

ಮುಂದಿನ ವಾರ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆಗೊಳಿಸಿರುವ ಆಡಳಿತರೂಢ ಬಿಜೆಪಿ 19 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಪ್ರತಿಯೊಬ್ಬರಿಗೂ ಉಚಿತ ಕರೋನಾ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ.

ವಿರೋಧಪಕ್ಷ ನಾಯಕ ತೇಜಸ್ವಿ ಯಾದವ್‌ ನೀಡಿದ್ದ ಸರ್ಕಾರಿ ಕ್ಷೇತ್ರದಲ್ಲಿ 10 ಲಕ್ಷ ಉದ್ಯೋಗಗಳ ಭರವಸೆಯ ಮೌಲ್ಯವನ್ನು ಗೌಣಗೊಳಿಸಲೇ ಬಿಜೆಪಿ 19 ಲಕ್ಷ ಉದ್ಯೋಗ ಸೃಷ್ಟಿಯ ಕಲ್ಪನೆಯೊಂದಿಗೆ ರಂಗಕ್ಕೆ ಧುಮುಕಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ʼಉದ್ಯೋಗ ಸೃಷ್ಟಿʼಯು ಬಿಹಾರ ಚುನಾವಣೆಯ ಪ್ರಚಾರದಲ್ಲಿ ಮುಖ್ಯ ಪಾತ್ರ ವಹಿಸಿರುವುದು ವಿಶೇಷ, ಲಾಕ್‌ಡೌನ್‌ ಹಿನ್ನಲೆಯಲ್ಲಿ ಬಿಹಾರದ ಅನೇಕ ವಲಸೆ ಕಾರ್ಮಿಕರು ತಮ್ಮ ಜೀವನ ಭದ್ರತೆ ಕಳೆದುಕೊಂಡು ತವರಿಗೆ ಮರಳಿರುವುದು ಬಿಹಾರದ ಚುನಾವಣೆಯಲ್ಲಿ ʼಉದ್ಯೋಗ ಸೃಷ್ಟಿʼಯ ಭರವಸೆಗಳು ಹೆಚ್ಚು ಕೇಳಿ ಬರಲು ಕಾರಣವೆಂದೂ ಹೆಳಲಾಗುತ್ತಿದೆ. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿರುವುದಕ್ಕೆ ನಿತೀಶ್‌ ಕುಮಾರ್‌ ಸರ್ಕಾರವನ್ನು ಚುನಾವಣಾ ಪ್ರಚಾರ ಸಭೆಯಲ್ಲಿ ಆರ್‌ಜೆಡಿ ಪಕ್ಷ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಭರವಸೆ ನೀಡಿರುವ 19 ಲಕ್ಷ ಉದ್ಯೋಗಗಳಲ್ಲಿ 3 ರಿಂದ 4 ಲಕ್ಷ ಸರ್ಕಾರಿ ಶಿಕ್ಷಕರಿದ್ದು, ಆರೋಗ್ಯ ಕ್ಷೇತ್ರದಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದಾರೆ. ಐಟಿ ಕೇಂದ್ರ ಹಾಗೂ ಕೃಷಿ ಕೇಂದ್ರ ರಚಿಸಿ ಉಳಿದ ಉದ್ಯೋಗಗಲನ್ನು ಸೃಷ್ಟಿಸಲಾಗುವುದು ಎಂದು ಬಿಹಾರ ಬಿಜೆಪಿ ಮುಖ್ಯಸ್ಥ ಸಂಜಯ್‌ ಜೈಸ್ವಾಲ್‌ ಪ್ರಣಾಳಿಕೆ ಬಿಡುಗಡೆ ಸಂಧರ್ಭದಲ್ಲಿ ಹೇಳಿದ್ದಾರೆ.

19 ಲಕ್ಷ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರಿಗೂ ಕರೋನಾ ಲಸಿಕೆ; ಬಿಹಾರ ಬಿಜೆಪಿಯ ಭರವಸೆ
ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

ಕೋವಿಡ್‌ ಲಸಿಕೆ ತರಲು ವಿಶ್ವದಾದ್ಯಂತ ವಿಜ್ಞಾನಿಗಳು, ತಜ್ಞರು ಅವಿರತ ಶ್ರಮ ಪಡುತ್ತಿದ್ದಂತೆಯೇ ಕೇಂದ್ರ ಅರ್ಥ ಮಂತ್ರಿ ನಿರ್ಮಲಾ ಸೀತರಾಮನ್‌ ನಾವು ಗೆದ್ದರೆ ಬಿಹಾರದ ಪ್ರತಿ ಜನರಿಗೂ ಉಚಿತವಾಗಿ ಕೋವಿಡ್‌ ಲಸಿಕೆ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ. ಆ ಮೂಲಕ ಕರೋನಾ ಲಸಿಕೆಯನ್ನು ಭರವಸೆ ನೀಡಿದ ಮೊದಲ ಪ್ರಣಾಳಿಕೆಯಾಗಿ ಬಿಜೆಪಿ ಪ್ರಣಾಳಿಕೆ ಹೊರಬಂದಿದೆ.

ಬಿಜೆಪಿಯ ಪ್ರಮುಖ ಭರವಸೆಗಳು

· 19 ಲಕ್ಷ ಉದ್ಯೋಗ ಸೃಷ್ಟಿ.

· ಬಿಹಾರದ ಎಲ್ಲರಿಗೂ ಉಚಿತ ಕರೋನಾ ಲಸಿಕೆ.

· 3 ಲಕ್ಷ ಶಿಕ್ಷಕರ ನೇಮಕಾತಿ.

· ಬಿಹಾರವನ್ನು ಐಟಿ ಕೇಂದ್ರವನ್ನಾಗಿಸಿ 10 ಲಕ್ಷ ಉದ್ಯೋಗ ಸೃಷ್ಟಿ.

· ಒಂದು ಕೋಟಿ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವುದು.

· ಆರೋಗ್ಯ ಕ್ಷೇತ್ರದಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿ.

· 30 ಲಕ್ಷ ಜನರಿಗೆ ಪಕ್ಕಾ ಮನೆಗಳು.

· 9 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ʼಟ್ಯಾಬ್‌ʼ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com