ರಾಜ್ಯಪಾಲರೊಂದಿಗೆ ಲವ್ ಜಿಹಾದ್ ಕುರಿತು ಚರ್ಚಿಸಿ ವಿವಾದ ಸೃಷ್ಟಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

ಲವ್‌ ಜಿಹಾದ್‌ ಅನ್ನುವುದು ಅಸ್ತಿತ್ವದಲ್ಲಿ ಇಲ್ಲವೆಂದು ಬಿಜೆಪಿ ನೇತೃತ್ವದ ಸರ್ಕಾರವೇ ಸಂಸತ್ತಿನಲ್ಲಿ ಈ ಹಿಂದೆ ತಿಳಿಸಿತ್ತು.
ರಾಜ್ಯಪಾಲರೊಂದಿಗೆ ಲವ್ ಜಿಹಾದ್ ಕುರಿತು ಚರ್ಚಿಸಿ ವಿವಾದ ಸೃಷ್ಟಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಜೊತೆಗೆ ನಡೆಸಿದ ಲವ್‌ ಜಿಹಾದ್‌ ಕುರಿತ ಚರ್ಚೆ ಭಾರೀ ವಿವಾದ ಸೃಷ್ಟಿಸಿದೆ.

ಮಂಗಳವಾರ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿದ ರೇಖಾ ಶರ್ಮ ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್‌ ಜಿಹಾದ್‌ ಕುರಿತು ಚರ್ಚಿಸಿದ್ದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಹಾಕಿತ್ತು, ಇದರ ಬೆನ್ನಿಗೆ ಆಕ್ರೋಶಗಳು ಎದ್ದಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮುಸ್ಲಿಮ್‌ ಗಂಡಸರು ಹಾಗೂ ಹಿಂದೂ ಮಹಿಳೆಯರ ನಡುವಿನ ಪ್ರೇಮ, ವೈವಾಹಿಕ ಸಂಬಂಧವನ್ನು ʼಲವ್‌ ಜಿಹಾದ್‌ʼ ಎಂದು ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಮುಸ್ಲಿಮರ ವಿರುದ್ಧ ಅಪಪ್ರಚಾರ ನಡೆಸುತ್ತಿದೆ.

ಲವ್‌ ಜಿಹಾದ್‌ ಅನ್ನುವುದು ಅಸ್ತಿತ್ವದಲ್ಲಿ ಇಲ್ಲವೆಂದು ಬಿಜೆಪಿ ನೇತೃತ್ವದ ಸರ್ಕಾರವೇ ಸಂಸತ್ತಿನಲ್ಲಿ ಈ ಹಿಂದೆ ತಿಳಿಸಿತ್ತು. ಅದಾಗ್ಯೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಒಂದು ಧರ್ಮದ ಜನರ ವಿರುದ್ಧ ನಡೆಸುವ ಕಪೋಲಕಲ್ಪಿತ ಅಪಪ್ರಚಾರವನ್ನು ಪ್ರಚುರಪಡಿಸಲು ತೊಡಗಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ತನಿಷ್ಕ್‌ ಆಭರಣದ ಜಾಹಿರಾತನ್ನು ಬಲಪಂಥೀಯ ಸಂಘಟನೆಗಳು ಲವ್‌ ಜಿಹಾದ್‌ ಗೆ ಪ್ರೇರೇಪಿಸುತ್ತಿದೆ ಎಂದು ಹುಯಿಲೆಬ್ಬಿಸಿದ ಬೆನ್ನಲ್ಲೇ ರೇಖಾ ಶರ್ಮರ ಈ ಹೇಳಿಕೆಯು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ರೇಖಾ ಶರ್ಮಾರ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ರೇಖಾ ಶರ್ಮ ಈ ಹಿಂದೆ ಹಾಕಿದ್ದ ಅವಹೇಳನಕಾರಿ ಟ್ವೀಟ್‌ಗಳನ್ನು ಟ್ವಿಟರ್‌ ಬಳಕೆದಾರರು ಮತ್ತೆ ಪೋಸ್ಟ್‌ ಹಾಕಿ ರೇಖಾ ಶರ್ಮಾ ಅವರ ಮನಸ್ಥಿತಿಯನ್ನು ಹೊರಹಾಕಿದ್ದಾರೆ.

ಈ ಹಿಂದೆ ಸ್ತ್ರೀ ವಿರೋಧಿ ಟ್ವೀಟ್‌ಗಳನ್ನು ರೇಖಾ ಶರ್ಮಾ ಹಾಕಿದ್ದರು. ಇಂತಹ ಒಬ್ಬ ಮಹಿಳೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಆಗುವುದು ನಾಚಿಕೆಗೇಡು, ಅವರು ತಕ್ಷಣವೇ ರಾಜಿನಾಮೆ ನೀಡಬೇಕು ಹಲವಾರು ಸಾಮಾಜಿಕ ಬಳಕೆದಾರರು ಆಗ್ರಹಿಸಿದ್ದಾರೆ.

ರೇಖಾ ಶರ್ಮಾ ರನ್ನು ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಕೆಲವು ಟ್ವೀಟ್‌ಗಳು

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com